Cooking oil Prices Hike: ಅಡುಗೆ ಎಣ್ಣೆ ಬೆಲೆ ಏರಿಕೆ ತೈಲ ಕಂಪನಿಗೆ ಕೇಂದ್ರ ಸರ್ಕಾರ ವಾರ್ನಿಂಗ್
ದೇಶದಲ್ಲಿ ಏಕಾಏಕಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದ್ದು, ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಯು ದಿಢೀರ್ ಆಗಿ 15ರೂಪಾಯಿ ಯಿಂದ 25 ರೂಪಾಯಿಯ ವರೆಗೆ ಏರಿಕೆಯಾಗಿದೆ. ಕಳೆದ 10 ದಿನಗಳಿಂದ ಕರ್ನಾಟಕದಲ್ಲೂ ಸಣ್ಣಗೆ ಅಡುಗೆ ಎಣ್ಣೆಗಳ ಬೆಲೆ ಹೆಚ್ಚಳವಾಗಿದ್ದು, ಈ ಬೆಲೆ ಏರಿಕೆ ಜನರ ಜೇಬು ಸುಡುತ್ತಿದೆ. ಇದೀಗ ಕೇಂದ್ರ ಸರ್ಕಾರವು ಅಡುಗೆ ಎಣ್ಣೆ ಬೆಲೆ ಏರಿಕೆ ಮಾಡುತ್ತಿರುವ ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಕಸ್ಟಮ್ಸ್ ಸುಂಕ (ಆಮದು ಸುಂಕ) ಹೆಚ್ಚಳ ಮಾಡಲಾಗಿದೆ. ಹೀಗಾಗಿ, ಅಡುಗೆ ಎಣ್ಣೆ ಬೆಲೆಯನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಖಾದ್ಯ ತೈಲ ಕಂಪನಿಗಳು ಹೇಳಿವೆ. ಆದರೆ, ಕೇಂದ್ರ ಸರ್ಕಾರವು ಮೊದಲು ಕಸ್ಟಮ್ಸ್ ಸುಂಕ ಕಡಿಮೆ ಇದ್ದಾಗ ಆಮದು ಮಾಡಿಕೊಂಡು ಇಟ್ಟುಕೊಂಡಿದ್ದೀರಲ್ಲ ಆ 30 ಲಕ್ಷ ಟನ್ ಪ್ರಮಾಣದ ಖಾದ್ಯ ತೈಲ ನಿಮ್ಮ ಬಳಿ ದಾಸ್ತನು ಇದೆ. ಇದನ್ನು ಬಳಸಿಕೊಳ್ಳಬಹುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆಯನ್ನು ಹೆಚ್ಚಳ ಮಾಡಬಾರದು ಎಂದು ಹೇಳಿದೆ. ಈ ಹಿಂದೆ ಕೇಂದ್ರ ಸರ್ಕಾರವು ಕಡಿಮೆ ಮೊತ್ತದ ಕಸ್ಟಮ್ಸ್ ಸುಂಕವನ್ನು ವಿಧಿಸುತ್ತಿತ್ತು.

ಈ ರೀತಿ ಕಡಿಮೆ ಶುಲ್ಕ ವಿಧಿಸುವಾಗ ಕಚ್ಚಾ ತೈಲವನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಅದನ್ನು ಬಳಸಬೇಕು. ಇನ್ನು ಕೇಂದ್ರ ಸರ್ಕಾರವು ಕಳೆದ ವಾರವಷ್ಟೇ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಚ್ಚಾ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ, ತಾಳೆ ಮತ್ತು ಸೋಯಾಬಿನ್ ಎಣ್ಣೆಗಳ ಮೇಲಿನ ಶುಲ್ಕವನ್ನು ಹೆಚ್ಚಳ ಮಾಡಿದೆ. ಇದರ ಬೆನ್ನಲ್ಲೇ ತೈಲ ಕಂಪನಿಗಳು ಎಣ್ಣೆ ಬೆಲೆಯನ್ನು ಸಣ್ಣಗೆ ಹೆಚ್ಚಿಗೆ ಮಾಡಿವೆ. ಇದೀಗ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಈ ಸೂಚನೆ ನೀಡಿದೆ.
