ಬ್ರಿಟಿಷ್ ಪೌರತ್ವ : ರಾಹುಲ್ ಗಾಂಧಿಗೆ ಅಡ್ವಾಣಿ ಸಮಿತಿಯಿಂದ ನೋಟಿಸ್

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 14: ಭಾರತೀಯ ಜನತಾ ಪಕ್ಷದ ನಾಯಕ ಹಿರಿಯ ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದ ನೀತಿ ಸಮಿತಿಯಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆವರಿಗೆ ಸೋಮವಾರ ಶೋಕಾಸ್ ನೋಟೀಸ್ ಜಾರಿಗೊಂಡಿದೆ.

ಇಂಗ್ಲೆಂಡ್​ನಲ್ಲಿ ಕಂಪೆನಿಯೊಂದನ್ನು ಆರಂಭಿಸುವ ಸಲುವಾಗಿ ತಾನು ಬ್ರಿಟಿಷ್ ಪ್ರಜೆ ಎಂಬುದಾಗಿ ಘೋಷಿಸಿಕೊಂಡಿದ್ದಾರೆ ಎಂಬ ಮಾಹಿತಿಯ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿ ನೋಟಿಸ್ ಜಾರಿಗೊಳಿಸಲಾಗಿದ್ದು, ಈ ಬಗ್ಗೆ ಉತ್ತರಿಸುವಂತೆ ಕೋರಲಾಗಿದೆ. ಇದಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಇದನ್ನು ಬಗೆಹರಿಸಲಾಗುವುದು ಎಂದಿದ್ದಾರೆ.

British citizenship row: Rahul Gandhi issued notice

ಭಾರತೀಯ ಜನತಾ ಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದ ನೀತಿ ಸಮಿತಿಯ ಸದಸ್ಯ ಅರ್ಜುನ್ ರಾಮ್ ಮೇಘ್ವಲ್ ಅವರು ಎಎನ್ ಐ ಜೊತೆ ಮಾತನಾಡಿ, 'ಲಂಡನ್​ನ ಕಂಪೆನಿಯೊಂದರ ನಿರ್ದೇಶಕರಾಗುವ ಹಂತದಲ್ಲಿದ್ದಾಗ ಬ್ರಿಟಿಷ್ ಪೌರತ್ವವನ್ನು ತೋರಿಸಿದ್ದು ಹೇಗೆ ಎಂಬುದಾಗಿ ಪ್ರಶ್ನಿಸಲಾಗಿದೆ. ಇದು ಗಂಭೀರ ವಿಷಯವಾಗಿದ್ದು, ಯುಕೆ ಕಂಪನಿಯ ಆರಂಭಿಸುವ ಸಲುವಾಗಿ ತಾನು ಬ್ರಿಟಿಷ್ ಪ್ರಜೆ ಎಂಬುದಾಗಿ ರಾಹುಲ್ ಗಾಂಧಿ ಘೋಷಿಸಿಕೊಂಡಿದ್ದೇಕೆ? ಎಂಬುದಕ್ಕೆ ಉತ್ತರ ನಿರೀಕ್ಷಿಸಲಾಗಿದೆ ಎಂದಿದ್ದಾರೆ.

ಪೌರತ್ವದ ಪ್ರಶ್ನೆ ಎತ್ತಿದ ಸ್ವಾಮಿ: ಇಂಗ್ಲೆಂಡ್​ನಲ್ಲಿ ಕಂಪೆನಿಯೊಂದನ್ನು ಆರಂಭಿಸುವ ಸಲುವಾಗಿ ತಾನು ಬ್ರಿಟಿಷ್ ಪ್ರಜೆ ಎಂಬುದಾಗಿ ಘೋಷಿಸಿಕೊಳ್ಳುವ ಮೂಲಕ ರಾಹುಲ್ ಗಾಂಧಿ ತಮ್ಮನ್ನು ತಾವೇ ವಂಚಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು. ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವ ಮತ್ತು ಸಂಸತ್ ಸದಸ್ಯತ್ವವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಬ್ರಮಣಿಯನ್ ಸ್ವಾಮಿ ಪತ್ರ ಬರೆದಿದ್ದರು.

ರಾಹುಲ್ ಗಾಂಧಿ ಅವರು 2003ರಲ್ಲಿ ಇಂಗ್ಲೆಂಡ್​ನಲ್ಲಿ ಬ್ಯಾಕೋಪ್ಸ್ ಲಿಮಿಟೆಡ್ ಎಂಬ ಕಂಪೆನಿಯನ್ನು ಹುಟ್ಟು ಹಾಕಿದ್ದು, ಅದಕ್ಕೆ ಸಂಬಂಧಿಸಿದ ದಾಖಲಾತಿಗಳಲ್ಲಿ ಇಂಗ್ಲೆಂಡ್ ವಿಳಾಸ ನೀಡಿ ತಾನು ಬ್ರಿಟಿಷ್ ಪ್ರಜೆ ಎಂಬುದಾಗಿ ಘೋಷಿಸಿಕೊಂಡಿದ್ದಾರೆ. ಆ ಸಂಸ್ಥೆಯ ಒಟ್ಟು ಷೇರುಗಳಲ್ಲಿ ಶೇಕಡಾ 65ನ್ನು ರಾಹುಲ್ ಗಾಂಧಿ ಹೊಂದಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Congress vice president Rahul Gandhi was on Monday served a show-cause notice by the Ethics committee of Parliament asking whether he had declared himself as a British citizen during his stay in the United Kingdom
Please Wait while comments are loading...