ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್‌ಲೈನ್ ಬೋರ್ಡ್ ಪರೀಕ್ಷೆ ಕುರಿತು ಸಂಪೂರ್ಣ ಮಾಹಿತಿ ನೀಡಿದ CBSE

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಸಿಬಿಎಸ್‌ಇಯು ಆಫ್‌ಲೈನ್ ಬೋರ್ಡ್ ಪರೀಕ್ಷೆ ಕುರಿತು ಸಂಪೂರ್ಣ ಮಾಹಿತಿ ನೀಡಿದೆ. 10 ಮತ್ತು 12ನೇ ತರಗತಿಯ ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳನ್ನು ನವೆಂಬರ್-ಡಿಸೆಂಬರ್‌ನಲ್ಲಿ ಆಫ್‌ಲೈನ್‌ನಲ್ಲಿ ನಡೆಸಲಾಗುವುದು. ದಿನಾಂಕ ಪಟ್ಟಿಯನ್ನು ಅಕ್ಟೋಬರ್ 18ರಂದು ಪ್ರಕಟಿಸಲಾಗುವುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ತಿಳಿಸಿದೆ.

ಈ ವರ್ಷ ಕರೋನಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬೋರ್ಡ್ ಪರೀಕ್ಷೆಯನ್ನು ಎರಡು ಹಂತಗಳಾಗಿ ವಿಂಗಡಿಸಲು ಮಂಡಳಿ ನಿರ್ಧರಿಸಿದೆ. ಶೇ 50 ಸಿಲಬಸ್ ಪರೀಕ್ಷೆ ನವೆಂಬರ್ 15 ರಿಂದ ಡಿಸೆಂಬರ್ 15 ರ ನಡುವೆ ನಡೆಯಲಿದೆ. ಈ ಪರೀಕ್ಷೆಯು MCQ ಗಳಲ್ಲಿ (ಬಹು ಆಯ್ಕೆ ಪ್ರಶ್ನೆಗಳು) ಇರುತ್ತದೆ ಮತ್ತು ಎಲ್ಲಾ ವಿದ್ಯಾರ್ಥಿಗಳು OMR ಶೀಟ್ ಅನ್ನು ಭರ್ತಿ ಮಾಡಬೇಕು.

10, 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿಬಿಎಸ್ಇ ಹೊಸ ಯೋಜನೆ10, 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿಬಿಎಸ್ಇ ಹೊಸ ಯೋಜನೆ

ಪರೀಕ್ಷೆಗಳು ವಸ್ತುನಿಷ್ಠವಾಗಿರುತ್ತವೆ ಮತ್ತು ಪರೀಕ್ಷೆಗಳ ಅವಧಿಯು 90 ನಿಮಿಷಗಳು ಎಂದು ಮಂಡಳಿ ಹೇಳಿದೆ. ಪರೀಕ್ಷೆಗಳು ಚಳಿಗಾಲದ ಋತುವಿನ ದೃಷ್ಟಿಯಿಂದ 10.30ರ ಬದಲು 11.30ರಿಂದ ಆರಂಭವಾಗುತ್ತವೆ.

CBSE Class 10,12 Term 1 Board Exam To Be Held Offline, Date Sheet Out On October 18

ಇನ್ನು ಎರಡನೇ ಅವಧಿಯ ಪರೀಕ್ಷೆಯನ್ನು 2022ರ ಮಾರ್ಚ್-ಏಪ್ರಿಲ್ ನಲ್ಲಿ ನಡೆಸಲಾಗುವುದು ಮತ್ತು ಅದು ವಸ್ತುನಿಷ್ಠವಾಗಿರಲಿ ಅಥವಾ ವ್ಯಕ್ತಿನಿಷ್ಠವಾಗಿರಲಿ ಎಂಬುದು ದೇಶದ ಕೋವಿಡ್ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ.

ಅದೇ ಸಮಯದಲ್ಲಿ, ಎರಡನೇ ಅವಧಿಯ ಪರೀಕ್ಷೆಯು ಮಾರ್ಚ್-ಏಪ್ರಿಲ್ 2022 ರಲ್ಲಿ ನಡೆಯಲಿದೆ. ಸಿಬಿಎಸ್‌ಇ ಹತ್ತನೇ ಮತ್ತು ಹನ್ನೆರಡನೇ ತರಗತಿಯ ಫಲಿತಾಂಶಗಳನ್ನು ಎರಡೂ ಪರೀಕ್ಷೆಯ ಸಂಖ್ಯೆಯನ್ನು ಸೇರಿಸಿ ಘೋಷಿಸಲಾಗುತ್ತದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಣಾಧಿಕಾರಿ ಸಂಯಂ ಭಾರದ್ವಾಜ್ ಹೇಳಿದರು.

