ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಇಂದಿನಿಂದ ಜಾತಿ ಗಣತಿ ಆರಂಭ

|
Google Oneindia Kannada News

ಪಾಟ್ನಾ, ಜನವರಿ 7: ಬಹುನಿರೀಕ್ಷಿತ ಜಾತಿ ಗಣತಿ ಕಾರ್ಯ ಇಂದಿನಿಂದ (ಜನವರಿ 7) ಬಿಹಾರದಲ್ಲಿ ಆರಂಭಗೊಂಡಿದೆ. ಜಾತಿ ಆಧಾರಿತ ಜನಗಣತಿಯು ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನವನ್ನು ನೀಡುತ್ತದೆ. ಅವಕಾಶ ವಂಚಿತ ಜನರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಶನಿವಾರದಿಂದ ಬಿಹಾರ ರಾಜ್ಯದಲ್ಲಿ ಗಣತಿ ಕಾರ್ಯ ಆರಂಭವಾಗಿದೆ. ಜಾತಿವಾರು ನಡೆಯುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಅವಕಾಶ ವಂಚಿತರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಶ್ರಮಿಸಲು ಸಾಧ್ಯವಾಗುತ್ತದೆ. ಎಣಿಕೆ ಕಾರ್ಯ ಮುಗಿದ ನಂತರ ಅಂತಿಮ ವರದಿಯನ್ನು ಕೇಂದ್ರಕ್ಕೂ ಕಳುಹಿಸಲಾಗುವುದು ಎಂದು ಶೆಯೋಹರ್ ಜಿಲ್ಲೆಯಲ್ಲಿ ತಮ್ಮ 'ಸಮಾಧಾನ ಯಾತ್ರೆ'ಯ ಎರಡನೇ ದಿನದಂದು ಸುದ್ದಿಗಾರರೊಂದಿಗೆ ಸಂವಾದದಲ್ಲಿ ನಿತಿಶ್‌ ಕುಮಾರ್ ಹೇಳಿದರು.

ಈ ಜಾತಿ ಗಣತಿಯು ಮೂಲಭೂತವಾಗಿ ಜಾತಿ ಆಧಾರಿತ ಗಣತಿ ಆಗಿದೆ. ಗಣತಿಯ ಸಮಯದಲ್ಲಿ ಪ್ರತಿಯೊಂದು ಧರ್ಮ ಮತ್ತು ಜಾತಿಗೆ ಸೇರಿದ ಜನರು ಒಳಗೊಳ್ಳುತ್ತಾರೆ. ಜಾತಿ ಆಧಾರಿತ ಜನರನ್ನು ಎಣಿಕೆ ನಡೆಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಸರಿಯಾದ ತರಬೇತಿಯನ್ನು ನೀಡಲಾಗಿದೆ ಅವರು ಮಾಹಿತಿ ನೀಡಿದ್ದಾರೆ.

ಬಿಹಾರ: ವಂದೇ ಭಾರತ್ ರೈಲಿಗೆ ಕಲ್ಲೆಸೆತ ಪ್ರಕರಣ: 3 ಬಾಲಕರ ಬಂಧನಬಿಹಾರ: ವಂದೇ ಭಾರತ್ ರೈಲಿಗೆ ಕಲ್ಲೆಸೆತ ಪ್ರಕರಣ: 3 ಬಾಲಕರ ಬಂಧನ

ಶನಿವಾರದಿಂದ ರಾಜ್ಯದಲ್ಲಿ ಗಣತಿ ಕಾರ್ಯ ಆರಂಭವಾಗಲಿದೆ. ಸರ್ಕಾರ ಎರಡು ಹಂತಗಳಲ್ಲಿ ಕಸರತ್ತು ನಡೆಸಲಿದೆ. ಮೊದಲ ಹಂತದಲ್ಲಿ, ಜನವರಿ 21 ರೊಳಗೆ ಮುಗಿಯಲಿದ್ದು, ರಾಜ್ಯದ ಎಲ್ಲಾ ಮನೆಗಳ ಸಂಖ್ಯೆಯನ್ನು ಎಣಿಸಲಾಗುತ್ತದೆ. ಎರಡನೆಯದಾಗಿ, ಮಾರ್ಚ್‌ನಿಂದ ಪ್ರಾರಂಭಿಸಿ ಎಲ್ಲಾ ಜಾತಿಗಳು, ಉಪಜಾತಿಗಳು ಮತ್ತು ಧರ್ಮಗಳ ಜನರಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಗಣತಿದಾರರು ಡಿಸೆಂಬರ್ 15 ರಂದು ತರಬೇತಿಯನ್ನು ಪ್ರಾರಂಭಿಸಿದ್ದು, ಎಲ್ಲಾ ಜನರ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿಯನ್ನು ದಾಖಲಿಸುತ್ತಾರೆ.

2023ರ ಫೆಬ್ರುವರಿ ವೇಳೆಗೆ ಕಸರತ್ತು ಪೂರ್ಣವಾಗಬೇಕಿತ್ತು

2023ರ ಫೆಬ್ರುವರಿ ವೇಳೆಗೆ ಕಸರತ್ತು ಪೂರ್ಣವಾಗಬೇಕಿತ್ತು

2023ರ ಮೇ ವೇಳೆಗೆ ಈ ಗಣತಿ ಕಾರ್ಯ ಪೂರ್ಣಗೊಳ್ಳಲಿದೆ. ಈ ಮೊದಲು 2023ರ ಫೆಬ್ರುವರಿ ವೇಳೆಗೆ ಕಸರತ್ತು ಪೂರ್ಣಗೊಳ್ಳಬೇಕಿತ್ತು. ಸಾಮಾನ್ಯ ಆಡಳಿತ ಇಲಾಖೆಯು ಸಮೀಕ್ಷೆಯ ನೋಡಲ್ ಪ್ರಾಧಿಕಾರವಾಗಿದೆ. "ಸಮೀಕ್ಷೆಯ ಭಾಗವಾಗಿ ಮೊಬೈಲ್ ಅಪ್ಲಿಕೇಶನ್ ಮೂಲಕ ಪಂಚಾಯತಿಯಿಂದ ಜಿಲ್ಲಾ ಮಟ್ಟದವರೆಗೆ ಡಿಜಿಟಲ್ ಮೂಲಕ ಡೇಟಾವನ್ನು ಸಂಗ್ರಹಿಸಲಾಗುತ್ತದೆ.

