ಜಾನುವಾರು ಖರೀದಿ-ಮಾರಾಟಕ್ಕೂ ಬಂತು ಇ-ಮಾರುಕಟ್ಟೆ
ಬೆಂಗಳೂರು, ಜೂನ್ 30: ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯಡಿ ಇ-ಪಶುಹಾತ್ ಜಾಲತಾಣ ಅಭಿವೃದ್ಧಿಪಡಿಸಿದೆ. ಇದರ ಮೂಲಕ ಆನ್‌ಲೈನ್‌ನಲ್ಲಿ ಹಸುಗಳ ವ್ಯಾಪಾರ ಮಾಡಬಹುದಾಗಿದೆ.
ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ನಿಗದಿತ ದಿನದಂದೇ ದನಗಳ ವ್ಯಾಪಾರ ನಡೆಯುತ್ತದೆ. ಆದರೆ, ಇಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ಗೋವಿನ ಮಾಲೀಕರಿಗೆ ಸೂಕ್ತ ಬೆಲೆ ಲಭ್ಯವಾಗುತ್ತಿಲ್ಲ, ಇದರ ಕುರಿತು ಆಲೋಚಿಸಿದ ಕೇಂದ್ರ ಸರ್ಕಾರ ನೂತನ ಆನ್‌ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಸಿನಿಮೀಯ ರೀತಿಯಲ್ಲಿ ಗೋವುಗಳನ್ನು ರಕ್ಷಿಸಿದ ಪೊಲೀಸರು
ಇ-ಪಶುಹಾತ್‌ನಲ್ಲಿ ರೈತ ಅಥವಾ ಜಾನುವಾರುಗಳ ಮಾಲೀಕ ನೋಂದಣಿ ಮಾಡಿಕೊಂಡಲ್ಲಿ, ನೇರವಾಗಿ ರೈತರೊಂದಿಗೆ ಸಂಪರ್ಕ ಸಾಧಿಸಬಹುದು. ಜತೆಗೆ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸುತ್ತಿರುವ ಕೇಂದ್ರ, ರಾಜ್ಯ ಸಹಕಾರಿ ಮತ್ತು ಖಾಸಗಿ ಸಂಸ್ಥೆಗಳ ಮಧ್ಯೆ ಕೊಂಡಿಯ ರೂಪದಲ್ಲಿ ಇದು ಕಾರ್ಯನಿರ್ವಹಿಸಲಿದೆ.
ದೇಶದ ಆಯಾ ರಾಜ್ಯಗಳಲ್ಲಿ ವಿವಿಧ ತಳಿಗಳು ಪ್ರಮುಖವಾಗಿದ್ದು ಅವುಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಇಲ್ಲ, ಇವುಗಳನ್ನು ಆನ್‌ಲೈನ್ ಟ್ರೇಡಿಂಗ್ ಅಡಿ ತರುವ ಪ್ರಯತ್ನ ಇದಾಗಿದೆ. 21 ರಾಜ್ಯಗಳಲ್ಲೂ ಈ ಸೇವೆ ಲಭ್ಯವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ ಮಾಹಿತಿಕೋಶದ ರೂಪದಲ್ಲಿ ವೆಬ್ ಪೋರ್ಟಲ್ ಕಾರ್ಯನಿರ್ವಹಿಸುತ್ತಿದೆ.