ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈಗೆ ಹೋಗಿ ಬುಲ್ಡೋಜರ್‌ಗಳು ಶಾಂತಿಯ ಪ್ರತೀಕವೆಂದ ಯೋಗಿ: 'ಬುಲ್ಡೋಜರ್ ಬಾಬಾ' ಮಾತಿನ ಒಳಾರ್ಥವೇನು?

|
Google Oneindia Kannada News

ಮುಂಬೈ, ಡಿಸೆಂಬರ್ 05: ಬುಲ್ಡೋಜರ್‌ಗಳು ಶಾಂತಿ ಮತ್ತು ಅಭಿವೃದ್ಧಿಯ ಸಂಕೇತವಾಗಬಹುದು. ಹಾಗೆಯೇ ಕಾನೂನನ್ನು ಜಾರಿಗೊಳಿಸಲು ಅವುಗಳನ್ನು ಬಳಸಬಹುದು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ತಮ್ಮನ್ನು 'ಬುಲ್ಡೋಜರ್ ಬಾಬಾ' ಎಂದು ಕರೆಯಲಾಗುತ್ತದೆ ಎಂಬುದಾಗಿ ಬುಧವಾರ ಮುಂಬೈನಲ್ಲಿ ತಿಳಿಸಿದ್ದಾರೆ.

ಯುಪಿಯಲ್ಲಿ ಫಿಲ್ಮ್ ಸಿಟಿಯನ್ನು ಸ್ಥಾಪಿಸುವ ಆಲೋಚನೆ ಇದೆ. ಮುಂಬೈನಿಂದ ಅದನ್ನು ತೆಗೆದುಕೊಂಡು ಹೋಗಲು ಅಲ್ಲ ಈ ಆಲೋಚನೆಯನ್ನು ಮಾಡಿಲ್ಲವೆಂದು ಅವರು ಪುನರುಚ್ಚರಿಸಿದರು.

Bulldozers can be a sign of peace, says UP CM Yogi Adityanath in Mumbai

ಫೆಬ್ರವರಿ 10 ರಿಂದ 12 ರ ವರೆಗೆ ಲಕ್ನೋದಲ್ಲಿ ನಡೆಯಲಿರುವ ಯುಪಿ ಸರ್ಕಾರದ ಜಾಗತಿಕ ಹೂಡಿಕೆದಾರರ ಶೃಂಗಸಭೆಗೂ ಮುಂಚಿತವಾಗಿ ದೇಶೀಯ ಹೂಡಿಕೆದಾರರನ್ನು ಆಕರ್ಷಿಸಲು ಯೋಗಿ ಆದಿತ್ಯನಾಥ್‌ ಮುಂಬೈಗೆ ಭೇಟಿ ನೀಡಿದ್ದಾರೆ.

'ಬುಲ್ಡೋಜರ್ ಬಾಬಾ' ಟ್ಯಾಗ್ ಕುರಿತು ಕೇಳಿದಾಗ, ಬುಲ್ಡೋಜರ್‌ಗಳು ಎರಡು ರೀತಿಯ ಆಟ ಆಡುತ್ತವೆ. ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಅವುಗಳು ಶಾಂತಿ ಮತ್ತು ಬೆಳವಣಿಗೆಯ ಸಂಕೇತಗಳಾಗಿರಬಹುದು ಎಂದೂ ಅವರು ಪ್ರತಿಪಾದಿಸಿದ್ದಾರೆ.

ಜನರು ಕಾನೂನುಗಳನ್ನು ಉಲ್ಲಂಘಿಸಿದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲು ಬುಲ್ಡೋಜರ್‌ಗಳನ್ನು ಬಳಸಬಹುದು. ನಮ್ಮ ರಾಜ್ಯದಲ್ಲಿ ಅಪರಾಧಿಗಳ ಸಂಬಂಧಿಸಿದ ಕಟ್ಟಡಗಳನ್ನು ಕೆಡವಿದ ನಂತರ 'ಬುಲ್ಡೋಜರ್ ಬಾಬಾ' ಎಂಬ ಹಣೆಪಟ್ಟಿ ನನಗೆ ಸಿಕ್ಕಿತು ಎಂದರು.

ಅವರ ವಿರೋಧಿಗಳು ಅವರನ್ನು ಟೀಕಿಸಲು ಈ ಪದವನ್ನು ಬಳಸುತ್ತಾರೆ. ಅವರ ಬೆಂಬಲಿಗರು ಯೋಗಿ ಆದಿತ್ಯನಾಥ್‌ ಅವರನ್ನು ಹೊಗಳಲು ಈ ಪದವನ್ನು ಬಳಸುತ್ತಾರೆ. ಅವರ ಬೆಂಬಲಿಗರ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಯೋಗಿ ಆದಿತ್ಯನಾಥ್‌ ಅವರು ಬುಲ್ಡೋಜರ್‌ ಅನ್ನು ಬಳಸುತ್ತಾರೆ.

Bulldozers can be a sign of peace, says UP CM Yogi Adityanath in Mumbai

ಯುಪಿಯಲ್ಲಿ ಫಿಲ್ಮ್ ಸಿಟಿಯನ್ನು ನಿರ್ಮಿಸುವ ಮೂಲಕ ಚಲನಚಿತ್ರೋದ್ಯಮವನ್ನು ಮುಂಬೈನಿಂದ ಸ್ಥಳಾಂತರಿಸಲು ಯೋಗಿ ಪ್ರಯತ್ನಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಆರೋಪ ಮಾಡಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ, ಮುಂಬೈ 'ಅರ್ಥಭೂಮಿ' (ಆರ್ಥಿಕತೆಯ ಭೂಮಿ), ಮತ್ತು ಯುಪಿ 'ಧರ್ಮಭೂಮಿ' (ನಂಬಿಕೆಯ ಭೂಮಿ) ಎಂದು ಪ್ರತಿಪಾದಿಸಿದರು.