ನರೇಂದ್ರ ಮೋದಿ ಪ್ರಧಾನಿಯಾಗಲು ಕಾಂಗ್ರೆಸ್‌ನ 70 ವರ್ಷದ ಪ್ರಜಾಪ್ರಭುತ್ವ ಕಾರಣ: ಮಲ್ಲಿಕಾರ್ಜುನ ಖರ್ಗೆನರೇಂದ್ರ ಮೋದಿ ಪ್ರಧಾನಿಯಾಗಲು ಕಾಂಗ್ರೆಸ್‌ನ 70 ವರ್ಷದ ಪ್ರಜಾಪ್ರಭುತ್ವ ಕಾರಣ: ಮಲ್ಲಿಕಾರ್ಜುನ ಖರ್ಗೆ

ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತರೂ ಭಾಗಿ

ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತರೂ ಭಾಗಿ

ಈ ಆ್ಯಪ್ ಸ್ಥಳ, ಜಾತಿ, ಕುಟುಂಬದಲ್ಲಿನ ಜನರ ಸಂಖ್ಯೆ, ಅವರ ವೃತ್ತಿ ಮತ್ತು ವಾರ್ಷಿಕ ಆದಾಯದ ಬಗ್ಗೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಜನಗಣತಿ ಕೆಲಸಗಾರರಲ್ಲಿ ಶಿಕ್ಷಕರು, ಅಂಗನವಾಡಿ, ಎಂಜಿಎನ್‌ಆರ್‌ಇಜಿಎ ಅಥವಾ ಜೀವಿಕಾ ಕಾರ್ಯಕರ್ತರು ಸೇರಿದ್ದಾರೆ ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ.

ಗಣತಿ ಕಾರ್ಯ ಶೀಘ್ರ ಮುಗಿಸುವಂತೆ ಆಗ್ರಹ

ಗಣತಿ ಕಾರ್ಯ ಶೀಘ್ರ ಮುಗಿಸುವಂತೆ ಆಗ್ರಹ

ಪಾಟ್ನಾ ಜಿಲ್ಲೆಯ ಒಟ್ಟು 12,696 ಬ್ಲಾಕ್‌ಗಳಲ್ಲಿ ಈ ಗಣತಿ ನಡೆಯಲಿದೆ. ಬಿಹಾರ ರಾಜಕೀಯದಲ್ಲಿ ಜಾತಿ ಆಧಾರಿತ ಎಣಿಕೆ ಪ್ರಮುಖ ವಿಷಯವಾಗಿದೆ, ನಿತೀಶ್ ಕುಮಾರ್ ಅವರ ಜೆಡಿ(ಯು) ಮತ್ತು 'ಮಹಾಘಟಬಂಧನ್'ನ ಎಲ್ಲಾ ಘಟಕಗಳು ಈ ಗಣತಿ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳಬೇಕೆಂದು ದೀರ್ಘಕಾಲ ಒತ್ತಾಯಿಸುದ್ದವು. ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2010 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗಣತಿಯನ್ನು ನಡೆಸಲು ಒಪ್ಪಿಕೊಂಡಿತ್ತು.

1931ರಲ್ಲಿ ನಡೆದಿದ್ದ ಗಣತಿ

1931ರಲ್ಲಿ ನಡೆದಿದ್ದ ಗಣತಿ

ಎಸ್‌ಸಿ ಮತ್ತು ಎಸ್‌ಟಿ ಹೊರತುಪಡಿಸಿ ಬೇರೆ ಜಾತಿ ಆಧಾರಿತ ಗಣತಿಯನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಅಸಮ್ಮತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಸರತ್ತು ಆರಂಭಿಸಿದೆ. 1931 ರಲ್ಲಿ ನಡೆದ ಕೊನೆಯ ಜಾತಿ ಗಣತಿಯಿಂದ ವಿವಿಧ ಸಾಮಾಜಿಕ ಗುಂಪುಗಳ ಹೊಸ ಗಣತಿ ಅತ್ಯಗತ್ಯ ಎಂದು ಸರ್ಕಾರ ಅಭಿಪ್ರಾಯಪಟ್ಟಿದ್ದವು. ಏತನ್ಮಧ್ಯೆ, ಮುಖ್ಯಮಂತ್ರಿ ಶುಕ್ರವಾರವೂ ಸೀತಾಮರ್ಹಿ ಜಿಲ್ಲೆಗೆ ಭೇಟಿ ನೀಡಿದ್ದರು. ಅವರು ದುಮ್ರಾ ಉಪವಿಭಾಗದಲ್ಲಿ ರಾಜ್ಯ ಸರ್ಕಾರದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದರು. ನಂತರ ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದ ಉನ್ನತ ಮಟ್ಟದ ಸಭೆ ನಡೆಸಿದರು.

English summary
The much-awaited caste census has begun in Bihar from today (January 7). Bihar Chief Minister Nitish Kumar said that caste-based census will benefit all sections of the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X