Robert Vadra: ಸತತ 06 ಗಂಟೆ ಇಡಿ ವಿಚಾರಣೆ ಎದುರಿಸಿದ ರಾಬರ್ಟ್ ವಾದ್ರಾ! ಪ್ರಕರಣ ವಿವರ
ನವದೆಹಲಿ, ಏಪ್ರಿಲ್ 16: ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರ ಕಂಪನಿಗೆ ಖರೀದಿಸಿ ಭೂಮಿ ವ್ಯವಹಾರದಲ್ಲಿ ಅಕ್ರಮ ನಡೆದಿದೆ. ಕಾಂಗ್ರೆಸ್ ರೈತರ ಜಮೀನು ಕಸಿದು ವಾದ್ರಾ ಅವರಿಗೆ ನೀಡಿದೆ ಎಂದು ಬಿಜೆಪಿ ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಾದ್ರಾ ಅವರಿಗೆ ನೋಟಿಸ್ ನೀಡಿತ್ತು. ನೋಟಿಸ್ ಪಡೆದ ವಾದ್ರಾ ಮಂಗಳವಾರ ದೆಹಲಿಗೆ ಇಡಿ ಕಚೇರಿಗೆ ಹಾಜರಾದರು. 06 ಗಂಟೆ ವಿಚಾರಣೆ ಎದುರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿದ್ದ ವೇಳೆ ಹರಿಯಾಣದಲ್ಲಿ 2007 ರಲ್ಲಿ ರಾಬರ್ಟ್ ವಾದ್ರಾ ಅವರಿಗೆ ಸಂಬಂಧಿಸಿದ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ಭೂಮಿ ಖರೀದಿಸಿತ್ತು. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ಹೀಗಾಗಿ ಜಾರಿ ನಿರ್ದೇಶನಾಲಯ ವಾದ್ರಾ ಅವರ ವಿಚಾರಣೆಗಾಗಿ ಸಮನ್ಸ್ ನೀಡಿ ಕಚೇರಿಗೆ ಕರೆಸಿಕೊಂಡಿದೆ. ಇದೇ ತಿಂಗಳು ಏಪ್ರಿಲ್ 08 ರಂದು ವಾದ್ರಾ ಅವರಿಗೆ ನೋಟಿಸ್ ನೀಡಲಾಗುತ್ತಿದೆ. ಅವರು ಎರಡನೇ ಭಾರಿ ನೋಟಿಸ್ ಪಡೆದು, ಏಪ್ರಿಲ್ 15ರಂದು ಬೆಳಿಗ್ಗೆ 11 ಗಂಟೆ ಕಚೇರಿಗೆ ಹಾಜರಾಗಿದ್ದಾರೆ.

ಜಾರಿ ನಿರ್ದೇಶಕರು ಸುಮಾರು ಆರು ಗಂಟೆಗಳ ಕಾಲ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದ ಹೇಳಿಕೆ ದಾಖಲಿಸಿಕೊಂಡಿದೆ. ಈ ಹಿಂದೆ ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿ ರಾಬರ್ಟ್ ವಾದ್ರಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಹೆಸರನ್ನು ತನಿಖಾಧಿಕಾರಿಗಳು ಹೆಸರಿಸಿದ್ದಾರೆ. ಇದೇ ವೇಳೆ ಈ ಭೂ ವ್ಯವಹಾರದ ಕುರಿತು ರಾಬರ್ಟ್ ವಾದ್ರಾ ಅವರನ್ನು ವಿಚಾರಣೆ ನಡೆಸಲಾಗಿದೆ.
