ಕ್ರೀಮ್‌ಗೆ ಟ್ಯಾಕ್ಸ್, ಬನ್‌ಗೆ ಇಲ್ಲ ಪ್ರಶ್ನೆಗೆ ಕ್ಷಮಾಪಣೆ ಕೇಳಿಸಿದರೇ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ವಾಣಿಜ್ಯ ಉದ್ಯಮಿಗಳು, ವ್ಯಾಪಾರಿಗಳು ನೇರಾ ನೇರವಾಗಿ ಪ್ರಶ್ನೆ ಕೇಳಿ ಮುಜುಗರಕ್ಕೆ ಒಳಪಡಿಸುವುದನ್ನು ನೀವು ನೋಡಿರುತ್ತೀರಿ. ಇನ್ನು ಸೋಷಿಯಲ್ ಮೀಡಿಯಾದಲ್ಲಂತೂ ನಿರ್ಮಲಾ ಸೀತಾರಾಮನ್ ಅವರು ಇನ್ನಿಲ್ಲದಂತೆ ಟ್ರೋಲ್‌ಗೆ ಗುರಿಯಾಗುವುದಿದೆ. ಟ್ರೋಲರ್ಸ್ ಅವರ ಆರ್ಥಿಕ ನೀತಿಯ ಬಗ್ಗೆ ಭಿನ್ನವಾಗಿ ಟ್ರೋಲ್ ಮಾಡುವುದಿದೆ. ಈ ಪರಿ ಟ್ರೋಲ್ ಆದರೂ ನಿರ್ಮಲಾ ಸೀತಾರಾಮನ್ ಅವರು ರಿಯಾಕ್ಟ್ ಮಾಡಿದ್ದು ತೀರ ವಿರಳ.
ಈ ಬಾರಿ ಅವರು ನಡೆದುಕೊಂಡಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲ. ರಾಜಕೀಯದಲ್ಲೂ ಭಾರೀ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡಿನ ಹೋಟೆಲ್ ಮಾಲೀಕರೊಬ್ಬರನ್ನು ತಾವಿರುವಲ್ಲಿಗೆ ಕರೆಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಅವರಿಂದ ಕ್ಷಮಾಪಣೆ ಕೇಳಿಸಿದ್ದಾರೆ ಎನ್ನಲಾದ ವಿಡಿಯೋ ಇದೀಗ ಭಾರೀ ಸಂಚಲನವನ್ನೇ ಮೂಡಿಸಿದೆ. ಈ ವಿಡಿಯೋಗೆ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು. ನಿರ್ಮಲಾ ಅವರಿಗೆ ಈ ವರ್ತನೆ ಶೋಭೆ ತರುವುದಿಲ್ಲ ಎಂದು ಹೇಳಲಾಗುತ್ತಿದೆ.

ಹೋಟೆಲ್ ಮಾಲೀಕರೊಂದಿಗೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂವಾದ ಕಾರ್ಯಕ್ರಮದಲ್ಲಿ ಹಲವು ಪ್ರತಿಷ್ಠಿತ ಹೋಟೆಲ್‌ಗಳ ಮಾಲೀಕರು ಭಾಗವಹಿಸಿದ್ದರು. ಅಲ್ಲದೇ ವಾಣಿಜ್ಯ ಉದ್ಯಮಿಗಳು ಸಹ ಭಾಗವಹಿಸಿದ್ದರು. ಸಂವಾದ ನಡೆಯುವ ಸಂದರ್ಭದಲ್ಲಿ ತಮಿಳುನಾಡಿನ ರೆಸ್ಟೋರೆಂಟ್ ಚೈನ್ ಅನ್ನಪೂರ್ಣ ಎನ್ನುವ ಹೋಟೆಲ್‌ಗಳ ಮಾಲೀಕರಾದ ಶ್ರೀನಿವಾಸ್ ಅವರು ಪ್ರಶ್ನೆಯೊಂದನ್ನು ಕೇಳಿದ್ದರು. ಅದಕ್ಕೆ ನಿರ್ಮಲಾ ಸೀತಾರಾಮನ್ ಅವರು ಸಹ ಸಭೆಯಲ್ಲಿ ನಕ್ಕಿದ್ದರು. ಆದರೆ, ಸಭೆಯ ನಂತರ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಿರ್ಮಲಾಗೆ ಹೋಟೆಲ್ ಮಾಲೀಕ ಕೇಳಿದ ಪ್ರಶ್ನೆ ಏನು ?
