Get Updates
Get notified of breaking news, exclusive insights, and must-see stories!

ಜನತೆಗೆ ಗಣ್ಯರಿಂದ ಯುಗಾದಿ ಶುಭಾಶಯಗಳ ಸರಮಾಲೆ

ದೇಶದಾದ್ಯಂತ ಸಂಭ್ರಮ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯಾದಿಯಾಗಿ ಹಲವಾರು ಗಣ್ಯರು ಜನತೆಗೆ ಯುಗಾದಿ ಶುಭಾಶಯಗಳನ್ನು ಕೋರಿದ್ದಾರೆ.

ಬೆಂಗಳೂರು, ಮಾರ್ಚ್ 29: ದೇಶದಾದ್ಯಂತ ಸಂಭ್ರಮ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯಾದಿಯಾಗಿ ಹಲವಾರು ಗಣ್ಯರು ಜನತೆಗೆ ಯುಗಾದಿ ಶುಭಾಶಯಗಳನ್ನು ಕೋರಿದ್ದಾರೆ.

ಹಿಂದೂ ಧರ್ಮದವರಿಗೆ ಯುಗಾದಿ ಹೊಸ ವರ್ಷವಾಗಿದ್ದು, ಜನರು ತಮ್ಮ ಮನೆ ಕಚೇರಿಗಳನ್ನು ತಳಿರು ತೋರಣಗಳಿಂದ ಻ಅಲಂಕರಿಸಿ ಕುಟುಂಬಗಳೊಂದಿಗೆ ನವ ಸಂವಸ್ಸರವನ್ನು ಸ್ವಾಗತಿಸುತ್ತಿದ್ದಾರೆ.[ಯುಗಾದಿಗೆ ದ್ವಾದಶ ರಾಶಿಗಳಿಗೆ ಆಯವ್ಯಯ ಹೇಗಿದೆ?]

ಯುಗಾದಿ ಹಬ್ಬವನ್ನು ಆಚರಿಸುವವರಿಗೆಲ್ಲರಿಗೂ ನನ್ನ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದ ಬೇರೆ ಬೇರೆ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಚೈತ್ರ ಶುಕ್ಲ, ಯುಗಾದಿ, ಗುಡಿ ಪಡ್ವಾ, ಚೇತಿ ಚಾಂದ್, ನವ್ರೆಹ್, ಸಾಜಿಬು ಚೆರೋಬಾ ಮುಂತಾದ ಹೆಸರಿನಲ್ಲಿ ಆಚರಿಸಲಾಗುತ್ತಿದ್ದು ಎಲ್ಲರಿಗೂ ಶುಭಾಶಯಗಳು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭ ಸಂದೇಶದಲ್ಲಿ ಹೇಳಿದ್ದಾರೆ.

ನರೇಂದ್ರ ಮೋದಿ

ಯುಗಾದಿ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವವರಿಗೆ ಶುಭಾಶಯಗಳು. ಮುಂದಿನ ವರ್ಷದಲ್ಲಿ ನಿಮ್ಮ ಎಲ್ಲಾ ಬಯಕೆಗಳು ಇಡೇರಲಿ, ಸುಖ ಸಂತೋಷ ನೆಲೆಸಲಿ ಎಂದು ಟ್ವಿಟ್ಟರಿನಲ್ಲಿ ಪ್ರಧಾನಿ ಹಾರೈಸಿದ್ದಾರೆ.

Array

ಪ್ರಣಬ್ ಮುಖರ್ಜಿ

ಚೈತ್ರ ಶುಕ್ಲ, ಯುಗಾದಿ, ಗುಡಿ ಪಡ್ವಾ, ಚೇತಿ ಚಾಂದ್, ನವ್ರೆಹ್, ಸಾಜಿಬು ಚೆರೋಬಾ ಹಬ್ಬದ ಸಂದರ್ಭದಲ್ಲಿ ನನ್ನೆಲ್ಲಾ ಪ್ರೀತಿಯ ನಾಗರೀಕರಿಗೆ ಶುಭಾಶಯಗಳು. ಈ ಹಬ್ಬ ಶಾಂತಿ, ಸಹಬಾಳ್ವೆಯನ್ನು ಹರಡಲಿ, ತಾಯ್ನೆಲದ ಸೇವೆಯಲ್ಲಿ ಜನರು ತೊಡಗಿಸಿಕೊಳ್ಳುವಂತಾಗಲಿ ಎಂದು ಪ್ರಣಬ್ ಮುಖರ್ಜಿ ಹಾರೈಸಿದ್ದಾರೆ.[ಹೊಸ ಸಂವತ್ಸರದ ಆಗಮನ- ಕವಿಗಳಿಗೆ ನಮನ]

