ಬೈಜೂಸ್ ಸಂಸ್ಥಾಪಕನಿಗೆ 6 ತಿಂಗಳು ಜೈಲು ಶಿಕ್ಷೆ, ಒಂದು ಕಾಲದ ಭಾರತದ ನಂ.1 ಸ್ಟಾರ್ಟ್‌ಅಪ್ ಒಡೆಯನಿಗೆ ಆಗಿದ್ದೇನು?

ಒಂದು ಕಾಲದಲ್ಲಿ ಭಾರತದ ಅತ್ಯಂತ ಯಶಸ್ವಿ ಬಿಲಿಯನೇರ್ ಮತ್ತು ಸ್ಟಾರ್ಟ್-ಅಪ್ ವಲಯದ ದೈತ್ಯ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಬೈಜೂಸ್ (Byju's) ಸಂಸ್ಥೆಯ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವೊಂದು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಆದೇಶಗಳನ್ನು ನಿರಂತರವಾಗಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಬೈಜು ರವೀಂದ್ರನ್ ಅವರು ತಮ್ಮ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 2024ರಿಂದ ನ್ಯಾಯಾಲಯ ನೀಡಿದ್ದ ಸರಣಿ ಆದೇಶಗಳನ್ನು ಪಾಲಿಸಲು ವಿಫಲರಾಗಿದ್ದಾರೆ. ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ಸಿಂಗಾಪುರ ಕೋರ್ಟ್ ಅವರಿಗೆ ಈ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ, ತಕ್ಷಣವೇ ಅಧಿಕಾರಿಗಳ ಮುಂದೆ ಶರಣಾಗುವಂತೆ ಅವರಿಗೆ ಸೂಚಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ, ನ್ಯಾಯಾಲಯದ ವೆಚ್ಚವಾಗಿ ಸುಮಾರು 90,000 ಸಿಂಗಾಪುರ ಡಾಲರ್ (ಅಂದಾಜು 67.50 ಲಕ್ಷ ರೂಪಾಯಿ) ಪಾವತಿಸಲು ಮತ್ತು 'ಬೀಆರ್ ಇನ್ವೆಸ್ಟ್‌ಕೋ ಪ್ರೈವೇಟ್ ಲಿಮಿಟೆಡ್' ಎಂಬ ಸಂಸ್ಥೆಯ ಮೇಲಿನ ತಮ್ಮ ಕಾನೂನುಬದ್ಧ ಮಾಲೀಕತ್ವದ ದಾಖಲೆಗಳನ್ನು ಹಾಜರುಪಡಿಸಲು ಆದೇಶಿಸಲಾಗಿದೆ.‌

Byju Raveendran

ಕತಾರ್ ಹೂಡಿಕೆ ಸಂಸ್ಥೆಯಿಂದ ಕಾನೂನು ಸಮರ

ಬೈಜೂಸ್ ಸಂಸ್ಥೆಯು ಆರ್ಥಿಕ ನಷ್ಟ ಅನುಭವಿಸುತ್ತಾ, ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದ್ದ ಕಠಿಣ ಸಂದರ್ಭದಲ್ಲಿ ಕತಾರ್ ದೇಶದ ಸಾರ್ವಭೌಮ ನಿಧಿಯಾದ 'ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿ'ಯ (QIA) ಅಂಗಸಂಸ್ಥೆಯೊಂದು ಬೈಜೂಸ್‌ನಲ್ಲಿ ಭಾರಿ ಹೂಡಿಕೆ ಮಾಡಿತ್ತು. ಆದರೆ ಒಪ್ಪಂದದ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ, ಪ್ರಸ್ತುತ ಇದೇ ಕತಾರ್ ಹೋಲ್ಡಿಂಗ್ಸ್ ಸಂಸ್ಥೆಯು ಬೈಜು ರವೀಂದ್ರನ್ ವಿರುದ್ಧ ಸಿಂಗಾಪುರ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದೆ. ಪ್ರಕರಣದಲ್ಲಿ ಕತಾರ್ ಹೋಲ್ಡಿಂಗ್ಸ್ ಪರವಾಗಿ 'ಡ್ರೂ ಮತ್ತು ನೇಪಿಯರ್' ಹಾಗೂ ಬೈಜೂಸ್ ಪರವಾಗಿ 'ಫರ್ವೆಂಟ್ ಚೇಂಬರ್ಸ್' ಕಾನೂನು ಸಂಸ್ಥೆಗಳು ವಾದ ಮಂಡಿಸುತ್ತಿವೆ.