ಸಿಬಿಎಸ್‌ಇ 12ನೇ ತರಗತಿಯಲ್ಲಿ 114 ಮತ್ತು 10ನೇ ತರಗತಿಯಲ್ಲಿ 75 ವಿಷಯಗಳನ್ನು ನೀಡುತ್ತಿದೆ. 'ಸಿಬಿಎಸ್‌ಇ ಒಟ್ಟು 189 ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಬೇಕು. ಎಲ್ಲಾ ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಿದರೆ, ಪರೀಕ್ಷೆಗಳ ಸಂಪೂರ್ಣ ಅವಧಿ ಸುಮಾರು 40-45 ದಿನಗಳು. ಆದ್ದರಿಂದ, ವಿದ್ಯಾರ್ಥಿಗಳ ಕಲಿಕೆಯ ನಷ್ಟವನ್ನು ತಪ್ಪಿಸಲು, ಸಿಬಿಎಸ್‌ಇ ನೀಡುವ ವಿಷಯಗಳನ್ನು ಎರಡು ಭಾಗಗಳಾಗಿ ವಿಂಗಡಿಸಲು ನಿರ್ಧರಿಸಿದೆ.

ಪ್ರಮುಖ ವಿಷಯಗಳು ಮತ್ತು ಸಣ್ಣ ವಿಷಯಗಳು ಎಂದು ಭಾರದ್ವಾಜ್ ಹೇಳಿದರು. ಎರಡು ಹಂತಗಳಲ್ಲಿನ ಬೋರ್ಡ್ ಪರೀಕ್ಷೆಯೊಂದಿಗೆ, ಈ ಬಾರಿ 10 ಮತ್ತು 12 ನೇ ತರಗತಿಯ ಇಂಟರ್ನಲ್ ಮಾರ್ಕಿಂಗ್ ಮತ್ತು ಪ್ರಾಕ್ಟಿಕಲ್ ಅನ್ನು ಎರಡು ಭಾಗಗಳಲ್ಲಿ ನಡೆಸಲಾಗುತ್ತದೆ. ಮಂಡಳಿಯು ಈಗಾಗಲೇ ಮಾರ್ಕಿಂಗ್ ಸ್ಕೀಮ್ ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

10 ನೇ ತರಗತಿಗೆ 20 ಅಂಕಗಳ ಇಂಟರ್ನಲ್ ಮಾರ್ಕಿಂಗ್ ಅನ್ನು 10-10 ಅಂಕಗಳಂತೆ ಎರಡು ಭಾಗಗಳಲ್ಲಿ ಹಂಚಲಾಗುವುದು. 12 ನೇ ತರಗತಿಗೆ ತಲಾ 15 ಅಂಕಗಳಂತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. 12 ನೇ ತರಗತಿಗೆ ಒಟ್ಟು 30 ಅಂಕಗಳ ಪ್ರಾಕ್ಟಿಕಲ್ ಅನ್ನು ತಲಾ 15 ಅಂಕಗಳ ಎರಡು ಹಂತಗಳಲ್ಲಿ ತೆಗೆದುಕೊಳ್ಳಲಾಗುತ್ತದೆ.

ಸಿಬಿಎಸ್‌ಇ ಪ್ರಸ್ತುತ ಮೊದಲ ಹಂತದ ಪರೀಕ್ಷೆಗಳಿಗೆ ದಿನಾಂಕವನ್ನು ನಿಗದಿಪಡಿಸುತ್ತಿದ್ದು, ಅದನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ವಿದ್ಯಾರ್ಥಿಗಳ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಸಿಬಿಎಸ್‌ಇ ಮೊದಲ ಅವಧಿಯ ಪರೀಕ್ಷೆಗಳಿಗಾಗಿ ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವ ವೇಳಾಪಟ್ಟಿಯನ್ನು ನೀಡುತ್ತದೆ.

ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳನ್ನು 8 ವಾರಗಳ ದೀರ್ಘ ವೇಳಾಪಟ್ಟಿಯಲ್ಲಿ ನಡೆಸಬಹುದು. ಶೀಘ್ರದಲ್ಲೇ ಸಿಬಿಎಸ್‌ಇ ಮಂಡಳಿಯು ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳ ದಿನಾಂಕವನ್ನು ಘೋಷಿಸಲಿದೆ.

ಸಿಬಿಎಸ್‌ಇ ನೀಡಿದ ಮಾಹಿತಿಯ ಪ್ರಕಾರ, 10 ನೇ ಮತ್ತು 12 ನೇ ತರಗತಿಯ ಮೊದಲ ಹಂತದ ಬೋರ್ಡ್ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯ ದಿನಾಂಕವನ್ನು ಅಕ್ಟೋಬರ್ 18 ರಂದು ಘೋಷಿಸಲಾಗುವುದು.

10 ನೇ ಮತ್ತು 12 ನೇ ತರಗತಿಯ ಟರ್ಮ್ -1 ಬೋರ್ಡ್ ಪರೀಕ್ಷೆಯಲ್ಲಿ ಒಬ್ಜೆಕ್ಟ್ ವೈಸ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದಕ್ಕಾಗಿ 90 ನಿಮಿಷಗಳ ಸಮಯಾವಕಾಶ ನೀಡಲಾಗುತ್ತದೆ.

English summary
The Central Board of Secondary Education (CBSE) is planning to conduct the term-1 board exam for classes 10 and 12 in offline mode in November-December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X