ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಾಲಿ ಫೋಗಟ್ ಹತ್ಯೆ ಕೇಸ್: ಎಫ್ಐಆರ್ ದಾಖಲಿಸಿದ ಸಿಬಿಐ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 13: ಸೋನಾಲಿ ಫೋಗಟ್ ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ಈಗಾಗಲೇ ಅಧಿಸೂಚನೆ ಹೊರಡಿಸಿದೆ. ತನಿಖಾ ಸಂಸ್ಥೆಯು ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಕೇಸ್ ಅನ್ನು ಸಿಬಿಐ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪತ್ರ ಬರೆದ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವೆ.

ಸೋನಾಲಿ ಫೋಗಟ್ ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಶಿಫಾರಸುಸೋನಾಲಿ ಫೋಗಟ್ ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಶಿಫಾರಸು

ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್, ಕಳೆದ ಆಗಸ್ಟ್ 22ರ ಮಧ್ಯರಾತ್ರಿ ಗೋವಾದಲ್ಲಿ ನಿಧನರಾಗಿದ್ದು, ಅವರ ಸಾವನ್ನು ಕೊಲೆ ಎಂದು ಶಂಕಿಸಲಾಗಿದೆ. ಅವರ ಶವಪರೀಕ್ಷೆ ಸಂದರ್ಭದಲ್ಲಿ ಆಕೆಯ ದೇಹದ ಮೇಲೆ ಅನೇಕ 'ಮೊಂಡಾದ ಗಾಯಗಳು' ಪತ್ತೆಯಾಗಿವೆ. ಫೋಗಟ್ ಅನ್ನು "ಅವಳ ಇಬ್ಬರು ಸಹಚರರು ಬಲವಂತವಾಗಿ ಮಾದಕ ದ್ರವ್ಯ ಸೇವಿಸುವಂತೆ ಒತ್ತಾಯಿಸಿದ್ದರು," ಎಂದು ಗೋವಾ ಪೊಲೀಸರು ಹೇಳಿದ್ದಾರೆ.

https://kannada.oneindia.com/jobs/ksp-recruitment-2022-apply-online-for-3484-police-constable-car-dar-posts-268163.html

ಇದುವರೆಗೂ ಐವರು ಆರೋಪಿಗಳ ಬಂಧನ:

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಆತನ ಸಹಚರ ಸುಖ್ವಿಂದರ್ ಸಿಂಗ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇದಲ್ಲದೆ, ಫೋಗಟ್ ಸಾವಿಗೂ ಕೆಲ ಗಂಟೆಗಳ ಮೊದಲು ಪಾರ್ಟಿ ಮಾಡುತ್ತಿದ್ದ ಐಕಾನಿಕ್ ಕರ್ಲೀಸ್‌ನ ಮಾಲೀಕ ಎಡ್ವಿನ್ ನೂನ್ಸ್ ಮತ್ತು ದತ್ತಪ್ರಸಾದ್ ಗಾಂವ್ಕರ್ ಹಾಗೂ ರಾಮದಾಸ್ ಮಾಂಡ್ರೇಕರ್ ಅನ್ನು ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಮೂಲಗಳ ಪ್ರಕಾರ, ಸಿಬಿಐ ಇದೀಗ ಗೋವಾ ಪೊಲೀಸರ ಪ್ರಕರಣಕ್ಕೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್), ಕೇಸ್ ಡೈರಿ, ಹೇಳಿಕೆಗಳು ಮತ್ತು ಇತರ ದಾಖಲೆಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಇದರ ಮಧ್ಯೆ ಗೋವಾ ನ್ಯಾಯಾಲಯವು ಆರೋಪಿಗಳಾದ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರನ್ನು 13 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಕರ್ಲೀಸ್ ರೆಸ್ಟೋರೆಂಟ್ ನಲ್ಲಿ ಡ್ರಗ್ಸ್ ಪತ್ತೆ:

ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಉಲ್ಲಂಘನೆಗಾಗಿ ಫೋಗಟ್‌ಗೆ ಆಕೆಯ ಸಹಾಯಕರು ಮಾದಕ ದ್ರವ್ಯ ಕೊಟ್ಟಿದ್ದಾರೆ ಎಂದು ಹೇಳಲಾದ ರೆಸ್ಟೋರೆಂಟ್ ಅನ್ನು ಗೋವಾ ಸರ್ಕಾರ ಕೆಡವಲು ಪ್ರಾರಂಭಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಹೋಟೆಲ್ ನೆಲಸಮಗೊಳಿಸುವುದಕ್ಕೆ ತಡೆಯಾಜ್ಞೆ ನೀಡಿದೆ. ಆದರೆ ಅಧಿಕಾರಿಗಳಿಂದ ಮುಂದಿನ ಆದೇಶದವರೆಗೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಮಾಲೀಕರಿಗೆ ನಿರ್ದೇಶನ ನೀಡಿದೆ.

ಸೋನಾಲಿ ಫೋಗಟ್ ಸಾವಿನ ನಂತರ ಕರ್ಲೀಸ್‌ನಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ರೆಸ್ಟೋರೆಂಟ್‌ನ ಮಾಲೀಕ ಎಡ್ವಿನ್ ನೂನ್ಸ್ ಪ್ರಸ್ತುತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ನುನ್ಸ್ ಕರ್ಲೀಸ್‌ಗೆ ಭೇಟಿ ನೀಡುವಂತಿಲ್ಲ. ಗೋವಾದಿಂದ ಹೊರಡುವ ಮೊದಲು ಅನುಮತಿ ಪಡೆಯಬೇಕು ಎಂದು ನ್ಯಾಯಾಲಯ ಸೂಚನೆ ಕೊಟ್ಟಿದೆ.

English summary
Central Bureau of Investigation filed FIR over Sonali Phogat murder case. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X