ಶಾಸ್ತ್ರೀಯ ಗಾಯಕ ನೆಡನೂರಿ ಕೃಷ್ಣಮೂರ್ತಿ ವಿಧಿವಶ

ಚೆನ್ನೈ, ಡಿ.8: ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಿರಿಯ ಗಾಯಕ, ಸಂಗೀತ ಕಲಾನಿಧಿ ನೆಡನೂರಿ ಕೃಷ್ಣಮೂರ್ತಿ ಅವರು ಸೋಮವಾರ ಮುಂಜಾನೆ ವಿಶಾಖಪಟ್ಟಣಂನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರಿನಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಅವರಿಗೆ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಮೃತರಿಗೆ 87 ವರ್ಷ ವಯಸ್ಸಾಗಿತ್ತು.

ನೆಡನೂರಿ ಗ್ರಾಮದಲ್ಲಿ ಅಕ್ಟೋಬರ್ 10, 1927ರಂದು ಜನಿಸಿದ ಕೃಷ್ಣಮೂರ್ತಿ ಅವರು ಬಾಲ್ಯದಿಂದಲೆ ಪಿಟೀಲು ವಾದನ ಹಾಗೂ ಗಾಯನದಲ್ಲಿ ಆಸಕ್ತಿ ವಹಿಸಿದರು. 1940ರಲ್ಲಿ ದ್ವಾರಂ ನರಸಿಂಗರಾವ್ ನಾಯ್ಡು ಅವರ ಬಳಿ ಶಿಷ್ಯವೃತ್ತಿ ಮಾಡಿದ ಕೃಷ್ಣಮೂರ್ತಿ ಅವರು ನಂತರ ಶ್ರೀಪಾದ ಪಿನಾಕಪಾಣಿ ಅವರಲ್ಲಿ ಕಲಿಕೆ ಮುಂದುವರೆಸಿದರು. ವಿಜಯವಾಡ, ಸಿಕಂದರಾಬಾದ್ ಹಾಗೂ ವಿಶಾಖಪಟ್ಟಣಂನಲ್ಲಿ ಕಲಿಕೆ ಮುಂದುವರೆಯಿತು.

Carnatic vocalist Nedanuri Krishnamurthy Passes Away

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ತ್ರಿಮೂರ್ತಿಗಳಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್ ಹಾಗೂ ಶ್ಯಾಮಶಾಸ್ತ್ರಿಗಳ ಸಂಕೀರ್ತನೆಗಳನ್ನು ಹಾಗೂ ಅನ್ನಮಾಚಾರ್ಯ, ಭದ್ರಾಚಾಲ ರಾಮದಾಸರ ಕೆಲವು ಕೀರ್ತನೆಗಳನ್ನು ಸುಶ್ರಾವ್ಯವಾಗಿ ಕೇಳುಗರ ಮನಮುಟ್ಟುವಂತೆ ಮಾಡುವಲ್ಲಿ ನೆಡನೂರಿ ಅವರು ಯಶಸ್ವಿಯಾಗಿದ್ದರು.

ಅನ್ನಮಾಚಾರ್ಯ ಅವರ 108ಕ್ಕೂ ಅಧಿಕ ಕೀರ್ತನೆಗಳಿಗೆ ಸ್ವರ ಸಂಯೋಜನೆ ಮಾಡಿದ ನೆಡನೂರಿ ಅವರು 15ನೇ ಶತಮಾನದ ಅನ್ನಮಯ್ಯ ಸಂಕೀರ್ತನೆಗಳ ಜನಪ್ರಿಯತೆಗೆ ತಮ್ಮ ಕೊಡುಗೆ ನೀಡಿದ್ದಾರೆ. ನೆಡನೂರಿ ಕೃಷ್ಣಮೂರ್ತಿ ಅವರ ಸಂಗೀತಸೇವೆಯನ್ನು ಪರಿಗಣಿಸಿ ಚೆನ್ನೈನ ಸಂಗೀತ ಅಕಾಡೆಮಿಯಿಂದ 1991ರಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮಲ್ಲಾಡಿ ಸೋದರರು, ಶೋಭಾರಾಜು ಹಾಗೂ ಜಿ ಬಾಲಕೃಷ್ಣ ಪ್ರಸಾದ್ ಅವರು ನೆಡನೂರಿ ಅವರ ಅನೇಕ ಶಿಷ್ಯಂದಿರ ಪೈಕಿ ಪ್ರಮುಖರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+