ಬಿಎಸ್ ಯಡಿಯೂರಪ್ಪ

ನಿಮಗೂ,ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಯುಗಾದಿ ಹಬ್ಬದ ಶುಭಾಶಯಗಳು ಭಗವಂತನು ನಿಮ್ಮೆಲ್ಲರಿಗೂ ಆಯುರಾರೋಗ್ಯ ಯಶಸ್ಸನ್ನು ದಯಪಾಲಿಸಲೆಂದು ಪ್ರಾರ್ಥಿಸುವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ

ಯುಗಾದಿಯು ನಾಡಿನ ಸಮಸ್ತ ಜನತೆಯ ಬಾಳಿನಲ್ಲಿ ಶಾಂತಿ, ಸಮೃದ್ಧಿ ತರಲಿ; ನಾಡನ್ನು ಆವರಿಸಿರುವ ಬರವನ್ನು ನೀಗಿ ಹರುಷ ನೀಡಲಿ. ಎಲ್ಲರಿಗೂ ಯುಗಾದಿಯ ಶುಭಾಶಯಗಳು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ.[ಕೊಡಗಿನಲ್ಲಿ ಯುಗಾದಿಗೆ ಚಿನ್ನದ ಉಳುಮೆ]

ಸಿಟಿ ರವಿ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ರಾಜ್ಯದ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಯುಗಾದಿ ತಮ್ಮೆಲ್ಲರಿಗೂ ಸುಖ, ಶಾಂತಿ, ಸಮೃದ್ದಿಯನ್ನು ತರಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ.

ಸುರೇಶ್ ಕುಮಾರ್

ಈ ಯುಗಾದಿ ಎಲ್ಲರಿಗೂ ಶುಭ ತರಲಿ ಅಂತ ತಮ್ಮ ಒಂದು ಸಾಲಿನ ಶುಭ ಸಂದೇಶವನ್ನು ಸುರೇಶ್ ಕುಮಾರ್ ನೀಡಿದ್ದಾರೆ.

ಆರ್.ವಿ ದೇಶಪಾಂಡೆ

ಪ್ರೀತಿಯ ಗೆಳೆಯರೆ ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿಯ ಶುಭಾಷಯಗಳು. ಮುಂದಿನ ವರ್ಷ ಶಾಂತಿಯಿಂದ ಕೂಡಿ ಸಮೃದ್ಧವಾಗಿರಲಿ ಎಂದು ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ

ಎಲ್ಲಾ ಆತ್ಮೀಯ ಸ್ನೇಹಿತರೇ ತಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಷಯಗಳು. ಯುಗಾದಿ ಬೇವು ಬೆಲ್ಲದ ಸವಿಯು ನಾಡಿನ ಜನತೆಗೆ ಸುಖ ಶಾಂತಿ ಮತ್ತು ತಮ್ಮ ಜೀವನದಲ್ಲಿ ಉತ್ತಮ ಬದುಕನ್ನು ನಿರ್ಮಾಣ ಮಾಡಲಿ ಎಂದು ಶುಭ ಹಾರೈಸುತ್ತೇನೆ ಎಂದು ಅವರು ಪೇಸ್ಬುಕ್ ವಾಲ್ ನಲ್ಲಿ ಶುಭ ಸಂದೇಶ ನೀಡಿದ್ದಾರೆ.

ದೇವೇಗೌಡ

ಹೇವಿಳಂಬಿ ಸಂವಸ್ಸರವು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. ಮುಂದಿನ ವರ್ಷ ಮುಂಗಾರು ಮಳೆ ಚೆನ್ನಾಗಿ ಆಗಿ, ಉತ್ತಮ ಬೆಳೆ ಆಗಿ ಜನರ ಬದುಕು ಹಸನಾಗಲಿ ಎಂದು ಹಾರೈಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+