Cabinet Meeting: ಎಸ್.ಸಿ, ಎಸ್.ಟಿ ಹಾಸ್ಟೆಲ್‍ಗಳಿಗೆ ಮಂಚ್-ಹಾಸಿಗೆ ಪೂರೈಕೆಗೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು, ಡಿಸೆಂಬರ್ 07: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2022-23ನೇ ಸಾಲಿನಲ್ಲಿ ಒದಗಿಸಿದ್ದ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ ಲಭ್ಯವಿರುವ ರೂ. 4266.38 ಲಕ್ಷಗಳ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್ ಹಾಗೂ ಎಲೆಕ್ಟ್ರೀಕ್ ಹಿಟ್ ಪಂಪ್‍ಗಳನ್ನು ಪೂರೈಸುವುದಕ್ಕಾಗಿ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಈ ಕುರಿತು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸುವ ಮೂಲಕ ಸಚಿವ ಹೆಚ್ ಕೆ ಪಾಟೀಲ್ ಅವರು ಮಾಹಿತಿ ನೀಡಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2024-25ನೇ ಸಾಲಿನ ಅಧ್ಯಕ್ಷರ ವಿವೇಚನಾ ನಿಧಿಯಡಿ ಕೈಗೊಳ್ಳಲಾಗುತ್ತಿರುವ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಇಜೇರಿ ದಿಂದ ಯಡ್ರಾಮಿ ವರೆಗೆ 53.42 ಕಿ.ಮೀ ರಿಂದ 63.42 ಕಿ.ಮೀ ವರೆಗೆ ರಸ್ತೆ ಸುಧಾರಣೆ ಕಾಮಗಾರಿಯ ರೂ.25.00 ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಭಾಗ 2ರ ನಿಯಮ 20(3) ರನ್ವಯ ಅನುಬಂಧ 2ರಲ್ಲಿರುವ "ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು 2024" ಕ್ಕೆ ಸಚಿವ ಸಂಪುಟದಿಂದ ಅನುಮೋದನೆ ನೀಡಿದೆ. ಮರಣದ ಪ್ರಮಾಣ ಪತ್ರದಲ್ಲಿ ಕಾಯಿಲೆಯ ಅಥವಾ ಅಸ್ವಸ್ಥತೆಯ ಇತಿಹಾಸ ಒಂದುವೇಳೆ ಲಭ್ಯವಿದ್ದರೇ ದಾಖಲಿಸಲು ವಿದ್ಯುನ್ಮಾನ ಮಾಧ್ಯಮದ ಮೂಲಕ ಜನನ ಮತ್ತು ಮರಣ ಪತ್ರ ವಿತರಿಸುವುದು.
ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯದಿಂದ ಅನುಮೋದಿತ Construction of two lane ROB and its approaches in lieu of existing level crossing no.130 (at km 48.300) from Km 47.900 to Km 49.280 on NH 2027 Koraluru village in State of Karnataka (Job No. NH-207 (7)-2016-17-010-S&R (B) ಕಾಮಗಾರಿಯ ವಿನ್ಯಾಸ ಬದಲಾವಣೆಯಿಂದಾಗಿ ಉಂಟಾಗುವ ಪರಿಷ್ಕøತ ಮೊತ್ತ ರೂ.97.27 ಕೋಟಿಗಳ ಪೈಕಿ ರಾಜ್ಯ ಸರ್ಕಾರದ ವತಿಯಿಂದ ಭರಿಸಬೇಕಿರುವ ಹೆಚ್ಚುವರಿ ಮೊತ್ತ ರೂ.54.25 ಕೋಟಿಗಳ (ಸಣ್ಣ ನೀರಾವರಿ ಇಲಾಖೆಯಿಂದ ನೀಡಲಾಗುವ ರೂ.17.98 ಕೋಟಿಗಳು ಮತ್ತು ಲೋಕೋಪಯೋಗಿ ಇಲಾಖೆಯಿಂದ ರೂ.36.27 ಕೋಟಿಗಳು) ಮೊತ್ತವನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲು" ಸಚಿವ ಸಂಪುಟ ಅನುಮೋದಿಸಿದೆ.
ಬೆಂಗಳೂರು ನಗರದ ಸಂಪಂಗಿರಾಮ ನಗರದಲ್ಲಿ ಸಮಾಜ ಕಲ್ಯಾಣ ಭವನ ವನ್ನು ಪರಿಷ್ಕೃತ ಅಂದಾಜು ರೂ.40.50 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನಮೋದನೆ ನೀಡಲು ಹಾಗೂ ಹಾಲಿ ಇರುವ ಗುತ್ತಿಗೆದಾರರಾದ ಮೆ: ಎನ್. ಬಿ. ಕನ್‍ಸ್ಟ್ರಕ್ಸನ್ಸ್ ರವರಿಗೆ ಪರಿಷ್ಕøತ ಅಂದಾಜು ಮೊತ್ತಕ್ಕೆ ಪರಿಷ್ಕೃತ ಕಾರ್ಯಾದೇಶವನ್ನು ನೀಡಲು ಸಚಿವ ಸಂಪುಟ ಅನುಮೋದಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆ/ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳೂ ಮತ್ತು KREIS ವಸತಿ ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಹೆಯಾನ ರೂ.100/-ಗಳಲ್ಲಿ ಶೇ.25%ರಷ್ಟು ವೆಚ್ಚದಲ್ಲಿ ಶೇಂಗಾ ಚಿಕ್ಕಿ ಮತ್ತು ಇನ್ನುಳಿದ ಶೇ.75% ರಷ್ಟರಲ್ಲಿ ಪೌಷ್ಟಿಕಾಂಶದ ಪುಡಿಯನ್ನು ರೂ.32.95 ಕೋಟಿಗಳ ವೆಚ್ಚದಲ್ಲಿ ಖರೀದಿಸಿ, ಒದಗಿಸಲು ಸಚಿವ ಸಂಪುಟ ಅನುಮೋದಿಸಿದೆ.
ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಮೊದಲನೇ ಅನುಸೂಚಿಯ ಕ್ರಮ ಸಂಖ್ಯೆ: 15ರ ಅನ್ವಯ ಬಿ.ಬಿ.ಎಂ.ಪಿ. ವ್ಯಾಪ್ತಿಯ 389.68 ಕಿ.ಮೀ.ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ರೂ.694.00 ಕೋಟಿಗಳ ಮೊತ್ತವನ್ನು ಬಿ.ಬಿ.ಎಂ.ಪಿ.ಯ ಆಯವ್ಯಯದಲ್ಲಿ 2024-25ನೇ ಸಾಲಿನಲ್ಲಿ ರೂ.300.00 ಕೋಟಿಗಳನ್ನು ಹಾಗೂ 2025-26ನೇ ಸಾಲಿನಲ್ಲಿ ರೂ.394.00 ಕೋಟಿಗಳನ್ನು ಭರಿಸಿಕೊಳ್ಳುವ ಷರತ್ತಿಗೆ ಒಳಪಟ್ಟು ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿರುವ ಸರ್ಕಾರದ ಆದೇಶ ಸಂಖ್ಯೆ: ನಅಇ 446 ಎಂಎನ್‍ವೈ 2024 (ಇ), ದಿನಾಂಕ: 22-11-2024ಕ್ಕೆ (ಅನುಬಂಧ-2) ಸಚಿವ ಸಂಪುಟದ ಘಟನೋತ್ತರ ಅನುಮೋದನೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ 1611.49 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆ ಜಾಲದ ಕೆಲವು ರಸ್ತೆಗಳು ಹಾಳಾಗಿದ್ದು, ವ್ಯಾಪಕ ಸಾರ್ವಜನಿಕ ಟೀಕೆಗೆ ಗುರಿಯಾಗುತ್ತಿದೆ. ತುರ್ತು ಅಭಿವೃದ್ಧಿಯಿಂದ ಸುಗಮ ಸಂಚಾರ ಉಂಟಾಗಿ ವಾಹನ ಸಾಂದ್ರತೆ ಕಡಿಮೆಯಾಗುವ ನಿರೀಕ್ಷೆ ಇದೆ.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೈತರ ಸಹಭಾಗಿತ್ವದ ಶೇ.50:50ರ ಅನುಪಾತದಲ್ಲಿ ಹಾಗರಗಾ ಗ್ರಾಮದ ಸರ್ವೆ ನಂ.213/1, 214/1, 214/2, 214/4, 214/5, 214/6, 215/2, 215/3, 215/4, 215/5, 215/6, 215/7, 216/1, 216/2, 216/3, 217, 218/6, 218/7, 221, 228/1, 228/2ರ ಒಟ್ಟು ವಿಸ್ತೀರ್ಣ 117 ಎಕರೆ-05 ಗುಂಟೆ (ಪೊಟ್ ಖರಾಬ 'ಅ' 14 ಗುಂಟೆ ಒಳಗೊಂಡಂತೆ) ಜಮೀನನಲ್ಲಿ ವಸತಿ ಯೋಜನೆಗೆ 2016-17ನೇ ಸಾಲಿನ ದರಪಟ್ಟಿಯಂತೆ ಯೋಜನೆ ವೆಚ್ಚ ರೂ.6376.00 ಲಕ್ಷಗಳ ಅಂದಾಜು ಮೊತ್ತವನ್ನು ಪ್ರಾಧಿಕಾರವು ಪ್ರಸ್ತುತ2023-24ನೇ ಸಾಲಿನ ದರಪಟ್ಟಿಯಂತೆ ಪರಿಷ್ಕøರಿಸಲಾದ ಅಭಿವೃದ್ಧಿ ಯೋಜನಾ ವೆಚ್ಚ ರೂ.9750.00. ಲಕ್ಷಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಪರಿಷ್ಕøತ ಯೋಜನಾ ವೆಚ್ಚಕ್ಕೆ ಮಂಜೂರಾತಿ ನೀಡಲು" ಸಚಿವ ಸಂಪುಟ ನಿರ್ಣಯಿಸಿದೆ.












Click it and Unblock the Notifications