BSF: ದೇಶ ಕಾಯುವ ಬಿಎಸ್‌ಎಫ್‌ಗೆ 60 ವರ್ಷದ ಸಂಭ್ರಮ
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾರತದ ಗಡಿ ಕಾಯುವ ಹೆಮ್ಮೆಯ ಪಡೆ. ಭಾರತದೊಳಗೆ ಶತ್ರುಗಳು ಕಾಲಿಡದಂತೆ ಪ್ರತಿಕ್ಞಣವೂ ಕಾಯುತ್ತಿರುವ ಗಡಿಭದ್ರತಾ ಪಡೆಗೆ ಸ್ಥಾಪನೆಯಾಗಿ ಇಂದಿಗೆ (ಡಿಸೆಂಬರ್ 1) 60 ವರ್ಷ. ಭಾರತ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ 6,623 ಕಿಲೋಮೀಟರ್ ಗಡಿಯನ್ನು ರಕ್ಷಿಸುವ ಕೆಲಸವನ್ನು ಗಡಿ ಭದ್ರತಾ ಪಡೆ ಮಾಡುತ್ತಾ ಬಂದಿದೆ. 'ಸಾವಿನವರೆಗೆ ಕರ್ತವ್ಯ' ಎನ್ನುವ ಧ್ಯೇಯವಾಕ್ಯ ಹೊಂದಿದ್ದು, ಜೀವದ ಹಂಗು ತೊರೆದು ದೇಶದ ರಕ್ಷಣೆಗಾಗಿ ಸದ್ದಾ ಸಿದ್ದವಾಗಿರುತ್ತದೆ.
ಯಾವುದೇ ಕೆಲಸಕ್ಕೆ, ಯಾವುದೇ ಸಮಯದಲ್ಲಿ, ಯಾವುದೇ ಸ್ಥಳವಾಗಿರಲಿ ಸದಾ ಸಿದ್ದವಾಗಿರುತ್ತೇವೆ ಎನ್ನುವ ತತ್ತವನ್ನು ಅಳವಡಿಸಿಕೊಂಡಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ, ಎಂತಹದೇ ಸಂದರ್ಭವನ್ನು ಎದುರಿಸಲು ಕ್ಷಣಮಾತ್ರದಲ್ಲಿ ಕಾರ್ಯಪ್ರವೃತ್ತವಾಗುವ ಸಾಮರ್ಥ್ಯ ಹೊಂದಿದೆ.

ಬಿಎಸ್‌ಎಫ್ ಎನ್ನುವುದು ಭಾರತದ ಪ್ರಮುಖ ಗಡಿ ಭದ್ರತಾ ಪಡೆಯಾಗಿದ್ದು ಅರೆಸೈನಿಕ ಸಂಸ್ಥೆಯಾಗಿದೆ. ಭಾರತದ ಐದು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಬಿಎಸ್‌ಎಫ್ ಕೂಡ ಒಂದು. ಬಿಎಸ್‌ಎಫ್ 2.65 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದ್ದು, ವಿಶ್ವದ ಅತಿ ದೊಡ್ಡ ಭದ್ರತಾ ಪಡೆ ಎನ್ನುವ ದಾಖಲೆಯನ್ನು ಕೂಡ ಹೊಂದಿದೆ. ಬಿಎಸ್ಎಫ್ ಭಾರತ-ಪಾಕಿಸ್ತಾನ ಮತ್ತು ಭಾರತ-ಬಾಂಗ್ಲಾದೇಶದ ಗಡಿಗಳಲ್ಲಿ ಕೆಲಸ ಮಾಡುತ್ತದೆ.
1965ರಲ್ಲಿ ಸ್ಥಾಪನೆಯಾದ ಬಿಎಸ್‌ಎಫ್
ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಡಿಸೆಂಬರ್ 1, 1965ರಲ್ಲಿ ಗಡಿ ಭದ್ರತಾ ಪಡೆ ಸ್ಥಾಪನೆಯಾಯಿತು. ಕೆ.ಎಫ್. ರುಸ್ತುಮ್ ಬಿಎಸ್‌ಎನ್‌ನ ಸಂಸ್ಥಾಪಕರು ಮತ್ತು ಮೊದಲ ಮುಖ್ಯಸ್ಥರಾಗಿದ್ದಾರೆ. ವಿಪತ್ತು ನಿರ್ವಹಣೆಗೆ ಮೀಸಲಾಗಿರುವ ನಾಲ್ಕು ಬೆಟಾಲಿಯನ್ ಸೇರಿ ಒಟ್ಟು 193 ಬೆಟಾಲಿಯನ್ ಸೇರಿ ವಾಯು ಪಡೆ, ನೌಕಾ ಪಡೆ, ಕಮಾಂಡೋ ಘಟಕಗಳು ಮತ್ತು ಫಿರಂಗಿ ರೆಜಿಮೆಂಟ್‌ಗಳನ್ನು ಒಳಗೊಂಡಿದೆ. 2 ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಹೊಂದಿದೆ. ಒಂಟೆ ಕಾರ್ಪ್ಸ್, ಶ್ವಾನ ದಳ ಮತ್ತು ದೃಢವಾದ ತರಬೇತಿ ವ್ಯವಸ್ಥೆ ಕೂಡ ಇದೆ.