ಏಪ್ರಿಲ್ 8ಕ್ಕೆ ವಿಚಾರಣೆಗೆ ಹಾಜರಾಗದ ವಾದ್ರಾ
ಏಪ್ರಿಲ್ 8ರಂದು ವಿಚಾರಣೆಗೆ ಹಾಜರಾಗದ ಉದ್ಯಮಿಯನ್ನು ಮಂಗಳವಾರ ಆರು ಗಂಟೆ ವಿಚಾರಣೆ ತನಿಖಾಧಿಕಾರಿಗಳು ಸಂಜೆ 6 ಗಂಟೆಗೆ ವರೆಗೆ ತನಿಖೆ ನಡೆಸಿ ಕಳುಹಿಸಿದ್ದಾರೆ. ಸುಮಾರು ಒಂದೂವರೆಗೆ ದಶಕ ಹಿಂದಿನ ಪ್ರಕರಣದ ವಿಚಾರಣೆ ಇಂದಿಗೂ ನಡೆಯುತ್ತಿದೆ. ಸಮನ್ಸ್ ಜಾರಿ ಬಳಿಕ ರಾಬರ್ಟ್ ವಾದ್ರಾ ಸೆಂಟ್ರಲ್ ದೆಹಲಿಯ ಸುಜನ್ ಸಿಂಗ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇಡಿ ಕಚೇರಿಗೆ ನಡೆದು ಬಂದರು ಎನ್ನಲಾಗಿದೆ.
ಇದೇ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು. ಈ ಪ್ರಕರಣವು ಸುಮಾರು 20 ವರ್ಷ ಹಳೆಯದಾಗಿದೆ. ಬಿಜೆಪಿ ಕೇಂದ್ರ ಸಂಸ್ಥೆಗಳನ್ನು ಇಟ್ಟುಕೊಂಡು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಅವರು ದೂರಿದರು.
ತನಿಖಾ ಸಂಸ್ಥೆಗಳ ದುರುಪಯೋಗ: ವಾದ್ರಾ ಆರೋಪ
ನಾನು ಜನಪರವಾಗಿ, ಅಲ್ಪಸಂಖ್ಯಾತರ ಹಿತಾಸಕ್ತಿ ಪರ ಮಾತನಾಡಿದಾಗ, ಸರ್ಕಾರದ ನ್ಯೂನ್ಯತೆ ಎತ್ತಿ ತೋರಿಸಿದಾಗ ನನ್ನ ಮೇಲೆ ಈ ರೀತಿ ಮಾಡಲಾಗುತ್ತದೆ. ಈ ಮೂಲಕ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನನ್ನ ಕಂಪನಿಗೆ ಸಂಬಂಧಿಸಿದ ಭೂಮಿ ಖರೀದಿ ಪ್ರಕರಣದಲ್ಲಿ ಯಾವುದೇ ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ ಎಂದ ಅವರು ಆರೋಪಗಳನ್ನು ತಳ್ಳಿ ಹಾಕಿದರು.
23,000 ದಾಖಲೆ ಸಲ್ಲಿಕೆ: ವಾದ್ರಾ
ನಾನು ಇದುವರೆಗೆ ಪ್ರಕರಣ ಸಂಬಂಧ 15 ಬಾರಿ ಇಡಿ ಕಚೇರಿಗೆ ಹೋಗಿದ್ದೇನೆ. ಒಂದೊಮ್ಮೆ 10 ಗಂಟೆಗೂ ಹೆಚ್ಚು ಸಮಯ ವಿಚಾರಣೆ ಎದುರಿಸಿದ್ದೇನೆ. ಈವರೆಗೆ 23,000 ದಾಖಲೆಗಳನ್ನು ಸಲ್ಲಿಸಿದ್ದೇನೆ. ಇಷ್ಟೆಲ್ಲ ದಾಖಲಾತಿ ನೀಡಿದರೂ ಇನ್ನೂ ದಾಖಲೆ ಬೇಕು, ವಿಚಾರಣೆ ಇದೆ ಎನ್ನುತ್ತಿದ್ದಾರೆ. ಇದೆಲ್ಲ ನೋಡಿದರೆ ಇಡಿ ತನಿಖೆ ಹೇಗೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ಹೊರ ಹಾಕಿದರು.
