ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ: ಉರಿಯೋ ಬೆಂಕಿಗೆ ತುಪ್ಪ ಸುರಿದ ತಮಿಳುನಾಡು

By Balaraj
|
Google Oneindia Kannada News

ನವದೆಹಲಿ, ಸೆ 9: ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿನ ಹೋರಾಟ ತಾರಕಕ್ಕೇರಿದ್ದರೂ, ತಮಿಳುನಾಡು ಸರಕಾರ ಹೊಸ ಬೇಡಿಕೆ ಮುಂದಿಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸಕ್ಕೆ ಮುಂದಾಗಿದೆ.

ಮುಂಗಾರು ಮಳೆ ಕೈಕೊಟ್ಟಿದ್ದರೂ, ಈ ಭಾಗದ ರೈತರ ಕಣ್ಣೀರಿಗೆ ಕ್ಯಾರೇ ಅನ್ನದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದಿಂದ ಇನ್ನಷ್ಟು ನೀರು ಬಿಡಲು ಒತ್ತಡ ಹೇರಲಾರಂಭಿಸಿದ್ದಾರೆ. (ಕರ್ನಾಟಕ ಬಂದ್ ಎಲ್ಲೆಲ್ಲಿ ಏನು)

Cauvery dispute: Tamilnadu demanding more water from Karnataka

ಕರ್ನಾಟಕ ರಾಜ್ಯ ಸರಕಾರದ ವೈಫಲ್ಯವೋ, ಒಟ್ಟಿನಲ್ಲಿ ಸುಪ್ರೀಂಕೋರ್ಟ್ ಮೆಟ್ಟಲೇರಿ ದಿನವೊಂದಕ್ಕೆ ಹದಿನೈದು ಸಾವಿರ ಕ್ಯೂಸೆಕ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ತಮಿಳುನಾಡು, ಕರ್ನಾಟಕದಿಂದ ನಮಗೆ ಇನ್ನೂ ನೀರಬರಬೇಕೆಂದು ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಬೇಡಿಕೆಯಿಟ್ಟಿದೆ.

ಹಾಲಿ ವರ್ಷದ 61 ಟಿಎಂಸಿ ನೀರಿನ ಕೊರತೆ ತುಂಬಲು ಸಮಿತಿ ಸೂಕ್ತ ನಿರ್ಧಾರ ಶೀಘ್ರದಲ್ಲೇ ಪ್ರಕಟಿಸಬೇಕೆಂದು ತಮಿಳುನಾಡು ಸಮಿತಿಯ ಮೊರೆಹೋಗಿದೆ.

ಕಳೆದ ಮೂರು ತಿಂಗಳಲ್ಲಿ ತಮಿಳುನಾಡಿಗೆ 94 ಟಿಎಂಸಿ ನೀರು ಹರಿದು ಬರಬೇಕಿತ್ತು, ಆದರೆ ಕರ್ನಾಟಕ 33 ಟಿಎಂಸಿ ನೀರನ್ನು ಮಾತ್ರ ಬಿಟ್ಟಿದೆ ಹೀಗಾಗಿ 61 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡು ಹೊಸ ವರಸೆ ಎತ್ತಿದೆ.

English summary
Cauvery dispute: In an appeal to Cauvery monitoring committee, Tamilnadu demanding 61 TMC more water from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X