ಇವೆರಡರ ಸುಂದರ ಸಂಗಮವಾಗಬಹುದು. ನಾವು ಫಿಲ್ಮ್ ಸಿಟಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿಲ್ಲ ಆದರೆ ನಮ್ಮದೇ ಆದ ಫಿಲ್ಮ್‌ ಸಿಟಿ ನಿರ್ಮಾಣ ಮಾಡುತ್ತಿದ್ದೇವೆ. ಕೆಲಸ ಪ್ರಗತಿಯಲ್ಲಿದೆ ಮತ್ತು ಕೆಲವು ಉನ್ನತ ಸ್ಟುಡಿಯೋಗಳು ಬರಲು ಆಸಕ್ತಿ ತೋರಿಸಿವೆ. ಯುಪಿಯ ಫಿಲ್ಮ್ ಸಿಟಿಯು 1,200 ಎಕರೆಗಳಲ್ಲಿದೆ ಎಂದು ಮಾಹಿತಿ ನೀಡಿದರು.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಯುಪಿಯಲ್ಲಿ 25 ಕೋಟಿ ಜನಸಂಖ್ಯೆ ಇದೆ. ಇದು 96 ಲಕ್ಷ ಎಂಎಸ್‌ಎಂಇಗಳನ್ನು ಹೊಂದಿದೆ. ಎಕ್ಸ್‌ಪ್ರೆಸ್‌ವೇಗಳು, ಹೇರಳವಾದ ಜಲಸಂಪನ್ಮೂಲಗಳನ್ನು ಹೊಂದಿದೆ. ಈಗ ಮೂಲಸೌಕರ್ಯಗಳನ್ನು ತ್ವರಿತವಾಗಿ ನಿರ್ಮಿಸಲಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

Bulldozers can be a sign of peace, says UP CM Yogi Adityanath in Mumbai

ನಾವು ಶೀಘ್ರದಲ್ಲೇ ಸೆಮಿ ಕಂಡಕ್ಟರ್ ಯೋಜನೆಯನ್ನು ಪಡೆಯುತ್ತಿದ್ದೇವೆ. ಐದು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ್ದೇವೆ ಎಂದು ಅವರು ತಿಳಿಸಿದರು.

ಯುಪಿ ಹೂಡಿಕೆಯ ತಾಣವಾಗಿದೆ. ಇದು ಬೃಹತ್ ಮಾರುಕಟ್ಟೆಯಾಗಿದೆ ಮತ್ತು ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಯುವಕರನ್ನು ಹೊಂದಿದೆ ಎಂದು ಅವರು ಹೇಳಿದರು.

ಹೂಡಿಕೆದಾರರನ್ನು ಆಕರ್ಷಿಸಲು 16 ದೇಶಗಳಿಗೆ ಭೇಟಿ ನೀಡಿದ ನಂತರ, ಯುಪಿ ಸರ್ಕಾರವು ಮುಂಬೈನಿಂದ ತನ್ನ ದೇಶೀಯ ಪ್ರವಾಸವನ್ನು ಪ್ರಾರಂಭಿಸಿದೆ.

ಕಳೆದ ಏಪ್ರಿಲ್‌ನಲ್ಲಿ ಅವರು ಎಲ್ಲಾ ಧರ್ಮಗಳ ಧಾರ್ಮಿಕ ಸಂಸ್ಥೆಗಳಿಗೆ ಹೊರಗಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಆದ್ದರಿಂದ ಆವರಣದ ಹೊರಗಿನ ಜನರಿಗೆ ತೊಂದರೆಯಾಗುವುದಿಲ್ಲ. ಸಂಸ್ಥೆಗಳಿಂದ ತೆಗೆದುಹಾಕಲಾದ ಧ್ವನಿವರ್ಧಕಗಳನ್ನು ಶಾಲೆಗಳು, ಕಾಲೇಜುಗಳು ಮತ್ತು ಇತರ ಸೌಲಭ್ಯಗಳಿಗೆ ಉಚಿತವಾಗಿ ನೀಡಬೇಕೆಂದು ಅವರು ಪೊಲೀಸರಿಗೆ ಆದೇಶಿಸಿದೆ ಎಂದೂ ಅವರು ಸ್ಮರಿಸಿದರು.

ಮುಂಬೈನಲ್ಲಿ ನೆಲೆಸಿರುವ ಯುಪಿ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಪಿ ಸ್ಥಳೀಯರು ಇನ್ನು ಮುಂದೆ ತಮ್ಮ ಗುರುತಿನ ಬಗ್ಗೆ ನಾಚಿಕೆಪಡಬೇಕಿಲ್ಲ. ಬದಲಿಗೆ ಅವರು ಈಗ ಹೆಮ್ಮೆಯಿಂದ ಅದನ್ನು ತೋರಿಸಬೇಕು ಎಂದೂ ಅವರು ಕರೆ ನೀಡಿದರು.

English summary
Bulldozers can be a sign of peace and development just as they can be used to enforce the law, Uttar Pradesh CM Yogi Adityanath, often referred to as ‘Bulldozer baba,’ said on Wednesday. He also reiterated that the idea of setting up a Film City in UP was “not to take it away from Mumbai,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X