ಇರುವ ದಾಸ್ತಾನು ಒಂದು ತಿಂಗಳು ಬಳಸಬಹುದು
ಇನ್ನು ಈಗಾಗಲೇ ತೈಲ ಕಂಪನಿಗಳ ಬಳಿ ಇರುವ ತೈಲ ದಾಸ್ತಾನನ್ನು ಮುಂದಿನ 40ರಿಂದ 45 ದಿನಗಳ ವರೆಗೆ ಬಳಸಬಹುದು. ಹೀಗಾಗಿ, ನೀವು ಈಗ ಬೆಲೆ ಏರಿಕೆ ಮಾಡಬೇಡಿ. ಇರುವ ದಾಸ್ತನನ್ನೇ ಬಳಸಿಕೊಳ್ಳಿ ಎಂದು ಕೇಂದ್ರ ಸರ್ಕಾರ ಹೇಳಿರುವುದಾಗಿ ವರದಿಯಾಗಿದೆ. ಇನ್ನು ಕೆಲವು ಕಂಪನಿಗಳು ನಮ್ಮ ಬಳಿ ದಾಸ್ತಾನು ಇರುವ ಎಣ್ಣೆ ಮುಗಿಯುವವರೆಗೆ ಈಗ ಇರುವ ಬೆಲೆಯಲ್ಲೇ ಅಡುಗೆ ಎಣ್ಣೆಯನ್ನು ಮಾರಾಟ ಮಾಡುತ್ತೇವೆ. ನಂತರ ಮುಂದಿನ ತೀರ್ಮಾನವನ್ನು ಸಂಘದ ಸದಸ್ಯರು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಯಾವ ಕಾರಣಕ್ಕೆ ಅಡುಗೆ ಎಣ್ಣೆ ಬೆಲೆ ಏರಿಕೆ ?
ಅಡುಗೆ ಎಣ್ಣೆ ಬೆಲೆ ಹೆಚ್ಚಳ ಮಾಡಬೇಡಿ ಎಂದು ಇದೀಗ ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತಿದೆಯಾದರೂ, ಈ ರೀತಿ ಏಕಾಏಕಿ ಹೆಚ್ಚಳವಾಗುವುದಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವೂ ಕಾರಣವಾಗಿದೆ. ಕೇಂದ್ರ ಸರ್ಕಾರವು ಅಡುಗೆ ಎಣ್ಣೆಯ ಆಮದು ಸುಂಕವನ್ನು ಶೇಕಡ 20ರಷ್ಟು ಹೆಚ್ಚಳ ಮಾಡಿತ್ತು. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರದ ಈ ಕ್ರಮದ ಬೆನ್ನಲ್ಲೇ ತೈಲ ಕಂಪನಿಗಳು ಅಡುಗೆ ಎಣ್ಣೆ ಬೆಲೆಯನ್ನು ಹೆಚ್ಚಳ ಮಾಡಿವೆ ಎಂದು ಹೇಳಲಾಗಿದೆ. ಇನ್ನು ಅಡುಗೆ ಎಣ್ಣೆಯನ್ನು ಸಹ ಕೇಂದ್ರ ಸರ್ಕಾರ ಈಗಾಗಲೇ ಜಿಎಸ್‌ಟಿ ವ್ಯಾಪಿಗೆ ಒಳಪಡಿಸಿತ್ತು. ಇದರ ನಡುವೆ ಆಮದು ಸುಂಕ ಹೆಚ್ಚಳವಾಗಿದೆ. ಹೀಗಾಗಿ, ಅನಿವಾರ್ಯವಾಗಿ ಬೆಲೆ ಏರಿಕೆ ಆಗಿದೆ ಎಂದು ಹೇಳಲಾಗಿದೆ.












Click it and Unblock the Notifications