ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಕೇಸ್: ಆರೋಪ ಹೊತ್ತಿರುವ ಶಂಕರ್ ಮಿಶ್ರಾ ಹೇಳಿದ್ದಿಷ್ಟು..

ದೆಹಲಿ ಜನವರಿ 6: ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಶಂಕರ್ ಮಿಶ್ರಾ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ ಮತ್ತು ವೃದ್ಧ ಮಹಿಳೆಗೆ ಪರಿಹಾರವನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ನ್ಯೂಯಾರ್ಕ್-ನವದೆಹಲಿ ವಿಮಾನದಲ್ಲಿ ಮಹಿಳೆಯ ಮೇಲೆ ಕುಡಿದು, ಜಿಪ್ ಬಿಚ್ಚಿಕೊಂಡು ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಶಂಕರ್ ಮಿಶ್ರಾ ಅವರನ್ನು ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ. ಇದೀಗ ತಮ್ಮ ವಕೀಲರ ಮೂಲಕ ಶಂಕರ್ ಮಿಶ್ರಾ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Case of urinating on woman in flight: Accused says the matter has been settled

"ಆರೋಪಿ ಮತ್ತು ಮಹಿಳೆಯ ನಡುವಿನ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದಾಗ, ಆರೋಪಿ ನವೆಂಬರ್ 28 ರಂದು ಬಟ್ಟೆ ಮತ್ತು ಬ್ಯಾಗ್‌ಗಳನ್ನು ಸ್ವಚ್ಛಗೊಳಿಸಿದ್ದಾರೆ ಮತ್ತು ನವೆಂಬರ್ 30 ರಂದು ಅದನ್ನು ತಲುಪಿಸಿದ್ದಾರೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಮಹಿಳೆ ಆಪಾದಿತ ಕೃತ್ಯವನ್ನು ಸ್ಪಷ್ಟವಾಗಿ ಕ್ಷಮಿಸಿದ್ದಾಳೆ ಮತ್ತು ದೂರು ದಾಖಲಿಸುವ ಉದ್ದೇಶವನ್ನು ಹೊಂದಿಲ್ಲ. ಮಹಿಳೆ ಏರ್ ಇಂಡಿಯಾಕ್ಕೆ ಪರಿಹಾರಕ್ಕಾಗಿ ಡಿಸೆಂಬರ್ 20 ರಂದು ದೂರು ನೀಡಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಿಶ್ರಾ ಅವರು ನವೆಂಬರ್ 28 ರಂದು ಇಬ್ಬರ ನಡುವೆ ಒಪ್ಪಂದ ಮಾಡಿಕೊಂಡು PayTM ನಲ್ಲಿ ಒಪ್ಪಂದದಂತೆ ಪರಿಹಾರವನ್ನು ಪಾವತಿಸಿದ್ದಾರೆ. ಘಟನೆಗೆ ಯಾವುದೇ ಪ್ರತ್ಯಕ್ಷದರ್ಶಿಗಳಿಲ್ಲ ಮತ್ತು ಕಕ್ಷಿದಾರರ ನಡುವಿನ ಒಪ್ಪಂದವು ಕ್ಯಾಬಿನ್ ಸಿಬ್ಬಂದಿಯ ಹೇಳಿಕೆಗಳಿಂದ ದೃಢೀಕರಿಸಲ್ಪಟ್ಟಿದೆ'' ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ಆರೋಪಿಯು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದು, ತನಿಖೆಯ ಪ್ರಕ್ರಿಯೆಗೆ ಸಹಕರಿಸಲಿದ್ದಾರೆ ಎಂದು ಮಿಶ್ರಾ ಪರ ವಕೀಲರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+