ಮಣಿ ಸಾವಿನ ಪ್ರಕರಣದ ತನಿಖೆ, ಸಿಬಿಐ ಕೈಗೆ, ಬಿಜೆಪಿ ಹರ್ಷ!

Posted By:
Subscribe to Oneindia Kannada

ತಿರುವನಂತಪುರಂ, ಮೇ 18: ಬಹುಭಾಷಾ ನಟ, ಜಾನಪದ ಗಾಯಕ, ಮಿಮಿಕ್ರಿ ಕಲಾವಿದ ಕಲಾಭವನ್ ಮಣಿ ಸಾವಿನ ರಹಸ್ಯ ಬಯಲಾಗುವ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಪ್ರಕರಣವನ್ನು ಕೊನೆಗೂ ಸಿಬಿಐ ಕೈಗೆತ್ತಿಕೊಂಡಿದೆ. ತಡವಾಗಿಯಾದರೂ ಸತ್ಯ ಹೊರಬರಲಿ ಎಂದು ಬಿಜೆಪಿ ಸ್ವಾಗತಿಸಿದೆ.

ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರ ಮೃತದೇಹದಲ್ಲಿ ಮಿಥೈಲ್ ಅಲ್ಕೋಹಾಲ್ ಅಂಶ ಅಧಿಕವಾಗಿರುವುದು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯನ್ನು ತ್ರಿಸ್ಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾಯಿತು.[ಈ ಬಹುಭಾಷಾ ನಟನ ಸಾವಿನ ನಿಗೂಢತೆ ಇನ್ನೂ ಬಯಲಾಗಿಲ್ಲ]

CBI to probe death of actor Kalabhavan Mani

ವಿಸೇರಾದಲ್ಲಿ ಕೀಟನಾಶಕ ಅಂಶ ಇರುವುದು ಅನುಮಾನ ಮೂಡಿಸಿತ್ತು. ಆದರೆ, ಈಗ ಕೀಟನಾಶಕ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಮಣಿ ಅವರದ್ದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದರು.

ಆದರೆ, ಸಿಬಿಐ ತನಿಖೆಗೆ ಆಗ್ರಹಿಸಿ ಕಲಾಭವನ್ ಮಣಿ ಅವರ ಸೋದರ ಕೆ ರಾಮಕೃಷ್ಣನ್ ಅವರು ಪ್ರತಿಭಟನೆ ನಡೆಸಿದ್ದಾರೆ. ಇವರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ಮಾರ್ಚ್ 6, 2016ರಂದು ಕಲಾಭವನ್ ಮಣಿ ಅವರು ಕೊಚ್ಚಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Central Bureau of Investigation (CBI) will probe into the death of film actor Kalabhavan Mani
Please Wait while comments are loading...