ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 2 ರಷ್ಟು ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 27: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ ನೀಡಿದೆ. ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಶೇ 2 ರಷ್ಟು ತುಟ್ಟಿಭತ್ಯೆ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಈ ಘೋಷಣೆಯಿಂದ 50 ಲಕ್ಷ ಉದ್ಯೋಗಿಗಳು ಹಾಗೂ 58 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಇದರಿಂದ ನೆರವಾಗಲಿದೆ. 2016ರಲ್ಲಿ ಎನ್ ಡಿಎ ಸರ್ಕಾರ ಉದ್ಯೋಗಿಗಳ ಮೂಲ ವೇತನದ ಮೇಲೆ ಶೇ 6 ರಿಂದ 126ರ ತನಕ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ.

Cabinet approves 2 percent DA for Central government employees

ಗ್ರಾಹಕ ದರ ಸ್ಯೂಚಂಕ ಜುಲೈ 1 ಜುಲೈ 2015 ರಿಂದ 30 ಜೂನ್ 2016ರ ತನಕ ಶೇ 2.92ರಷ್ಟಿತ್ತು. ಹೀಗಾಗಿ ತುಟ್ಟಿ ಭತ್ಯೆ ಶೇ 3ರಷ್ಟು ನೀಡಬೇಕು ಎಂದು ಉದ್ಯೋಗಿಗಳು ಆಗ್ರಹಿಸಿದ್ದರು.ನ್ಯಾ ಎಕೆ ಮಾಥೂರ್ ನೇತೃತ್ವದ ನಿಯೋಗ ನೀಡಿದ 7ನೇ ವೇತನ ಆಯೋಗದ ಶಿಫಾರಸುಗಳು ಜನವರಿ 01, 2017ರಿಂದ ಅನುಷ್ಠಾನಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ahead of Deepavali festival, the union cabinet has approved a 2 percent dearness allowance in the salary of people working with the Central government.
Please Wait while comments are loading...