ಗಡಿ ಭದ್ರತೆ ವಿಚಾರ ಮಾತ್ರವಲ್ಲದೆ, ದೇಶದ ಆಂತರಿಕ ಭದ್ರತಾ ಕಾರ್ಯಾಚರಣೆಗಳಲ್ಲಿ ಕೂಡ ಬಿಎಸ್‌ಎಫ್ ಪ್ರಮುಖ ಪಾತ್ರ ವಹಿಸುತ್ತದೆ. ಒಡಿಶಾ ಮತ್ತು ಛತ್ತಿಸ್‌ಗಢದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕಲು ಕೆಲಸ ಮಾಡುತ್ತದೆ. ಇತ್ತೀಚೆಗೆ, ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬಿಎಸ್ಎಫ್ ಪ್ರಮುಖವಾಗಿದೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಜೊತೆಗೆ ಗಡಿ ಭದ್ರತಾ ಪಡೆ ಕೆಲಸ ಮಾಡುತ್ತದೆ. ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಕೆಲಸ ಮಾಡುತ್ತದೆ. ನಾಲ್ಕು ಬೆಟಾಲಿಯನ್ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಭಾಗವಾಗಿದ್ದು ತುರ್ತು ಸಂದರ್ಭಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತವೆ.
ಭಾರತದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬಿಎಸ್‌ಎಫ್ ಕೆಲಸ ಮಾಡುತ್ತದೆ. 1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧ ಮತ್ತು 1999 ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಆಪರೇಷನ್ ವಿಜಯ್‌ನಲ್ಲಿ ಕೂಡ ಬಿಎಸ್‌ಎಫ್ ಪ್ರಮುಖ ಪಾತ್ರ ವಹಿಸಿದೆ.
ಬಿಎಸ್‌ಎಫ್ ಭಾರತದ ರಕ್ಷಣೆಯ ಮೊದಲ ಸಾಲು ಎಂದು ಗೌರವಿಸಲಾಗುತ್ತದೆ. ವೈಮಾನಿಕ ಬೆಂಬಲಕ್ಕಾಗಿ ಏರ್ ವಿಂಗ್, ಕರಾವಳಿ ಭದ್ರತೆಗಾಗಿ ಕಡಲ ವಿಭಾಗ, ವಿಶೇಷ ಕಾರ್ಯಾಚರಣೆಗಳಿಗಾಗಿ ಕಮಾಂಡೋ ಘಟಕಗಳು ಮತ್ತು ಭಾರೀ ಫೈರ್‌ಪವರ್ ಬೆಂಬಲಕ್ಕಾಗಿ ಫಿರಂಗಿ ರೆಜಿಮೆಂಟ್‌ಗಳಿದ್ದು, ಸದಾ ಸನ್ನದ್ಧವಾಗಿರುತ್ತವೆ. ದೇಶದ ಗಡಿಯನ್ನು ರಕ್ಷಣೆ ಮಾಡುವ ತನ್ನ ಧ್ಯೇಯಕ್ಕೆ ಯಾವಾಗಲೂ ಬದ್ಧವಾಗಿರುತ್ತದೆ.












Click it and Unblock the Notifications