• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದಾಯ ತೆರಿಗೆ ರಿಟರ್ನ್ಸ್ ಅರ್ಜಿ ಪ್ರಕಟ, ವಿವರ ಇಲ್ಲಿದೆ

|

ನವದೆಹಲಿ, ಮೇ 31: ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಗೆ ಸಂಬಂಧಿಸಿದ ವಿವಿಧ ಹೂಡಿಕೆ ಡಿಕ್ಲೇರೇಷನ್ ಸಲ್ಲಿಕೆಯ ದಿನಾಂಕವನ್ನು ಈಗಾಗಲೇ ವಿಸ್ತರಣೆ ಮಾಡಲಾಗಿದೆ. ನಂತರ 2019-20ನೇ ಸಾಲಿನ ಐಟಿ ರಿಟರ್ನ್ಸ್ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಿ ವಿತ್ತ ಸಚಿವಾಲಯ ಆದೇಶ ಹೊರಡಿಸಿದ್ದು ತಿಳಿದಿರಬಹುದು.

   ಭಾನುವಾರ ಎಣ್ಣೆ ಸಿಗುತ್ತಾ ಇಲ್ವಾ ಅನ್ನೋದೇ ಪ್ರಶ್ನೆ ! Liquor available on sunday

   ಈಗ 2019-20ನೇ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2020-21) ರಿಟರ್ನ್ ಫಾರ್ಮ್‌ಗಳನ್ನು Central Board of Direct Taxes(ಸಿಬಿಡಿಟಿ) ಪರಿಷ್ಕರಿಸಿದ್ದು, ಅಧಿಕೃತ ನೋಟಿಫಿಕೇಷನ್ ನೀಡಿದೆ. ಆದಾಯ ತೆರಿಗೆ ಕಾಯ್ದೆ 2020 ನಿಯಮಕ್ಕಾನುಸಾರವಾಗಿ ಐಟಿ ರಿಟರ್ನ್ಸ್ ಅರ್ಜಿ 1 ರಿಂದ 7 ಪ್ರಕಟಿಸಲಾಗಿದೆ.

   ಸಂಬಳದಾರರ ತಲೆಗೆ ಹುಳ ಬಿಟ್ಟ ನಿರ್ಮಲಾ ತೆರಿಗೆ ಲೆಕ್ಕಾಚಾರ!

   ಪ್ರಧಾನಿ ಮೋದಿ ಅವರ ಆಶಯದಂತೆ ಐದು ಸ್ತಂಭಗಳನ್ನು ಬಲ ಪಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಗೆ ಸಂಬಂಧಿಸಿದ ವಿವಿಧ ಹೂಡಿಕೆ ಡಿಕ್ಲೇರೇಷನ್ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಿರುವುದಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

   ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ

   ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ

   * ಐಟಿ ರಿಟರ್ನ್ಸ್ ಘೋಷಣೆ 2019-2020 ಆರ್ಥಿಕ ವರ್ಷ(2020-21 Assessment ವರ್ಷ) ಹೊಸ ದಿನಾಂಕ ಮೇ 31, 2020 ಆಗಿದೆ. ಸಾಮಾನ್ಯವಾಗಿ ಏಪ್ರಿಲ್ ಮೊದಲ ವಾರಕ್ಕೆ ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಗೆ ಕೊನೆಯಾಗುತ್ತದೆ.

   * ಏಪ್ರಿಲ್ 1 ರಿಂದ 2020 ರ ಜೂನ್ 30 ರವರೆಗೆ ನಡೆಸಿದ ಆರ್ಥಿಕ ವಹಿವಾಟುಗಳು ತೆರಿಗೆ ಕ್ಲೇಮ್ ಗೆ ಅರ್ಹವಾಗಿವೆ. * ರಾಷ್ಟ್ರವ್ಯಾಪಿ ಲಾಕ್‌ಡೌನ್ ಎರಡನೇ ಅವಧಿಗೆ ವಿಸ್ತರಣೆಯಾಗಿದೆ. ವೈಯಕ್ತಿಕ, ವೃತ್ತಿಪರ, ಉದ್ಯಮಿ, ಹಿಂದು ಅವಿಭಜಿತ ಕುಟುಂಬದವರು ಎಲ್ಲರೂ ಕ್ಲೇಮ್ ಮಾಡಬಹುದು.

   ಐಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆ ಏನು ಲಾಭ?

