ಬಜೆಟ್ 2021: ಜನವರಿ 30ಕ್ಕೆ ಮೋದಿ ಸರ್ವಪಕ್ಷ ಸಭೆ

ನವದೆಹಲಿ, ಜನವರಿ 23: ಇದೇ ಜನವರಿ 29ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರುವರಿ 1ರಂದು 2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಈ ಹಿನ್ನೆಲೆಯಲ್ಲಿ ಜನವರಿ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆ ಹಮ್ಮಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸರ್ವಪಕ್ಷ ಸಭೆ ನಡೆಸಲಿದ್ದು, ಸಭೆಯಲ್ಲಿ ಅಧಿವೇಶನದ ಕಾರ್ಯಸೂಚಿ ಪ್ರಸ್ತುತಪಡಿಸಲಾಗುವುದು. ಬಜೆಟ್ ಕುರಿತು ಪ್ರತಿಪಕ್ಷಗಳ ಸಲಹೆಗಳನ್ನೂ ಪಡೆಯಲಾಗುವುದು ಎಂದು ಸಂಸತ್ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

ಅಧಿವೇಶನದ ಸುಗಮ ನಿರ್ವಹಣೆಗೆ ಸಂಸತ್ತಿನ ಪ್ರತಿ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆ ನಡೆಸುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಅಧಿವೇಶನ ಆರಂಭಗೊಂಡ ಒಂದು ದಿನದ ನಂತರ ಸರ್ವಪಕ್ಷ ಸಭೆ ಕರೆಯಲಾಗಿದೆ.

Budget 2021 All Party Meeting To Be Held On January 30

ಬಜೆಟ್ ಅಧಿವೇಶನವು ಜನವರಿ 29ರಿಂದ ಆರಂಭವಾಗಿ ಫೆಬ್ರುವರಿ 15ರವರೆಗೆ ಹಾಗೂ ಮಾರ್ಚ್ 8ರಿಂದ ಏಪ್ರಿಲ್ 8ವರೆಗೆ ಎರಡು ಭಾಗಗಳಲ್ಲಿ ನಡೆಯಲಿದೆ.

ಬಜೆಟ್ ಗೂ ಮುನ್ನ ಪ್ರತಿವರ್ಷ ಸಾಂಪ್ರದಾಯಿಕವಾಗಿ ನಡೆಸಲಾಗುವ "ಹಲ್ವಾ ಕಾರ್ಯಕ್ರಮ"ವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಲ್ವಾ ಕಾರ್ಯಕ್ರಮ ನಡೆಸಿಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+