ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರನ ನಿವಾಸಗಳ ಮೇಲೆ ಸಿಬಿಐ ದಾಳಿ
ಚೆನ್ನೈ, ಮೇ 16 : ಮಂಗಳವಾರ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಹಣಕಾಸು ಸಿಚಿವ ಪಿ. ಚಿದಂಬರಂ ಪುತ್ರನ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಚೆನ್ನೈನ ನುಂಗಂಬಾಕಮ್ ನಲ್ಲಿರುವ ಚಿದಂಬರಂ ಪುತ್ರ ಕಾರ್ತಿ ಅವರ ನಿವಾಸಗಳ ಮೇಲೆ 10ಕ್ಕೂ ಅಧಿಕ ಸಿಬಿಐ ಅಧಿಕಾರಿಗಳ ತಂಡ ದಾಳಿ ಮಾಡಿದೆ.

ವಿದೇಶಿ ಮಿನಿಮಯ ನಿಯಮ ಉಲ್ಲಂಘನೆ, ಕಾನೂನು ಬಾಹಿರ ಹೂಡಿಕೆ ಮಾಡಿದ ಆರೋಪದಡಿ ಚೆನ್ನೈ, ದೆಹಲಿ, ನೋಯ್ಡಾ ಸೇರಿದಂತೆ 16 ಕಡೆ ಏಕಕಾಲಕ್ಕೆ ಸಿಬಿಐ ದಾಳಿ ನಡೆಸಿದೆ.
ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ನಿರ್ದೇಶಕರಾಗಿರುವ ಕಾರ್ತಿ ಅವರ ಮೇಲಿರುವ ಏರ್ಸೆಲ್ ಮ್ಯಾಕ್ಸಿಸ್ ಡೀಲ್ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
2008ರಲ್ಲಿ ಕಡಿಮೆ ಮೊತ್ತಕ್ಕೆ 1.5 ಲಕ್ಷ ಷೇರುಗಳನ್ನು ಅಡ್ವಾನ್ಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈ ಲಿಮಿಟೆಡ್ ಗೆ ನೀಡಲಾಗಿತ್ತು. ಇದಲ್ಲದೆ ಜಿಗಿಟಿಜಾ ಹೆಲ್ತ್ ಕೇರ್ ಲಿ ಆಂಬ್ಯುಲೆನ್ಸ್ ಹಗರಣ ಕೂಡಾ ಕಾರ್ತಿ ಚಿದಂಬರಂ ತಲೆ ಮೇಲಿದೆ.












Click it and Unblock the Notifications