   ಕ್ಲೇಮ್ ಪ್ರಯೋಜನದ ಕಾಲಮಿತಿ

   ಕ್ಲೇಮ್ ಪ್ರಯೋಜನದ ಕಾಲಮಿತಿ

   * ಸೆಕ್ಷನ್ 80 ಸಿ, 80ಡಿ, 80 ಜಿ ಅಡಿಯಲ್ಲಿ ಹೂಡಿಕೆಗಳು, ಎಲ್ ಐಸಿ, ಪಿಪಿಎಫ್ ಹೂಡಿಕೆಗಳು ಮತ್ತು ವೆಚ್ಚಗಳಿಗೆ ಸಂಬಂಧಿಸಿದಂತೆ ತೆರಿಗೆ ಕ್ಲೇಮ್ ಪ್ರಯೋಜನದ ಕಾಲಮಿತಿಗಳನ್ನು ಜೂನ್ 30ರ ವರೆಗೆ ಸರ್ಕಾರ ವಿಸ್ತರಿಸಿದೆ.

   * ಫಾರ್ಮ್ 16 ಪಡೆಯಲು ಕೊನೆದಿನಾಂಕವನ್ನು ಜೂನ್ 20 ,2020ರಿಂದ ಜೂನ್ 30, 2020ಕ್ಕೆ ಬದಲಾಯಿಸಲಾಗಿದೆ.

   ತೆರಿಗೆ ಲೆಕ್ಕಪರಿಶೋಧನೆ ಕೊನೆ ದಿನಾಂಕ

   ತೆರಿಗೆ ಲೆಕ್ಕಪರಿಶೋಧನೆ ಕೊನೆ ದಿನಾಂಕ

   * ಕ್ಲೇಮ್ ಪಡೆಯಲು ಇದ್ದ ಜುಲೈ 31, 2020 ಹಾಗೂ ಅಕ್ಟೋಬರ್ 31, 2020 ಇದ್ದ ಕೊನೆ ದಿನಾಂಕವನ್ನು ನವೆಂಬರ್ 30, 2020ಕ್ಕೆ ನಿಗದಿ ಮಾಡಲಾಗಿದೆ.

   * ಇದರ ಜೊತೆಗೆ ತೆರಿಗೆ ಲೆಕ್ಕಪರಿಶೋಧನೆ(tax audit) ಕೊನೆ ದಿನಾಂಕವನ್ನು ಸೆಪ್ಟೆಂಬರ್ 30, 2020ರಿಂದ ಅಕ್ಟೋಬರ್ 31, 2020ಕ್ಕೆ ನಿಗದಿ ಪಡಿಸಲಾಗಿದೆ.

   ಎಲೆಕ್ಟ್ರಿಕ್ ಬಿಲ್ ಕಟ್ಟಿದ್ದನ್ನು ನಮೂದಿಸಬೇಕು

   ಎಲೆಕ್ಟ್ರಿಕ್ ಬಿಲ್ ಕಟ್ಟಿದ್ದನ್ನು ನಮೂದಿಸಬೇಕು

   * ಐಟಿಆರ್ 1 ಸಹಜ್, ಐಟಿಆರ್ 2, 3 ಹಾಗೂ 4 ಸುಗಮ್, ಐಟಿಆರ್ 5,6 ಹಾಗೂ 7 ಬಳಸಿ ಹೂಡಿಕೆ, ಖರ್ಚು ವೆಚ್ಚ, ವಿನಾಯತಿಗಳನ್ನು ದಾಖಲಿಸಿ ಐಟಿ ರಿಟರ್ನ್ಸ್ ಮಾಡಬಹುದಾಗಿದೆ. ಜೂನ್ 30ಕ್ಕೆ ಅನುಗುಣವಾಗಿ ದಾಖಲೆಗಳನ್ನು ಸಲ್ಲಿಸತಕ್ಕದ್ದು.

   * ನೀವು ಈ ವರ್ಷ 1 ಲಕ್ಷ ಮೊತ್ತದ ಎಲೆಕ್ಟ್ರಿಕ್ ಬಿಲ್ ಕಟ್ಟಿದ್ದೀರಾ? ಸಹಜ್ ಐಟಿಆರ್ -1, ಐಟಿಆರ್ 2, ಐಟಿಆರ್ 3 ಹಾಗೂ ಐಟಿಆರ್ 4ರಲ್ಲಿ ಈ ಬಗ್ಗೆ ತೆರಿಗೆದಾರರಿಗೆ ಪ್ರಶ್ನೆಗಳಿವೆ. ಬ್ಯಾಂಕಿನಲ್ಲಿ 1 ಕೋಟಿ ರು ಜಮೆ, ವಿದೇಶಿ ಪ್ರಯಾಣಕ್ಕೆ 1 ಲಕ್ಷ ರು ಖರ್ಚು ಮಾಡಿದ್ದರ ಬಗ್ಗೆ ಕೂಡಾ ದಾಖಲಿಸಬೇಕಾಗುತ್ತದೆ.

   English summary
   The Central Board of Direct Taxes (CBDT) has today notified Income Tax Return forms 1 to 7 for the Financial Year 2019-20 (Assessment Year 2020-21). The new notification announces rule changes in the Income Tax Rules 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X