ಮಾಧ್ಯಮ ಎಲ್ಲ ಪ್ರಶ್ನೆಗಳಿಗೂ ನಾನು ಉತ್ತರಿಸುವ. ಇಷ್ಟು ಹಳೆಯ ಪ್ರಕರಣ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಯಾವ ನಿರ್ಧಾರಕ್ಕೂ ಬರಲಾಗುತ್ತಿಲ್ಲ. ಇಂತಹ ಪ್ರಕರಣ ಕುರಿತು ನೀವು ಕೇಳುತ್ತಿದ್ದೀರಿ. ಇದರಲ್ಲಿ ಸೇಡಿನ ರಾಜಕೀಯ ಬಿಟ್ಟರೆ ಬೇರೆನಿದೆ ಎಂದರು.
ಏನಿದು ಪ್ರಕರಣ, 2007 ರಲ್ಲಿ ಆಗಿದ್ದೇನು?
ರಾಭರ್ಟ್ ವಾದ್ರಾ ಅವರು ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ನಿರ್ದೇಶಕರಾಗಿದ್ದರು. ಈ ವೇಳೆ ಕಾಂಗ್ರೆಸ್ ಆಡಳಿತ ಇತ್ತು. ಭೂಪಿಂದರ್ ಹೂಡಾ ಅವರು ಮುಖ್ಯಮಂತ್ರಿ ಆಗಿದ್ದರು. ಈ ವೇಳೆ ವಾದ್ರಾರ ಕಂಪನಿಗಾಗಿ 2007 ರಲ್ಲಿ ಓಂಕಾರೇಶ್ವರ್ ಪ್ರಾಪರ್ಟೀಸ್ ಹೆಸರಿನ ಸಂಸ್ಥೆಯಿಂದ 3.5 ಎಕರೆ ಭೂಮಿಯನ್ನು ಕಂಪನಿಗೆ ನೀಡಲಾಗಿತ್ತು. 7.5 ಕೋಟಿ ರೂ.ಗೆ ಖರೀದಿ ವ್ಯವಹಾರ ನಡೆದಿತ್ತು.
ವರ್ಷಗಳ ನಂತರ ಅದೇ ಭೂಮಿಯನ್ನು ಅಪಾರ್ಟ್ಮೆಂಟ್ ನಿರ್ಮಿಸಲು ಸರ್ಕಾರದಿಂದ ಅನುಮತಿ ಪಡೆಯಲಾಗಿತ್ತು. ಅನುಮತಿ ಪಡೆದ ನಂತರ ಭೂಮಿಯನ್ನು ರಿಯಲ್ ಎಸ್ಟೇಟ್ ಪ್ರಮುಖ ಡಿಎಲ್ಎಫ್ ಗೆ 58 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ರೈತರ ಭೂಮಿ ಕಸಿದು ರಾಬರ್ಟ್ ವಾದ್ರಾಗೆ ನೀಡಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಎಲ್ಲ ಆರೋಪಗಳನ್ನು ವಾದ್ರಾ ವರ್ಷಗಳಿಂದಲೂ ನಿರಾಕರಿಸುತ್ತಲೇ ಬಂದಿದ್ದಾರೆ. ಇದೀಗ ಮತ್ತೆ ಸಮಸ್ಯೆ ಪಡೆದು ವಿಚಾರಣೆಗೆ ಹಾಜರಾದ ಅವರು ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ:ಚಾರ್ಜ್‌ಶೀಟ್
ತನಿಖಾಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂದಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡ್ ಸೇರಿದಂತೆ ಹಲವು ಕಾಂಗ್ರೆಸ್ ಮಹನೀಯರ ಹೆಸರು ಉಲ್ಲೇಖಿಸಲಾಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ದೆಹಲಿ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪ್ರತಿಭಟನೆ ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಹ ವಿರೋಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದು, ಇದು ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ. ಪ್ರತಿಕಾರ ತೀರಿಸಿಕೊಂಡವರಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಅವರು ದೂರಿದ್ದಾರೆ. ಚಾರ್ಜ್ ಶಿಟ್ ಸಲ್ಲಿಕೆ ಆಗಿದ್ದು, ಮುಂದಿನ ಪ್ರಕ್ರಿಯೆ ಕುರಿತು ಕೂತಹಲ ಹೆಚ್ಚಾಗಿದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications