ಚಿಕನ್ ಕರಿಯಲ್ಲಿ ಇಲಿ ಪತ್ತೆ ಪ್ರಕರಣ: ಮುಂಬೈ ರೆಸ್ಟೋರೆಂಟ್ ಮುಚ್ಚಲು ಸೂಚನೆ!
ಮುಂಬೈ ಆಗಸ್ಟ್ 18: ಗ್ರಾಹಕರೊಬ್ಬರಿಗೆ ನೀಡಿದ ಚಿಕನ್ ಕರಿಯಲ್ಲಿ ಇಲಿ ಮರಿ ಪತ್ತೆಯಾಗಿ ಕೆಲವೇ ದಿನಗಳಲ್ಲಿ ಮುಂಬೈ ರೆಸ್ಟೋರೆಂಟ್ ಅನ್ನು ಮುಚ್ಚಲು ಆದೇಶಿಸಲಾಗಿದೆ.
ಗ್ರಾಹಕರ ದೂರಿನ ಮೇರೆಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧಗಳ ಆಡಳಿತ (ಎಫ್‌ಡಿಎ) ಇಲಾಖೆ ಪಾಪಾ ಪಂಚೋ ದಾ ಡಾಬಾವನ್ನು (Papa Pancho Da Dhaba) ತಪಾಸಣೆ ನಡೆಸಿದೆ. ಬಳಿಕ ಅದನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ನೋಟಿಸ್ ನೀಡಿದೆ.

ತಪಾಸಣೆ ವೇಳೆ ಹಲವಾರು ಅಕ್ರಮಗಳು ಕಂಡುಬಂದಿವೆ. ಎಲ್ಲಾ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುವವರೆಗೆ ರೆಸ್ಟೋರೆಂಟ್ ಬಾಗಿಲು ಮುಚ್ಚಲು ಆದೇಶಿಸಲಾಗಿದೆ ಎಂದು ಎಫ್‌ಡಿಎ ತಿಳಿಸಿದೆ.
ಭಾನುವಾರ ರಾತ್ರಿ ಅನುರಾಗ್ ಸಿಂಗ್ ಮತ್ತು ಅವರ ಸ್ನೇಹಿತ ಅಮೀನ್ ಅವರು ಪಂಜಾಬಿ ಆಹಾರಕ್ಕಾಗಿ ಬಾಂದ್ರಾದ ರೆಸ್ಟೋರೆಂಟ್‌ಗೆ ಹೋಗಿದ್ದರು. ಇಬ್ಬರು ಎರಡು ಭಕ್ಷ್ಯಗಳು ಆರ್ಡರ್ ಮಾಡಿದ್ದರು. ಒಂದು ಮಟನ್ ಮತ್ತೊಂದು ಚಿಕನ್ ಆಧಾರಿತ ಭಕ್ಷ್ಯವನ್ನು ಆರ್ಡರ್ ಮಾಡಿದ್ದರು.
@MumbaiPolice Rat found in our gravy at #papaPanchodadhaba near Pali naka Bandra West . No manager or owner is ready to listen . We called police and 100 as well . No Help yet . @mumbaimirror @TOIMumbai pic.twitter.com/YRJ4NW0Wyk
— Stay_Raw (@AMINKHANNIAZI) August 13, 2023
ಸ್ವಲ್ಪ ವಿಚಿತ್ರವಾದ ರುಚಿಯನ್ನು ಕೋಳಿ ಮಾಂಸ ಹೊಂದಿತ್ತು. ಆದರೆ ಕೋಳಿ ಕರಿಯಲ್ಲಿನ ಮಾಂಸದಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಇದನ್ನು ಕಂಡು ಅನುರಾಗ್ ಬಾಣಸಿಗರ ಮೇಲೆ ಆಕ್ರೋಶಗೊಂಡರು. ಆದರೂ ರೆಸ್ಟೋರೆಂಟ್ ಮಾಲೀಕ ತಪ್ಪನ್ನು ಮರೆ ಮಾಚಲು ಪ್ರಯತ್ನಿಸಿದಾಗ ಅನುರಾಗ್ ದೂರು ನೀಡಲು ಮುಂದಾಗಿದ್ದಾರೆ.

ಆಕ್ರೋಶಗೊಂಡ ಇಬ್ಬರು ವ್ಯಕ್ತಿಗಳು ಹೋಟೆಲ್ ಮ್ಯಾನೇಜರ್‌ನೊಂದಿಗೆ ಜಗಳವಾಡಿದ್ದಾರೆ. ಅನುರಾಗ್ ಹಾಗೂ ಅವರ ಸ್ನೇಹಿತ ಕೇಳಿದ ಪ್ರಶ್ನೆಗೆ ಮ್ಯಾನೇಜರ್ ಅಸ್ಪಷ್ಟ ಉತ್ತರಗಳನ್ನು ನೀಡಿದ್ದಾರೆ. ಬಳಿಕ ಅನುರಾಗ್ ಪೊಲೀಸರಿಗೆ ದೂರು ನೀಡಿ ಘಟನೆಯನ್ನು ವಿವರಿಸಿದ್ದಾರೆ.
ದೂರಿನ ಆಧಾರದ ಮೇಲೆ ರೆಸ್ಟೋರೆಂಟ್‌ನ ಮ್ಯಾನೇಜರ್ ಮತ್ತು ಬಾಣಸಿಗನ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಹೋಟೆಲ್‌ನ ಬಾಣಸಿಗ, ಮ್ಯಾನೇಜರ್ ಮತ್ತು ಚಿಕನ್ ಸರಬರಾಜುದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಹಾರದ ಕಲಬೆರಕೆ ಮತ್ತು ಇತರರ ಜೀವ ಹಾನಿ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವಂತಹ ಅಪರಾಧಗಳನ್ನು ಹೋಟೆಲ್‌ನ ಬಾಣಸಿಗ, ಮ್ಯಾನೇಜರ್ ಮತ್ತು ಚಿಕನ್ ಸರಬರಾಜುದಾರರ ಮೇಲೆ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುರಾಗ್ ಹಾಗೂ ಆತನ ಸ್ನೇಹಿತ ಚಿಕನ್ ಕರಿಯಲ್ಲಿ ಸಿಕ್ಕ ಸತ್ತ ಇಲಿಯ ಫೋಟೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಅದರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅದು 200,000 ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹೆಚ್ಚಿನ ಬಳಕೆದಾರರು ರೆಸ್ಟೋರೆಂಟ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ.












Click it and Unblock the Notifications