ಬಜೆಟ್ ಅಧಿವೇಶನ ಆರಂಭ, ಸದನ ಉದ್ದೇಶಿಸಿ ಪ್ರಣಬ್ ಭಾಷಣ

Posted By:
Subscribe to Oneindia Kannada

ನವದೆಹಲಿ, ಜನವರಿ 31 : ಉತ್ತರಪ್ರದೇಶ ಸೇರಿದಂತೆ 5 ರಾಜ್ಯಗಳ ಚುನಾವಣೆ ಹೊಸ್ತಿಲಲ್ಲೇ ಇರುವಾಗ, ಅಪನಗದೀಕರಣದ ನಂತರ ಮಂಡಿಸಲಾಗುತ್ತಿರುವ ಕೇಂದ್ರ ಬಜೆಟ್ ಈಬಾರಿ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಉಭಯ ಸದನವನ್ನುದ್ದೇಶಿಸಿ ಬಜೆಟ್ ಮಂಡನೆಯ ಪೂರ್ವಭಾವಿ ಭಾಷಣವನ್ನು ಮಾಡುತ್ತಿದ್ದಾರೆ.

ಈ ಆಯವ್ಯಯದ ವೈಶಿಷ್ಟ್ಯವೇನೆಂದರೆ, ಇದೇ ಮೊದಲ ಬಾರಿ ಕೇಂದ್ರ ಬಜೆಟ್ ಮತ್ತು ರೈಲ್ವೆ ಬಜೆಟ್ಟನ್ನು ಒಗ್ಗೂಡಿಸಿ ಒಂದೇ ಬಜೆಟ್ಟನ್ನು ಮಂಡಿಸಲಾಗುತ್ತಿದೆ ಎಂದು ಪ್ರಣಬ್ ಮುಖರ್ಜಿ ಅವರು ತಮ್ಮ ಭಾಷಣವನ್ನು ಆರಂಭಿಸಿದರು.

Budget session of Parliament begins : Pranab Mukherjee addresses members

ಭಾಷಣದ ಮುಖ್ಯಾಂಶಗಳು

* ಶ್ರಮಿಕ ವರ್ಗಕ್ಕಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದೆ. ಶ್ರಮೇವ ಜಯತೆ ಎಂಬುದು ಸರಕಾರದ ನೀತಿಗಳಲ್ಲಿ ಪ್ರಮುಖವಾಗಿದೆ.

* ನಮ್ಮ ದೇಶದ ಜನಸಂಖ್ಯೆಯ ಶೇ.65ಕ್ಕೂ ಹೆಚ್ಚಿನವರು 35 ವಯೋಮಾನದವರಿಗಿಂತ ಕೆಳಗಿದ್ದಾರೆ. ಯುವಕ ಯುವತಿಯರೇ ನಮ್ಮ ಶಕ್ತಿ. ಯುವಜನತೆಯಲ್ಲಿ ನಾನಾವಿಧದ ನೈಪುಣ್ಯತೆ ಬೆಳೆಯಲು, ಅವರಿಗೆ ಉದ್ಯೋಗ ಕಲ್ಪಿಸಲು ಸರಕಾರ ಬದ್ಧವಾಗಿದೆ.

* ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ನಮ್ಮ ಸರಕಾರದ ಹೋರಾಟ ನಡೆದಿರುವಾಗ ದೇಶದ ಜನರು, ಅದರಲ್ಲಿಯೂ ಬಡಜನರು ತೋರಿರುವ ಸಂಯಮ ನಿಜಕ್ಕೂ ಶ್ಲಾಘನೀಯ.

* ಬಡವರು, ಪೀಡಿತರು, ದಲಿತರು ಮತ್ತು ವಂಚಿತರ ಕಲ್ಯಾಣವೇ ನಮ್ಮ ಸರಕಾರದ ಮೂಲಮಂತ್ರ. ಬಡವರ ಜೀವನಮಟ್ಟ ಸುಧಾರಿಸಲು, ಜನರಿಗೆ ಸೂರು ಕಲ್ಪಿಸಲು ಸರಕಾರ ಬದ್ಧವಾಗಿದೆ.

* ಎಲ್ಲರ ವಿಕಾಸ ಎಂಬ ಕೇಂದ್ರ ಸರಕಾರದ ನೀತಿಗೆ ನಾವು ಬದ್ಧರಾಗಿದ್ದೇವೆ. ಸ್ವಯಂಪ್ರೇರಿತರಾಗಿ ಎಲ್ ಪಿಜಿ ಸಬ್ಸಿಡಿ ಬಿಟ್ಟುಕೊಟ್ಟಿದ್ದು ದೇಶದ ಬಡಜನತೆಗೆ ಸಹಾಯವಾಗಿದೆ.

* ಮಹಿಳೆಯರೂ ಸಮಾನ ಅವಕಾಶಕ್ಕೆ ಅರ್ಹರು. ನಾರಿಶಕ್ತಿ ನಮ್ಮ ದೇಶದ ಬೆಳವಣಿಗೆಯ ಅವಿಭಾಜ್ಯ ಅಂಗ. ಪಿವಿ ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಕರ್ ನಮ್ಮ ನಾರಿಯರ ಶಕ್ತಿಯ ಸಂಕೇತವಾಗಿದ್ದಾರೆ. ಅಲ್ಲದೆ, ಮಹಿಳೆಯರ ಮುಂದಾಳತ್ವದ ಸರಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.


* ರಾಷ್ಟ್ರದ ರೈತರ ಜೀವನ ಸುಧಾರಿಸಲು ನಮ್ಮ ಸರಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಕೃಷಿ ಉದ್ಯಮದ ಅಮೂಲಾಗ್ರ ಬೆಳವಣಿಗೆಯ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Budget session of Parliament begins with President Pranab Mukherjee's address to members of both the houses.
Please Wait while comments are loading...