• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪ ಚುನಾವಣೆ: ಬಿಜೆಪಿ ಕಳೆದುಕೊಂಡಿದ್ದೇ ಹೆಚ್ಚು

|

ನವದೆಹಲಿ, ಸೆ. 16 : ಮೂರು ಲೋಕಸಭಾ ಕ್ಷೇತ್ರ ಸೇರಿದಂತೆ 9 ರಾಜ್ಯಗಳ 32 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ಲೋಕಸಭಾ ಕ್ಷೇತ್ರಗಳ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಎಲ್ಲ ಪಕ್ಷಗಳು ತಮ್ಮ ತಮ್ಮ ಸ್ಥಾನ ಕಾಪಾಡಿಕೊಂಡಿವೆ.(ಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲ)

ನರೇಂದ್ರ ಮೋದಿ ರಾಜೀನಾಮೆ ನೀಡಿರುವ ಗುಜರಾತ್‌ನ ವಡೋದರಾದಲ್ಲಿ ಬಿಜೆಪಿಯ ರಂಜನ್‌ ಬೆನ್ ಭಟ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮುಲಾಯಂ ಸಿಂಗ್ ಯಾದವ್ ರಾಜೀನಾಮೆಯಿಂದ ತೆರವಾಗಿದ್ದ ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ಅವರ ಮೊಮ್ಮಗ ತೇಜ್‌ ಪ್ರತಾಪ್‌ ಯಾದವ್‌ಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. ಇನ್ನು ತೆಲಂಗಾಣಾದ ಮೇದಕ್‌ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಟಿಆರ್‌ಎಸ್‌ ಗೆಲುವಿನ ದಡ ಸೇರಿದೆ.(ಯಾರಿಗೆ ಲಾಭ? ಯಾರಿಗೆ ನಷ್ಟ? ಲೆಕ್ಕಾಚಾರ ಶುರು)

trs

ವಿಧಾನಸಭಾ ಕ್ಷೇತ್ರಗಳು
ಉತ್ತರ ಪ್ರದೇಶದ 11 ಕ್ಷೇತ್ರಗಳಲ್ಲಿ ಆಡಳಿತಾರೂಢ ಸಮಾಜವಾದಿ ಪಾರ್ಟಿ 8 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 3 ಕ್ಷೇತ್ರಗಳಲ್ಲಿ ಜಯಗಳಿಸಿವೆ. ಗುಜರಾತ್‌ನ 9 ಕ್ಷೇತ್ರಗಳ ಪೈಕಿ 6 ರಲ್ಲಿ ಬಿಜೆಪಿ ಮತ್ತು 3 ರಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ.
ರಾಜಸ್ಥಾನದ 4 ಕ್ಷೇತ್ರಗಳಲ್ಲಿ 3 ರನ್ನು ಕೈ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೆ ಒಂದು ಸ್ಥಾನಕ್ಕೆ ಕಮಲ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಪಶ್ಚಿಮ ಬಂಗಾಳದ 2 ಸ್ಥಾನಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ತಲಾ ಒಂದೊಂದು ಸ್ಥಾನ ಗಳಿಸಿವೆ.
ಅಸ್ಸಾಂನ ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಐಯುಡಿಎಫ್‌ಗೆ ತಲಾ ಒಂದೊಂದು ಸ್ಥಾನಗಳನ್ನು ಮತದಾರ ಫ್ರಭು ದಯಪಾಲಿಸಿದ್ದಾನೆ.

ಇಡೀ ದಿನದ ಘಟನಾವಳಿಗಳು
3.32: ಪ್ರತಿಯೊಂದು ಕ್ಷೇತ್ರದ ಸೋಲನ್ನು ಹಂತಹಂತವಾಗಿ ಚರ್ಚೆ ಮಾಡಲು ಬಿಜೆಪಿಯ ಹಿರಿಯ ನಾಯಕರಿಂದ ನಿರ್ಧಾರ

3.15 : ನಾವು ಈ ತರಹದ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಫಲಿತಾಂಶದ ಮೇಲೆ ಸ್ಥಳೀಯ ಸಂಗತಿಗಳು ಪರಿಣಾಮ ಬೀರಿರಬಹುದು. ಈ ಬಗ್ಗೆ ಎಲ್ಲ ರಾಜ್ಯಗಳ ಪ್ರಮುಖ ನಾಯಕರೊಂದಿಗೆ ಚರ್ಚಿಸಲಾಗುವುದು ಎಂದು ಬಿಜೆಪಿ ಮುಖಂಡ ಎಂ.ಎ.ನಖ್ವಿ ತಿಳಿಸಿದರು.


