ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಸಮಯದಲ್ಲಿ ಎಫ್‌ಬಿ ಜಾಹಿರಾತಿಗೂ ಬ್ರೇಕ್‌ ಹಾಕಲು ಚಿಂತನೆ

By Nayana
|
Google Oneindia Kannada News

ಬೆಂಗಳೂರು, ಜೂನ್‌ 29: ಚುನಾವಣಾ ಆಯೋಗವು ಮತದಾನಕ್ಕೆ ಎರೆಡು ದಿನವಿರುವಾಗಲೇ ರಾಜಕೀಯ ಜಾಹಿರಾತು ನಿರ್ಬಂಧಿಸಿರುವ ಹಾಗೆ ಇದೇ ಮಾದರಿಯನ್ನು ಫೇಸ್‌ಬುಕ್‌ಗೂ ಅನುಸರಿಸಲು ಚಿಂತಿಸುತ್ತಿದೆ. ಈ ಬಗ್ಗೆ ಪರಿಶೀಲಿಸುವಂತೆ ಫೇಸ್‌ಬುಕ್‌ಗೆ ಆಗಲೇ ಆಯೋಗ ಸೂಚನೆಯನ್ನು ನೀಡಿದೆ.

ಆದರೆ ಇದುವರೆಗೂ ಸಾಮಾಜಿಕ ಜಾಲತಾಣಗಳು ಈ ಕುರಿತು ಪ್ರತಿಕ್ರಿಯಿಸಿಲ್ಲ, ಚುನಾವಣೆ ಆಯೋಗ ರಚಿಸಿರುವ ಸಮಿತಿ ಜೂನ್‌ 4 ರಂದು ಫೇಸ್‌ಬುಕ್ ಪ್ರತಿನಿಧಿಗಳ ಜತೆಯಲ್ಲಿ ಸಭೆಯನ್ನು ನಡೆಸಿತ್ತು. ಜನಪ್ರಾತಿನಿಧ್ಯ ಕಾಯ್ದೆ 126ನೇ ಸೆಕ್ಷನ್‌ ಅಧ್ಯಯನಕ್ಕಾಗಿ ಸಭೆ ನಡೆಸಿತ್ತು.

'ಫೇಸ್‌ಬುಕ್‌' ಸ್ನೇಹಿತನಿಂದ ಯುವತಿ ಮೇಲೆ ಅತ್ಯಾಚಾರ'ಫೇಸ್‌ಬುಕ್‌' ಸ್ನೇಹಿತನಿಂದ ಯುವತಿ ಮೇಲೆ ಅತ್ಯಾಚಾರ

ಜನಪ್ರಾತಿನಿಧ್ಯ ಕಾಯಿದೆ ಪ್ರಕಾರ, ಮತದಾನಕ್ಕೆ ಮೊದಲಿನ 48 ಗಂಟೆ ಅವಧಿಯಲ್ಲಿ ಮಾಧ್ಯಮಗಳಲ್ಲಿ ಯಾವುದೇ ಜಾಹೀರಾತು ನೀಡಬಾರದು ಎಂಬ ನಿಯಮವಿದೆ. ಆದರೆ, ಸಾಮಾಜಿಕ ತಾಣಗಳಲ್ಲಿ ಇವುಗಳಿಗೆ ಸದ್ಯಕ್ಕೆ ಯಾವುದೇ ಕಡಿವಾಣವಿಲ್ಲ. ಜತೆಗೆ ಸುಳ್ಳು ಮಾಹಿತಿಯನ್ನು ಯಾವುದೇ ಖರ್ಚಿಲ್ಲದೆ ನೀಡಲು ಅನುಕೂಲವಾದ ವಾತಾವರಣವೂ ಇರುವುದು ಆಯೋಗದ ಆತಂಕಕ್ಕೆ ಕಾರಣ.

CEC likely to impose ban fb campaign 48 hrs before polling

ಈ ಸಂದರ್ಭದಲ್ಲಿ ಚುನಾವಣಾ ನಿಯಮಗಳನ್ನು ಉಲ್ಲಂಘಟನೆಯ ಮಾಹಿತಿ ನೀಡಲು ಫೇಸ್‌ಬುಕ್ ಪುಟದಲ್ಲಿ ಒಂದು ಗುಂಡಿ ಇಲ್ಲವೇ ವಿಂಡೋ ಸೃಷ್ಟಿಸುವ ಬಗ್ಗೆ ಒಪ್ಪಿಗೆ ಸೂಚಿಸಲಾಗಿತ್ತು. ಒಂದು ವೇಳೆ ಅಗತ್ಯ ಬಂದರೆ ದೂರು ಸ್ವೀಕರಿಸುವ ವ್ಯವಸ್ಥೆಯನ್ನೂ ಕೂಡ ಇನ್ನಷ್ಟು ಬಲಪಡಿಸಲು ಒಪ್ಪಿಗೆ ಸೂಚಿಸಿತ್ತು.

English summary
Chief Election Commission sought social media forum Facebook not to update political campaign 48 hours before polling of any elections in the country. Facebook yet to respond CEC's request.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X