ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರ ಸುರಕ್ಷತೆಗೆ ಶೀಘ್ರ ರೈಲುಗಳಲ್ಲಿ ಸಿಸಿಟಿವಿ ಅಳವಡಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ರೈಲಿನ ಮಹಿಳಾ ಮೀಸಲು ಕೋಚ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ,ಭದ್ರತೆಗಾಗಿ ಶೀಘ್ರ ಸಿಸಿಟಿವಿ ವ್ಯವಸ್ಥೆ ಅಳವಡಿಸಲಾಗುತ್ತದೆ.

ಮಹಿಳೆಯರಿಗೆ ಮೀಸಲಾಗಿರುವ ಪ್ರತಿ ಕೋಚ್ ಗಳಲ್ಲಿ ಏಳು ಸಿಸಿಟಿವಿ ಕ್ಯಾಮರಾ ಗಳನ್ನು ಹಾಕಲಾಗುತ್ತದೆ. ಈ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಟ್ವೀಟ್ ಮಾಡಿದೆ.ಮಹಿಳಾ ಕೋಚ್ ಗಳಲ್ಲಿ 24/7 ಸಿಸಿಟಿವಿ ಕಣ್ಗಾವಲು ಇರಿಸಲಾಗುವುದು ಯಾವುದೇ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸಲು ಭದ್ರತಾ ಪಡೆಯೊಂದಿಗೆ ಸಹಾಯವಾಣಿ ನೆರವನ್ನೂ ಕಲ್ಪಿಸಲಾಗುವುದು.

ಮೆನು ಆನ್ ರೈಲ್ : ನಿಮಗೆ ಪ್ರಿಯವಾದ ಆಹಾರ ರೈಲಿನಲ್ಲಿ ಲಭ್ಯಮೆನು ಆನ್ ರೈಲ್ : ನಿಮಗೆ ಪ್ರಿಯವಾದ ಆಹಾರ ರೈಲಿನಲ್ಲಿ ಲಭ್ಯ

ಎಕ್ಸ್ ಪ್ರೆಸ್ ಹಾಗೂ ಮೇಯ್ಸ್ ರೈಲುಗಳಲ್ಲಿ ಸರ್ಕಿಟ್ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಕೋಚ್ ಗಳಲ್ಲಿ ಯಾವುದೇ ಅನುಮಾನಾಸ್ಪದ ಘಟನೆಗಳನ್ನು ಪತ್ತೆ ಹಚ್ಚಲು ಇದು ಸಾಧ್ಯವಾಗಲಿದೆ. ಭದ್ರತಾ ಕಾರಣಗಳಿಗಾಗಿ ಕೋಚ್ ನೊಳಗೆ ಅಗತ್ಯ ಸಂದರ್ಭದಲ್ಲಿ ತ್ವರಿತ ಕ್ರಮವನ್ನು ಖಾತರಿಪಡಿಸುವುದಕ್ಕಾಗಿ ರೈಲಿನ ಮುಂಭಾಗದಲ್ಲಿರುವ ಚಾಲಕ ಹಾಗೂ ಗಾರ್ಡನ್ ಕ್ಯಾಬಿನ್ ನಲ್ಲಿ ಸಿಸಿಟಿವಿ ವೀಕ್ಷಿಸಲಾಗುತ್ತದೆ.

ಸಿಸಿಟಿವಿ ದೃಶ್ಯಗಳ ಮಾನಿಟರಿಂಗ್ ನಡೆಯುವುದರಿಂದ ಮಹಿಳಾ ಕೋಚ್ ಗಳನ್ನು ತಯಾರಿಸಲಾಗಿದೆ. ಹೊಸ ರೈಲು ಕೋಚ್ ಗಳಲ್ಲಿ ಸ್ಟೈನ್ ಲೆಸ್ ಸ್ಟೀಲ್ ರಾಕ್ ಗಳನ್ನು ಉಪಯೋಗಿಸುವುದು ಮಾತ್ರವಲ್ಲದೆ ಎಲ್ ಇಡಿ ಲೈಟ್ ಅಳವಡಿಸಲಾಗುವುದು. ರೈಲಿನ ಮಹಿಳಾ ಕೋಚ್ ಗಳಲ್ಲಿಯೂ ಕ್ಯಾಮರಾ ಕಣ್ಗಾವಲು ಇರಿಸುವುದರಿಂದ ಕಳ್ಳತನ, ದರೋಡೆ, ಕಿರುಕುಳಗಳನ್ನು ತಡೆಯಲು ಸಹಾಯವಾಗುವುದು.

English summary
Ministry of railways has said that there will be 24×7 surveillance in women coach of all trains as CCTV cameras have been installed. The ministry has tweeted in its official account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X