ಇನ್ನು ಹೋಟೆಲ್ ಮಾಲೀಕರ ಸಂವಾದದಲ್ಲಿ ಹೋಟೆಲ್ ಉದ್ಯಮಿ ಶ್ರೀನಿವಾಸ್ ಅವರು, ನಿರ್ಮಲಾ ಮೇಡಂ ದಯವಿಟ್ಟು ಎಲ್ಲ ವಸ್ತುಗಳ ಮೇಲೆಯೂ ಒಂದೇ ಮಾದರಿಯ (ಏಕರೂಪ ಜಿಎಸ್‌ಟಿ) ಜಿಎಸ್‌ಟಿ ಜಾರಿ ಮಾಡಿ ಎಂದಿದ್ದಾರೆ. ಮುಂದುವರಿದು ಒಂದೊಂದು ವಸ್ತುವಿನ ಮೇಲೆ ಒಂದೊಂದು ಜಿಎಸ್‌ಟಿ ಇರುವುದು ಗೊಂದಲ ಮೂಡಿಸಿದೆ. ಉದಾಹರಣೆಗೆ ಕ್ರೀಮ್ ಹಾಗೂ ಬನ್ ಅನ್ನು ಬೇರೆ ಬೇರೆ ತೆಗೆದುಕೊಂಡರೆ ಯಾವುದೇ ಟ್ಯಾಕ್ಸ್ ವಿಧಿಸುವುದಿಲ್ಲ. ಆದರೆ, ಕ್ರೀಮ್ ಮಾತ್ರ ತೆಗೆದುಕೊಂಡರೆ ಅದಕ್ಕೆ ಶೇ 18ರಷ್ಟು ಜಿಎಸ್‌ಟಿ ಇದೆ. ನಮ್ಮ ಅಂಗಡಿಗಳಿಗೆ ಬರುವ ಗ್ರಾಹಕರು ಕ್ರೀಮ್ ಮತ್ತು ಬನ್ ಎರಡನ್ನೂ ಸಫರೇಟ್ ಆಗಿ ಕೊಟ್ಬಿಡಿ ನಾವೇ ಕ್ರೀಮ್ ಹಾಕಿಕೊಳ್ಳುತ್ತೇವೆ ಅಂತ ಕೇಳ್ತಾರೆ ಎಂದಿದ್ದರು. ಇದಕ್ಕೆ ಎಲ್ಲರೂ ಗೊಳ್ ಎಂದು ನಕ್ಕಿದ್ದರು. ಇಡೀ ಸಭಾಂಗಣವೇ ನಗೆಗಡಲಲ್ಲಿ ತೇಲಿದಾಗ ನಿರ್ಮಲಾ ಸೀತಾರಾಮನ್ ಅವರೂ ನಕ್ಕಿದ್ದರು.
ಮನೆಗೆ ಕರೆಸಿ ಕ್ಷಮಾಪಣೆ ಕೇಳಿಸಿದರಾ ನಿರ್ಮಲಾ ?
ನಿರ್ಮಲಾ ಸೀತಾರಾಮನ್ ಅವರು ಪ್ರಶ್ನೆ ಕೇಳಿದ ಹೋಟೆಲ್ ಉದ್ಯಮಿಯನ್ನು ಮನೆಗೆ ಕರೆಸಿ ಕ್ಷಮಾಪಣೆ ಕೇಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದರಲ್ಲಿ ಹೋಟೆಲ್ ಮಾಲೀಕರು ನಿರ್ಮಲಾ ಸೀತಾರಾಮನ್ ಅವರಿಗೆ ಕೈ ಮುಗಿದು, ಮೇಡಂ ನನ್ನನ್ನು ಕ್ಷಮಿಸಿ ಬಿಡಿ. ನಾನು ಯಾವುದೇ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ. ನಾನೊಬ್ಬ ವ್ಯಾಪಾರಿ ಮಾತ್ರ ಎಂದು ಬೇಡಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ಇದೀಗ ಈ ಎರಡೂ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ವಿಡಿಯೋ ಹಂಚಿಕೊಂಡ ಕೇರಳ ಕಾಂಗ್ರೆಸ್
ಇದೀಗ ಈ ಎರಡೂ ವಿಡಿಯೋಗಳನ್ನು ಕೇರಳ ಕಾಂಗ್ರೆಸ್ ತನ್ನ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ನಿರ್ಮಾಲ ಸೀತಾರಾಮನ್ ಅವರ ನಡೆಯನ್ನು ಖಂಡಿಸಿದೆ.
Sree Annapoorna is a famous vegetarian restaurant chain in Coimbatore. On Wednesday, the owner of the restaurant Mr. Srinivasan attended an event with FM @nsitharaman and asked a question about the anomalies in GST very very politely.
— Congress Kerala (@INCKerala) September 13, 2024
"The problem is that GST is applied… pic.twitter.com/FNldzP0hu7
ಉದ್ಯಮಿ ಬಹಳ ನಯವಾಗಿ ಪ್ರಶ್ನೆ ಕೇಳಿದ್ದಾರೆ. ಜಿಎಸ್‌ಟಿಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಂಡಿ ಎಂದು ಕೇಳಿಕೊಂಡಿದ್ದಾರೆ. ಆದರೆ, ದುರದೃಷ್ಟಕರ ಸಂಗತಿ ಎಂದರೆ, ನಿರ್ಮಲಾ ಅವರು ಅವರ ಬಳಿ ಕ್ಷಮಾಪಣೆ ಕೇಳಿಸಿದ್ದಾರೆ ಎಂದು ಟ್ವೀಟ್ ಮಾಡಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications