ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಪ್ರಗತಿ ಬಗ್ಗೆ ಕೊನೆಗೂ ಸಿಬಿಐ ಮಾಹಿತಿ
ನವದೆಹಲಿ, ಡಿಸೆಂಬರ್ 31: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಸುಮಾರು 145 ದಿನಗಳಿಂದ ತನಿಖೆ ನಡೆಸುತ್ತಿರುವ ಸಿಬಿಐ, ಎಲ್ಲ ಆಯಾಮಗಳಲ್ಲಿಯೂ ಪರಿಶೀಲನೆ ನಡೆಸುತ್ತಿದ್ದು, ಯಾವುದನ್ನೂ ತಳ್ಳಿಹಾಕಿಲ್ಲ ಎಂದು ಹೇಳಿದೆ.
ಸುಶಾಂತ್ ಸಾವಿನ ತನಿಖೆಯ ಪ್ರಗತಿ ಕುರಿತಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಇದನ್ನು ಪಿಎಂಒ ಸಿಬಿಐಗೆ ರವಾನಿಸಿತ್ತು. ಸುಬ್ರಮಣಿಯನ್ ಸ್ವಾಮಿ ಅವರಿಗೆ ಪ್ರತಿಕ್ರಿಯೆ ನೀಡಿರುವ ತನಿಖಾ ಸಂಸ್ಥೆ, 'ಸಿಬಿಐ ಸವಿಸ್ತಾರವಾಗಿ ಮತ್ತು ಇತ್ತೀಚಿನ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿ ವೃತ್ತಿಪರ ತನಿಖೆ ನಡೆಸುತ್ತಿದೆ. ತನಿಖೆಯ ಸಂದರ್ಭದಲ್ಲಿ ಎಲ್ಲ ಆಯಾಮಗಳನ್ನೂ ನೋಡಲಾಗುತ್ತಿದೆ. ಇದುವರೆಗೂ ಯಾವುದೇ ಅಂಶವನ್ನು ನಿರಾಕರಿಸಿಲ್ಲ' ಎಂದು ತಿಳಿಸಿದೆ.
'ತನಿಖೆ ವೇಳೆ ಡಿಜಿಟಲ್ ಉಪಕರಣಗಳಲ್ಲಿ ಇರುವ ಸೂಕ್ತ ದತ್ತಾಂಶಗಳನ್ನು ತೆಗೆದು ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಲು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲ್ ಟವರ್ ಸ್ಥಳಗಳಲ್ಲಿನ ದತ್ತಾಂಶಗಳನ್ನು ವಿಶ್ಲೇಷಿಸಲು ಇತ್ತೀಚಿನ ಸಾಫ್ಟ್‌ವೇರ್ ಸೇರಿದಂತೆ ಅತ್ಯಾಧುನಿಕ ಮೊಬೈಲ್ ಫಾರೆನ್ಸಿಕ್ ಸಾಧನವನ್ನು ಬಳಸಲಾಗಿದೆ' ಎಂದು ವಿವರಿಸಿದೆ.

'ಸಂದರ್ಭವನ್ನು ದೂರುದಾರರು ಮತ್ತು ಅವರ ಕುಟುಂಬದವರು ಹಾಗೂ ಇತರೆ ಅವಲಂಬಿತ ಮೂಲಗಳು ಎತ್ತಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಎಲ್ಲ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತೀವ್ರ ಹಾಗೂ ಕೂಲಂಕಷ ತನಿಖೆಯನ್ನು ನಡೆಸಲಾಗಿದೆ. ಅಲಿಗಡ, ಫರೀದಾಬಾದ್, ಹೈದರಾಬಾದ್, ಮುಂಬೈ, ಮಣೇಸರ್ ಮತ್ತು ಪಟ್ನಾ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸ್ಥಳಗಳಿಗೂ ಹಿರಿಯ ಅಧಿಕಾರಿಗಳ ಜತೆಗೆ ತನಿಖಾ ತಂಡ ಭೇಟಿ ನೀಡಿದೆ' ಎಂದು ಹೇಳಿದೆ.
ಅಕ್ಟೋಬರ್‌ನಲ್ಲಿ ಸಿಬಿಐಗೆ ತನ್ನ ಅಭಿಪ್ರಾಯ ತಿಳಿಸಿದ್ದ ಏಮ್ಸ್‌ನ ವೈದ್ಯರ ತಂಡ, ಸುಶಾಂತ್ ಅವರದ್ದು ಕೊಲೆಯಲ್ಲ ಮತ್ತು ಅದು ಆತ್ಮಹತ್ಯೆ ಪ್ರಕರಣ ಎಂದಿತ್ತು. ಸುಶಾಂತ್ ಕುಟುಂಬ ಹಾಗೂ ವೈದ್ಯರ ಆರೋಪದಂತೆ ಅವರಿಗೆ ವಿಷ ಪ್ರಾಶನ ಮಾಡಿರುವ ಅಥವಾ ಕತ್ತು ಹಿಸುಕಿರುವ ಸಾಧ್ಯತೆಗಳನ್ನು ತಳ್ಳಿಹಾಕಿತ್ತು.
-
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್












Click it and Unblock the Notifications