ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CBSE Class 10th Result 2022 Highlights: 10ನೇ ತರಗತಿ ಫಲಿತಾಂಶದಲ್ಲೂ ಬಾಲಕಿಯರದ್ದೇ ಮೇಲುಗೈ

|
Google Oneindia Kannada News

ನವದೆಹಲಿ, ಜುಲೈ 22: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) 12ನೇ ತರಗತಿಯಷ್ಟೇ ಅಲ್ಲಗೇ 10ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿಯೂ ವಿದ್ಯಾರ್ಥಿನಿಯರೇ ಮುನ್ನಡೆ ಸಾಧಿಸಿದ್ದಾರೆ. ಶುಕ್ರವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಶೇ.94.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಿಬಿಎಸ್ಇ 10 ನೇ ತರಗತಿಯ ಫಲಿತಾಂಶದಲ್ಲಿ, ಶೇ.95.21ರಷ್ಟು ಹುಡುಗಿಯರು ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದರೆ, ಶೇ.93.80 ರಷ್ಟು ಹುಡುಗರು ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

Breaking: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?Breaking: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

ಶುಕ್ರವಾರವೇ ಬೆಳಗ್ಗೆ ಪ್ರಕಟಗೊಂಡ ಸಿಬಿಎಸ್ಇ 12ನೇ ತರಗತಿ ಫಲಿತಾಂಶದಲ್ಲಿ ಶೇ.91.25ರಷ್ಟು ಬಾಲಕರು ಉತ್ತೀರ್ಣರಾದರೆ, ಶೇ.94.54ರಷ್ಟು ಬಾಲಕಿಯರು ಪಾಸ್ ಆಗಿದ್ದಾರೆ. ಇನ್ನು ಪರೀಕ್ಷೆಗೆ ಹಾಜರಾದ ಶೇ.100ರಷ್ಟು ಮಂಗಳಮುಖಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಬಿಎಸ್ಇ 10ನೇ ತರಗತಿ ಫಲಿತಾಂಶದ ಕುರಿತು ಕೆಲವು ಪ್ರಮುಖ ಅಂಶಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

CBSE Class 10th Result 2022 Highlights: Girls outshone boys; pass percentage 94.40

ಸಿಬಿಎಸ್ಇ 10ನೇ ತರಗತಿ ಫಲಿತಾಂಶದ ಪ್ರಮುಖ ಅಂಶಗಳು:

* 2021-22ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.94.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

* ತಿರುವನಂತಪುರವು ಶೇ.99.68ರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಗುವಾಹಟಿ ಶೇ.82.23ರೊಂದಿಗೆ ಪಟ್ಟಿಯಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ

* ಈ ಬಾರಿ ಸಿಬಿಎಸ್ಇ 10ನೇ ತರಗತಿಯ ಫಲಿತಾಂಶದಲ್ಲಿ ಶೇ. 95.21 ರಷ್ಟು ಹುಡುಗಿಯರು ಪರೀಕ್ಷೆಯನ್ನು ಪಾಸ್ ಆಗಿದ್ದರೆ ಶೇ.93.80 ರಷ್ಟು ಹುಡುಗರು ಸಹ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

* ಕಳೆದ ಏಪ್ರಿಲ್ 26 ರಿಂದ ಮೇ 24 ರವರೆಗೆ ನಡೆದ CBSE 10 ನೇ ತರಗತಿ ಪರೀಕ್ಷೆಗೆ 2,09,39,78 ವಿದ್ಯಾರ್ಥಿಗಳು ಹಾಜರಾಗಿದ್ದರು.

* ಈ ವೆಬ್‌ಸೈಟ್‌ಗಳಲ್ಲಿ ಸಿಬಿಎಸ್ಇ 10ನೇ ತರಗತಿಯ ಫಲಿತಾಂಶವನ್ನು ಪರಿಶೀಲಿಸಿ: cbse.gov.in, results.cbse.nic.in, results.nic.in ಮತ್ತು results.gov.in.

* ಸಿಬಿಎಸ್ಇ ಫಲಿತಾಂಶಗಳನ್ನು ಪರಿಶೀಲಿಸಲು UMANG ಅಪ್ಲಿಕೇಶನ್ ಅನ್ನು ಬಳಸಬಹುದು. ಫಲಿತಾಂಶಗಳನ್ನು ಪ್ರಕಟಿಸಿದಾಗ ವೆಬ್‌ಸೈಟ್‌ಗಳು ಓವರ್‌ಲೋಡ್ ಆಗುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಈ ಅಪ್ಲಿಕೇಶನ್ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಬಹುದು. iOS Apple Store ಮತ್ತು Google Play Store UMANG ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

* ಇದರ ಜೊತೆಗೆ ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು SMS ಸೇವೆಯ ಮೂಲಕ ಪಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು CBSE10 ಜೊತೆಗೆ ಕ್ರಮ ಸಂಖ್ಯೆ( roll. no) ಶಾಲೆಯ ಸಂಖ್ಯೆ (school no) ಮತ್ತು ಕೇಂದ್ರದ ಸಂಖ್ಯೆ (center no)ಯನ್ನು ಟೈಪ್ ಮಾಡಿ ಅದನ್ನು 7738299899 ಸಂಖ್ಯೆಗೆ ಕಳುಹಿಸಬೇಕು. ನಂತರದಲ್ಲಿ ನಿಮ್ಮ ಅಂಕಪಟ್ಟಿಗಳನ್ನು ಅದೇ ಫೋನ್ ಸಂಖ್ಯೆಗೆ ಪಠ್ಯ ಸಂದೇಶದ ಮೂಲಕ ಕಳುಹಿಸಲಾಗುತ್ತದೆ.

English summary
CBSE Class10 results Highlights: Girls have outshone boys with overall pass percentage of 94.40, while boys secured 93.80%. Check top colleges, toppers and other details in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X