Bengaluru: ಉಗಾಂಡದಿಂದ ನಗರಕ್ಕೆ ಬಂದ ಮಹಿಳೆಯಲ್ಲಿ ಡೆಡ್ಲಿ ಎಬೋಲಾ ಸೋಂಕು ಶಂಕೆ, ಅಲರ್ಟ್
Bengaluru: ಉಗಾಂಡದಿಂದ ನಗರಕ್ಕೆ ಬಂದ ಮಹಿಳೆಯಲ್ಲಿ ಡೆಡ್ಲಿ ಎಬೋಲಾ ಸೋಂಕು ಶಂಕೆ, ಅಲರ್ಟ್

ಕಾನೂನು ಸಮರದಲ್ಲಿ ಸಿಲುಕಿದ ರವೀಂದ್ರನ್

ಒಂದು ಕಾಲದಲ್ಲಿ ಭಾರತದ ಅತ್ಯಂತ ಯಶಸ್ವಿ ಬಿಲಿಯನೇರ್ ಆಗಿ ಗುರುತಿಸಿಕೊಂಡಿದ್ದ ಬೈಜು ರವೀಂದ್ರನ್ ಅವರಿಗೆ ಇದು ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಸಿಂಗಾಪುರ ಮಾತ್ರವಲ್ಲದೆ, ಅಮೆರಿಕದಲ್ಲೂ ಅವರು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಅಮೆರಿಕದ ಹೂಡಿಕೆದಾರರಿಂದ ಪಡೆದಿದ್ದ 1.2 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ ರೂಪಾಯಿಗೂ ಅಧಿಕ) ಸಾಲದ ಮರುಪಾವತಿಗೆ ಸಂಬಂಧಿಸಿದಂತೆ ಅಲ್ಲಿನ ಸಾಲದಾತರು ಮತ್ತು ವಿದೇಶಿ ಹೂಡಿಕೆದಾರರು ಬೈಜು ರವೀಂದ್ರನ್ ವಿರುದ್ಧ ತೀವ್ರ ಕಾನೂನು ಸಮರ ಸಾರಿದ್ದಾರೆ.

ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ಜಾಗತಿಕ ತಾರೆಗಳನ್ನು ನೇಮಿಸಿಕೊಂಡು, ವಿಶ್ವದಾದ್ಯಂತ ಶಾಖೆಗಳನ್ನು ತೆರೆದಿದ್ದ ಬೈಜೂಸ್, ಸದ್ಯ ಜಾಗತಿಕ ಮಟ್ಟದಲ್ಲಿ ದಿವಾಳಿತನ ಮತ್ತು ಕ್ರಿಮಿನಲ್ ಮೊಕದ್ದಮೆಗಳ ಸುಳಿಗೆ ಸಿಲುಕಿ ಸಂಪೂರ್ಣವಾಗಿ ಹೈರಾಣಾಗಿದೆ. ಭಾರತೀಯ ಸ್ಟಾರ್ಟ್-ಅಪ್ ವಲಯದಲ್ಲಿ ದೈತ್ಯನಾಗಿ ಬೆಳೆದಿದ್ದ ಬೈಜೂಸ್, ಸದ್ಯ ಜಾಗತಿಕ ಮಟ್ಟದಲ್ಲಿ ತೀವ್ರ ಆರ್ಥಿಕ ಮತ್ತು ಕಾನೂನು ಸಂಕಷ್ಟಗಳ ಸುಳಿಗೆ ಸಿಲುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+