ಸೋನಿಯಾ ಅಣತಿಯಂತೆ ನಡೆಯುತ್ತಿದ್ದ ಸೆನ್ಸಾರ್ ಮುಖ್ಯಸ್ಥೆ?

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸೆನ್ಸಾರ್ ಮಂಡಳಿಗೆ ಪದಾಧಿಕಾರಿಗಳನ್ನು ನೇಮಿಸಿರಲಿಲ್ಲ. ಏಪ್ರಿಲ್ 2014ರಂದು ಲೀಲಾ ಸಾಮ್ಸನ್ ಮತ್ತು ಇತರ ಅಧಿಕಾರಿಗಳ ಅವಧಿ ಮುಗಿದಿದ್ದರೂ, ಇಲಾಖೆ ತನ್ನ ಮುಂದಿನ ಆದೇಶದವರೆಗೆ ಕೆಲಸ ಮುಂದುವರಿಸಿಕೊಂಡು ಹೋಗಬೇಕೆಂದು ಆದೇಶ ನೀಡಿತ್ತು. (ಪಿಕೆ ಚಿತ್ರವಿಮರ್ಶೆ)

ಲೀಲಾ ಸಾಮ್ಸನ್ ಅವರು ಸೋನಿಯಾ ಗಾಂಧಿಯ ಅಣತಿಯಂತೆ ಮತ್ತು ಡಿಎಂಕೆ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎನ್ನುವ ಆಪಾದನೆ ಇಂದು ನಿನ್ನೆಯದಲ್ಲ.

ನಿತ್ಯಾ ಕಲಾ ಅಕಾಡೆಮಿಯ ಮುಖ್ಯಸ್ಥೆಯಾಗಿದ್ದ ಅವಧಿಯಲ್ಲಿ ಲೀಲಾ, ಚೆನ್ನೈನಲ್ಲಿ ಭರತನಾಟ್ಯದ ಸಂಪ್ರದಾಯದ ಭಾಗವಾದ ಸರಸ್ವತಿ ಮತ್ತು ನಟರಾಜ ದೇವರ ವಂದನೆ ನಡೆಸುವ ಪದ್ದತಿಯನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದರು ಎನ್ನುವ ಆರೋಪವೂ ಇವರ ಮೇಲಿದೆ.

Censor board Chief Leela Samason will act as per Sonia Gandhi, allegation

2012ರ ಸಿಎಜಿ (Comptroller and Auditor General) ರಿಪೋರ್ಟಿನಲ್ಲಿ ಹಣಕಾಸಿನ ಅವ್ಯಹಾರದಲ್ಲೂ ಲೀಲಾ ಸಾಮ್ಸನ್ ಹೆಸರು ಕೇಳಿ ಬಂದಿತ್ತು. 1990ರ ಪದ್ಮಶ್ರೀ ಪ್ರಶಸ್ತಿಗೆ ಲೀಲಾ ಭಾಜನರಾಗಿದ್ದರು.

ಅಮೀರ್ ಖಾನ್ ನಟನೆಯ 'ಪಿಕೆ' ಚಿತ್ರ ಬಿಡುಗಡೆಯಾದ ಮೇಲಂತೂ ಸೆನ್ಸಾರ್ ಮಂಡಳಿ ದೇಶದೆಲ್ಲಡೆ ಭಾರೀ ಚರ್ಚೆಗೆ ಗುರಿಯಾಯಿತು ಮತ್ತು ಲೀಲಾ ಸಾಮ್ಸನ್ ಚಿತ್ರಕ್ಕೆ ಪ್ರಮಾಣಪತ್ರ ನೀಡಿರುವುದಕ್ಕೆ ಟೀಕೆಗೂ ಗುರಿಯಾಗಿದ್ದರು. ಚಿತ್ರದಲ್ಲಿನ ಕೆಲವು ಸನ್ನಿವೇಶಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ.

ಚಿತ್ರವನ್ನು ನಿಷೇಧಿಸಬೇಕು ಇಲ್ಲವೇ ಚಿತ್ರದ ಕೆಲವೊಂದು ಸನ್ನಿವೇಶಕ್ಕೆ ಕತ್ತರಿ ಪ್ರಯೋಗಿಸಬೇಕು ಎನ್ನುವ ಒತ್ತಾಯಕ್ಕೆ ಲೀಲಾ ಮಣಿಯದಿದ್ದಾಗ ಕಟ್ಟಾ ಹಿಂದೂ ಪರ ಸಂಘಟನೆಗಳ ತೀವ್ರ ವಿರೋಧಕ್ಕೆ ಲೀಲಾ ಗುರಿಯಾಗಿದ್ದರು. ಆದರೆ ಯಾವುದೇ ಒತ್ತಡ, ಲಾಬಿಗೆ ಮಣಿಯದ ಲೀಲಾ ಸಾಮ್ಸನ್ ಚಿತ್ರ ಪ್ರಸಾರದ ತಡೆಗೆ ಬಿಲ್ಕುಲ್ ನೋ ಅಂದಿದ್ದರು.

ಪಿಕೆ ಚಿತ್ರವನ್ನು ವಿರೋಧಿಸುವವರು ಲೀಲಾ ಸಾಮ್ಸನ್ ರಾಜೀನಾಮೆಯಿಂದ ಖುಷಿಪಟ್ಟಿದ್ದರೂ ಪಿಕೆ ಚಿತ್ರ ಪ್ರದರ್ಶನ ಮಾತ್ರ ಮುಂದುವರಿಯುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+