BPL Card: ಬಿಪಿಎಲ್ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್!
BPL Card: ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್‌ಗಳನ್ನು ಬಡತನ ರೇಖೆಗಿಂತ ಕೊಡಲಾಗುತ್ತದೆ. ಇದಕ್ಕೆ ಬರೀ ರೇಷನ್ ಅಷ್ಟೇ ಅಲ್ಲದೆ, ಆರೋಗ್ಯ ಸೇವೆ ಸೇರಿದಂತೆ ಸರ್ಕಾರದಿಂದ ಹಲವು ಸೌಲಭ್ಯಗಳು ಕೂಡ ಸಿಗಲಿವೆ. ಆದರೆ, ಇದೀಗ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಹಾಗಾದ್ರೆ, ಕೇಂದ್ರ ತೆಗೆದುಕೊಂಡ ನಿರ್ಧಾರ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದಲ್ಲಿ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆ ಹೆಚ್ಚಾಗುತ್ತಲಿದ್ದು, ಈ ಕಾರ್ಡನ್ನು ಬರೀ ಅರ್ಹರಲ್ಲದೆ, ಅನರ್ಹರು ಕೂಡ ಹೊಂದಿದ್ದಾರೆ ಎನ್ನುವ ಆರೋಪ ಮೊದಲಿನಿಂದಲೂ ಕೇಳಿಬರುತ್ತಿವೆ. ಇದೀಗ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಬಿಗ್ ಶಾಕ್‌ವೊಂದು ಎದುರಾಗಿದೆ.

ಸರ್ಕಾರ ಒಟ್ಟು 1.17 ಕೋಟಿ ಜನರ ಬಿಪಿಎಲ್ ಕಾರ್ಡ್ ರದ್ದುಪಡಿಸಲು ನಿರ್ಧರಿಸಿದೆ. ದೇಶದಲ್ಲಿ ಒಟ್ಟು 76.10 ಕೋಟಿ ಜನರು ಬಿಪಿಎಲ್ ಕಾರ್ಡ್ ಹೊಂದ್ದು, ಇದು ಭಾರತದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಅಕ್ರಮ ದಾಖಲೆ ಸೃಷ್ಟಿಸಿ ಪಡೆದಂತಹವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದಪಡಿಸಲು ಮುಂದಾಗಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಉಚಿತ ಧಾನ್ಯಗಳಂತಹ ಪ್ರಯೋಜನಗಳಿಗೆ ಅರ್ಹರಲ್ಲದ ಪಡಿತರ ಚೀಟಿ ಹೊಂದಿರುವವರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಂತೆಯೇ ಈ ಪಟ್ಟಿಯಲ್ಲಿ ಸುಮಾರು 1.17 ಕೋಟಿ ಜನರಿದ್ದಾರೆ ಎಂದು ಎಂದು ತಿಳಿದುಬಂದಿದ್ದು, ಇವರಿಗೆಲ್ಲಾ ಶಾಕ್ ಕೊಡಲು ನಿರ್ಧರಿಸಿದೆ. ಇವರೆಲ್ಲರ ಬಳಿಯಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವ ಮಹತ್ವದ ಕಾರ್ಯಕ್ಕೆ ಕೈಹಾಕಿದೆ.
ಇದೀಗ ಬಿಪಿಎಲ್ ಕಾರ್ಡ್‌ನಿಂದ ಹೊರಬೀಳುವವರೆಲ್ಲರೂ ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿರುವವರು ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು ಅಥವಾ ಖಾಸಗಿ ಕಂಪನಿಗಳಲ್ಲಿ ನಿರ್ದೇಶಕರು ಆಗಿರುವವರಾಗಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಮುಂದಿನ ತಿಂಗಳು ಸೆಪ್ಟೆಂಬರ್ 30ರ ಒಳಗೆ ಅನರ್ಹ ಕಾರ್ಡ್ ಹೊಂದಿರುವವರನ್ನು ಬಿಪಿಎಲ್ ಪಟ್ಟಿಯಿಂದ ಕಿತ್ತು ಹಾಕಲು ಅಗತ್ಯ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಡಿತರ ಚೀಟಿದಾರರ ವಿವರಗಳನ್ನು ವಿವಿಧ ಸರ್ಕಾರಿ ದತ್ತಾಂಶ ಮೂಲಗಳೊಂದಿಗೆ ಹೊಂದಿಸುವ ಮೂಲಕ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಆದಾಯ ತೆರಿಗೆ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂತಾದ ಇಲಾಖೆಗಳ ದತ್ತಾಂಶಗಳು ಸೇರಿವೆ.
ಇದರಂತೆಯೇ 1.17 ಕೋಟಿ ಜನರಲ್ಲಿ 94.71 ಲಕ್ಷ ಪಡಿತರ ಚೀಟಿದಾರರು ಆದಾಯ ತೆರಿಗೆ ಪಾವತಿದಾರು ಆಗಿದ್ದು, 17.51 ಲಕ್ಷ ಸ್ವಂತ ನಾಲ್ಕು ಚಕ್ರದ ವಾಹನಗಳು ಮತ್ತು 5.31 ಲಕ್ಷ ಜನರು ಕಂಪನಿಗಳಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಸುವವರು ಆಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಈ ದತ್ತಾಂಶಗಳನ್ನು ಆಧರಿಸಿಯೇ ರಾಜ್ಯಗಳು ಅನರ್ಹರನ್ನು ಬಿಪಿಎಲ್ ಪಟ್ಟಿಯೊಂದ ತೆಗೆದುಹಾಕಲು ಸಾಧ್ಯ ಆಗುತ್ತದೆ. ಇದರಿಂದ ಬಿಪಿಎಲ್ ಕಾರ್ಡ್ಗಾಗಿ ಕಾಯುತ್ತಿರವ ನಿಜವಾದ ಬಡ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಆಗಸ್ಟ್ 19ರ ವರೆಗೆ 19.17 ಕೋಟಿ ಪಡಿತರ ಚೀಟಿಗಳನ್ನು ನೀಡಲಾಗಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 76.10 ಕೋಟಿ ಫಲಾನುಭವಿಗಳು ಒಳಗೊಂಡಿದ್ದಾರೆ. ಅದರಂತೆಯೇ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು, ವಾರ್ಷಿಕ 1 ಲಕ್ಷ ರೂಪಾಯಿಗಿಂತ ಅಧಿಕ ಆದಾಯ ಹೊಂದಿರುವ ಕುಟುಂಬಗಳು, ನಾಲ್ಕು ಚಕ್ರದ ವಾಹನ ಮಾಲೀಕರು ಮತ್ತು ತೆರಿಗೆದಾರರು ಉಚಿತ ಆಹಾರ ಧಾನ್ಯಗಳಿಗೆ ಅರ್ಹರಲ್ಲ. ಇದನ್ನು ಆಧರಿಸಿಯೇ ಕೇಂದ್ರ ಸರ್ಕಾರ ಜುಲೈ 8 ರಂದು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಲಹೆಗಾರರಿಗೆ ಈ ಬಗ್ಗೆ ಪತ್ರ ಬರೆದು ಅನರ್ಹರ ಬಳಿಯಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಸೂಚನೆ ನೀಡಿದೆ. ಈಗಾಗಲೇ ಕರ್ನಾಟಕ ಸೇರಿದಂತೆ ಬಹುತೇ ರಾಜ್ಯಗಳಲ್ಲಿ ಈ ಮಹತ್ವದ ಕಾರ್ಯ ಆರಂಭವಾಗಿದೆ.












Click it and Unblock the Notifications