Get Updates
Get notified of breaking news, exclusive insights, and must-see stories!

ನಿಗದಿತ ಅವಧಿಯಲ್ಲೇ ಸಿಬಿಎಸ್ ಇ ಫಲಿತಾಂಶ: ಜಾವಡೇಕರ್

ಈಗಾಗಲೇ ಹಲವಾರು ಕಾನೂನು ಕಗ್ಗಂಟುಗಳಿಗೆ ಸಿಬಿಎಸ್ ಸಿ ಸಿಲುಕಿಕೊಂಡಿದೆ. ಇದರ ನಡುವೆಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ನಿಗದಿತ ಅವಧಿಯಲ್ಲೇ 12ನೇ ತರಗತಿ ಫಲಿತಾಂಶ ಪ್ರಕಟಗೊಳ್ಳುತ್ತದೆ ಎಂದಿರುವುದು ಪ್ರಶ್ನಾರ್ಥಕವಾಗಿದೆ.

ನವದಹೆಲಿ, ಮೇ 25: ಕೇಂದ್ರೀಯ ಪ್ರೌಢ ಶಿಕ್ಷಣಾ ಮಂಡಳಿಯ (ಸಿಬಿಎಸ್ ಇ) 12ನೇ ತರಗತಿಯ ಫಲಿತಾಂಶವು ಈ ಮೊದಲು ಪ್ರಕಟಿಸಲಾಗಿದ್ದ ಅವಧಿಯಲ್ಲೇ ಪ್ರಕಟಗೊಳ್ಳಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದಾರೆ.

ಸಿಬಿಎಸ್ ಇ ಮಂಡಳಿಯು ತಾನು ಹೊಂದಿದ್ದ ಅಂಕ ಮಿತಿ ನಿಯಮವನ್ನು ಕೈಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿ ಹೈ ಕೋರ್ಟ್ ಅದೇ ನಿಯಮವನ್ನು ಮುಂದುವರಿಸುವಂತೆ ಮಂಡಳಿಗೆ ಮಂಗಳವಾರ ಸೂಚಿಸಿತ್ತು.[ಏನಿದು 'CBSE ಅಂಕ ನಿಯಮ' ? ನೀವು ತಿಳಿಯಬೇಕಾದ 5 ವಿಚಾರ]

CBSC Class 12 resutls will be on time: Javadekar

ಇದರಿಂದಾಗಿ, ಮೇ 24ರಂದು ಪ್ರಕಟಗೊಳ್ಳಬೇಕಿದ್ದ 12ನೇ ತರಗತಿ ಫಲಿತಾಂಶ ಮುಂದೂಡಲ್ಪಟ್ಟಿತ್ತು. ಆದರೀಗ, ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸುವುದಾಗಿ ಮಂಡಳಿ ಹೇಳಿದೆ. ಇದರಿಂದಾಗಿ, ಫಲಿತಾಂಶವು ಮತ್ತಷ್ಟು ಮುಂದೂಡಲ್ಪಡುವ ಪ್ರಮೇಯವಿದೆ. ಏತನ್ಮಧ್ಯೆ, ಮದ್ರಾಸ್ ಹೈಕೋರ್ಟ್ ನಿಂದಲೂ ಈ ಮಂಡಳಿಯ ತೀರ್ಮಾನದ ಬಗ್ಗೆ ಸಮನ್ಸ್ ಜಾರಿಯಾಗಿದೆ.[ಸಿಬಿಎಸ್ ಇ ಫಲಿತಾಂಶ ಮತ್ತಷ್ಟು ತಡ: ಆತಂಕದಲ್ಲಿ ವಿದ್ಯಾರ್ಥಿಗಳು]

ಇದಲ್ಲಾ ಗೊಂದಲಕ್ಕೂ ಮೊದಲೇ ಮೇ 24ರಿಂದ 27ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಮಂಡಳಿ ಹೇಳಿತ್ತು. ಇದೀಗ, ಕೇಂದ್ರ ಸಚಿವ ಜಾವಡೇಕರ್ ಕೂಡ ಅದೇ ಅವಧಿಯಲ್ಲೇ ಪಲಿತಾಂಶ ಪ್ರಕಟಗೊಳ್ಳಲಿದೆ ಎಂದಿದ್ದಾರೆ. ಆದರೆ, ಈ ವಿಚಾರ ಕಗ್ಗಂಟಾಗಿರುವುದರಿಂದ ಇಷ್ಟು ಬೇಗ ಫಲಿತಾಂಶ ಪ್ರಕಟಣೆ ಸಾಧ್ಯವೇ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಪ್ರಶ್ನಾರ್ಥಕವಾಗಿದೆ.[ಸುಪ್ರೀಂ ಮೆಟ್ಟಿಲೇರದಿರಲು ಸಿಬಿಎಸ್ ಇ ನಿರ್ಧಾರ?]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+