ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಿಗೆ 800 ಕೋಟಿ ರೂ. ವಂಚಿಸಿದ ಮತ್ತೋರ್ವ ಉದ್ಯಮಿ ಮೇಲೆ ಸಿಬಿಐ ಎಫ್ಐಆರ್

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 19: ಜುವೆಲ್ಲರಿ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿದ ಮಾದರಿಯಲ್ಲೇ ವಂಚನೆ ನಡೆಸಿದ ಮತ್ತೋರ್ವ ಉದ್ಯಮಿ ಮೇಲೆ ಇದೀಗ ಸಿಬಿಐ ಎಫ್ಐಆರ್ ದಾಖಲಿಸಿದೆ.

'ರೋಟೊಮ್ಯಾಕ್ ಪೆನ್ಸ್' ಕಂಪನಿ ಮುಖ್ಯಸ್ಥ ವಿಕ್ರಂ ಕೊಠಾರಿ ಮತ್ತು ಇತರರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಮಾತ್ರವಲ್ಲ ಬೆಳ್ಳಂಬೆಳಗ್ಗೆ ವಿಕ್ರಂ ಕೊಠಾರಿಗೆ ಸೇರಿದ ಕಾನ್ಪುರದ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ಬ್ಯಾಂಕ್‍ ಅವ್ಯವಹಾರದ ಆರೋಪಕ್ಕೆ ಸಿಲುಕುತ್ತಿರುವುದು ದುರಂತ: ಸದ್ಗುರು ಬ್ಯಾಂಕ್‍ ಅವ್ಯವಹಾರದ ಆರೋಪಕ್ಕೆ ಸಿಲುಕುತ್ತಿರುವುದು ದುರಂತ: ಸದ್ಗುರು

ವಿಕ್ರಂ ಕೊಠಾರಿ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ನಡೆಸಿದ್ದು ಈ ಸಂಬಂಧ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು. ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಸಿಬಿಐ ಕಾನ್ಪುರದ ಮೂರು ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಕೊಠಾರಿ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

CBI files case against Rotomac Pens owner Vikram Kothari and others

'ರೋಟೊಮ್ಯಾಕ್ ಪೆನ್ಸ್' ಮಾಲಿಕ ಕೊಠಾರಿ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಸೇರಿ ಒಟ್ಟು 5 ಬ್ಯಾಂಕ್ ಗಳಿಗೆ ರೂ. 800 ಕೋಟಿ ವಂಚಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೊಠಾರಿ 485 ಕೋಟಿ ರೂಪಾಯಿ ಸಾಲ ಪಡೆದಿದ್ದರೆ ಅಲಹಾಬಾದ್ ಬ್ಯಾಂಕ್ ನಿಂದ 352 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಇದೀಗ ಸಾಲ ಪಡೆದು ಒಂದು ವರ್ಷವಾಗಿದ್ದು ಸಾಲ ಮತ್ತು ಬಡ್ಡಿ ಎರಡನ್ನೂ ಕೊಠಾರಿ ಕಟ್ಟಿಲ್ಲ.

ಇನ್ನು ಕಳೆದ ವರ್ಷವೇ ಬ್ಯಾಂಕ್ ಆಫ್ ಬರೋಡ ಕೊಠಾರಿಯನ್ನು 'ವಿಲ್ ಫುಲ್ ಡಿಫಾಲ್ಟರ್' ಎಂದು ಘೋಷಿಸಿತ್ತು. ಇದರ ವಿರುದ್ಧ ಕಂಪನಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿತ್ತು. ಆಗ ಻ಅಲಹಾಬಾದ್ ಹೈಕೋರ್ಟ್ 'ವಿಲ್ ಫುಲ್ ಡಿಫಾಲ್ಟರ್' ಪಟ್ಟಿಯಿಂದ ಹೆಸರು ತೆಗೆದು ಹಾಕಲು ಬ್ಯಾಂಕಿಗೆ ಸೂಚಿಸಿತ್ತು.

ಆದರೆ ಫೆಬ್ರವರಿ 27, 2017ರಲ್ಲಿ ಆರ್.ಬಿ.ಐ ನ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕಂಪನಿಯನ್ನು ವಿಲ್ ಫುಲ್ ಡಿಫಾಲ್ಟರ್ ಎಂದು ಪರಗಣಿಸಿ ಮತ್ತೆ ಆದೇಶ ಹೊರಡಿಸಲಾಯಿತು.

English summary
Central Bureau of Investigation (CBI) has filed a case against Rotomac Pens owner Vikram Kothari and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X