2.45 : ಬಿಜೆಪಿ ಮತ್ತು ಕೇಸರಿ ಪಡೆಯ ಕುತಂತ್ರಗಳಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದ ಆನಂದಶರ್ಮಾ.
2.30: ಸಮಾಜವಾದಿ ಪಕ್ಷದ ಕಾರ್ಯಕರ್ತರಿಂದ ಲಕ್ನೋದಲ್ಲಿ ಸಂಭ್ರಮಾಚರಣೆ ಆರಂಭ.
1.45: ಮುಲಾಯಂ ಸಿಂಗ್‌ ಯಾದವ್ ಮೊಮ್ಮಗ ತೇಜ್‌ ಪ್ರತಾಪ್‌ಗೆ ಮೈನ್‌ಪುರಿ ಕ್ಷೇತ್ರದಲ್ಲಿ ಮೂರು ಲಕ್ಷ ಮತಗಳ ಅಂತರದ ಗೆಲುವು.
1.25: ರಾಜಸ್ಥಾನದ ನಸೀರಾಬಾದ್ ಕ್ಷೇತ್ರದಲ್ಲಿ ಮತ ಮರುಎಣಿಕೆಯ ನಂತರ ಕಾಂಗ್ರೆಸ್‌ನ ಅಭ್ಯರ್ಥಿ ಜಯಗಳಿಸಿದ್ದಾರೆ ಎಂದು ಘೊಷಣೆ.
12.58 :ಬಿನ್ಜೋರ್ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿಗೆ 11,567 ಮತಗಳ ಅಂತರದ ಜಯ.
12.49: ಗುಜರಾತ್‌ ಕಂಬಾಲಿಯಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯಥಿಗೆ 1,277 ಮತಗಳ ಅಂತರದ ಜಯ.
12.18: ಕಾಂಗ್ರೆಸ್‌ ಮುಖಂಡ ಸಚಿನ್ ಪೈಲೆಟ್ ಸುದ್ದಿಗೋಷ್ಠಿ.
11.30: ಪಶ್ಚಿಮ ಬಂಗಾಳದ ಬಾರ್ಸಿತ್ ದಕೀನ್ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು, ಅಸ್ಸಾಂನ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಎಐಡಿಎಫ್‌ಗೆ ಜಯ.

11.06: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಸೊನ್ನೆ ಸುತ್ತಿದ ಬಿಜೆಪಿ. ಆಂಧ್ರದ ನಂದಿಗಾಮಾದಲ್ಲಿ ಟಿಡಿಪಿಯ ಟಿ.ಸೌಮ್ಯಾಗೆ 75 ಸಾವಿರ ಮತಗಳ ಅಂತರದ ಜಯ.

11.09: ರಾಜಸ್ಥಾನದ ವಿಯರ್ ಕ್ಷೇತ್ರದಲ್ಲಿ ಗೆಲುವುನ ನಗೆ ಬೀರಿದ ಕಾಂಗ್ರೆಸ್.
10.22: ನರೇಂದ್ರ ಮೋದಿ ತೆರವು ಮಾಡಿದ್ದ ವಡೋದರಾ ಕ್ಷೇತ್ರದಲ್ಲಿ ಬಿಜೆಪಿಯ ರಂಜನ್‌ ಬೆನ್ ಭಟ್‌ ಅವರಿಗೆ ಭರ್ಜರಿ ಗೆಲುವು
10.18 : ಗುಜರಾತ್ ನ ಮಾಂಗ್ರೋಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಾಬು ವಾಜಾಗೆ ಗೆಲುವು.
10.06 : ಗುಜರಾತ್‌ನ ಮಣಿನಗರದಲ್ಲಿ ಬಿಜೆಪಿಗೆ ಜಯ
10.00 : ವಡೋದರಾದಲ್ಲಿ ಬಿಜೆಪಿಗೆ 1,40,000 ಮತಗಳ ಮುನ್ನಡೆ.
9.57 : ಉತ್ತರ ಪ್ರದೇಶದ ಮೈನ್ಪುರಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷಕ್ಕೆ 33 ಸಾವಿರ ಮತಗಳ ಮುನ್ನಡೆ.
9.52 : ಉತ್ತರರ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳ ಪೈಕಿ 8 ರಲ್ಲಿ ಸಮಾಜವಾದಿ ಪಾರ್ಟಿ ಮುನ್ನಡೆ, ಗುಜರಾತ್ ನ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
9.50 : ಕಾಶ್ಮೀರ ಪ್ರವಾಹ ಹಿನ್ನೆಲೆಯಲ್ಲಿ ವಿಜಯೋತ್ಸವ ಇಲ್ಲ ಎಂದ ಬಿಜೆಪಿ.
9.00 : ಗುಜರಾತ್ ನ 9 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ 4ರಲ್ಲಿ ಕಾಂಗ್ರೆಸ್ ಮುನ್ನಡೆ
8.00 : ಲೋಕಸಭಾ ಕ್ವೇತ್ರದ ಮೂರು ಮತ್ತು ವಿವಧ ರಾಜ್ಯಗಳ 33 ವಿಧಾಸಭಾ ಕ್ಷೇತ್ರದ ಮತೆಣಿಕೆ ಏಕಕಾಲಕ್ಕೆ ಆರಂಭಗಳೂರು, ಸೆ. 16 : ಮೂರು ಲೋಕಸಭಾ ಕ್ಷೇತ್ರ ಸೇರಿದಂತೆ ವಿವಿಧ ರಾಜ್ಯಗಳ 33 ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮಂಗಳವಾರ ಬೆಳಿಗ್ಗೆ ಆರಂಭವಾಗಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Counting of votes began on Tuesday in three Lok Sabha and 32 Assembly constituencies spread across 10 states where bypolls were held, with stakes high for BJP. The three Lok Sabha seats are in Vadodara (Gujarat), vacated by Prime Minister Narendra Modi, Mainpuri (Uttar Pradesh) vacated by SP chief Mulayam Singh Yadav and Medak (Telangana).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more