ವಿಡಿಯೋ: ವೇದಿಕೆ ಮೇಲೆ ಪರಸ್ಪರ ಬಡಿದಾಡಿಕೊಂಡ ವಧು-ವರ

ಮದುವೆ ಎಲ್ಲರ ಜೀವನದಲ್ಲಿ ಒಂದು ಅದ್ಬುತವಾದ ಕ್ಷಣ. ಅದನ್ನು ಪ್ರತೀ ಒಬ್ಬರೂ ಸುಂದರವಾಗಿಸಲು ಪ್ರಯತ್ನಿಸುತ್ತಾರೆ. ದುಬಾರಿ ಬಟ್ಟೆ, ರುಚಿಯಾದ ವಿವಿಧ ಖಾದ್ಯ, ವಿಸ್ತಾರವಾದ ಮಂಟಪವನ್ನು ಆಯ್ಕೆ ಮಾಡಿಕೊಂಡು ನೂರಾರು ಜನರನ್ನು ಆಶೀರ್ವದಿಸಲು ಸ್ವಾಗತಿಸುತ್ತಾರೆ. ಎಲ್ಲದಕ್ಕಿಂತ ಇದೊಂದು ಜೀವನದ ಅತ್ಯಂತ ಸ್ಮರಣೀಯ ದಿನವಾಗಿರುತ್ತದೆ. ದಾಂಪತ್ಯ ಜೀವನಕ್ಕೆ ಕಾಲಿಡುವ ನವ ದಂಪತಿ ಹೊಸ ಬಾಳ್ವೆಯನ್ನು ಬರಮಾಡಿಕೊಳ್ಳುವ ಉತ್ಸಾಹದಲ್ಲಿರುತ್ತಾರೆ. ಪರಸ್ಪರ ಪ್ರೀತಿ, ಸಂತಸ, ಸಂತೋಷ, ಆನಂದ ಎಲ್ಲವೂ ಈ ಶುಭ ಕಾರ್ಯದಲ್ಲಿ ಒಟ್ಟುಗೂಡಿರುತ್ತದೆ. ಹೀರುವಾಗ ಇಲ್ಲೊಂದು ಮದುವೆ ತದ್ವಿರುದ್ದವಾಗಿ ನಡೆದಿದೆ. ಈ ಮದುವೆಯಲ್ಲಿ ವಧು-ವರ ಇಬ್ಬರು ಪರಸ್ಪರ ಕಪಾಳಮೋಕ್ಷ ಮಾಡಿಕೊಂಡು, ಪರಸ್ಪರ ಕೂದಲನ್ನು ಎಳೆದಾಡಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಜಕ್ಕೂ ಮದುವೆ ಅನ್ನೋ ಸುಂದರ ಕ್ಷಣವನ್ನು ವರ್ಣಿಸಲು ಪದಗಳೇ ಸಾಲದು. ಆದರೆ ಈ ವಿಡಿಯೊವನ್ನು ಟ್ವಿಟರ್‌ನಲ್ಲಿ 'ಘರ್ಕೆಕಲೇಶ್' ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 76 ಸಾವಿರ ಜನ ವೀಕ್ಷಿಸಿದ್ದಾರೆ. ವಧುವರ ಮದುವೆ ಸಮಾರಂಭದ ಮೊದಲು ವೇದಿಕೆಯ ಮೇಲೆ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ಒಬ್ಬರಿಗೊಬ್ಬರು ಸಿಹಿ ತಿನ್ನಿಸುವ ಸಮಯ ಬಂದಾಗ ಎಲ್ಲರಿಗೂಆಘಾತವನ್ನುಂಟುಮಾಡುವ ಘಟನೆ ನಡೆದಿದೆ.

Bride and groom Fight On Stage - guests capture video

ವಧು-ವರರು ಪರಸ್ಪರ ಹೊಡೆಯುವ ವೈರಲ್ ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ವರನು ವಧುವಿಗೆ ಸಿಹಿತಿಂಡಿಗಳನ್ನು ತಿನ್ನಲು ಬಲವಂತವಾಗಿ ಪ್ರಯತ್ನಿಸುತ್ತಾನೆ. ಆದರೆ ವಧು ಸಿಟ್ಟಾಗುತ್ತಾಳೆ. ಕೋಪದಿಂದ ಸಿಹಿತಿನ್ನಲು ನಿರಾಕರಿಸುತ್ತಾಳೆ. ಆಗ ವರ ಕೋಪಗೊಳ್ಳುತ್ತಾನೆ. ಅವಳ ಮುಖಕ್ಕೆ ಹೊಡೆಯಲು ಪ್ರಾರಂಭಿಸುತ್ತಾನೆ. ನಂತರ ದಂಪತಿಗಳು ಒಬ್ಬರನ್ನೊಬ್ಬರು ತಳ್ಳುತ್ತಾರೆ. ಒಬ್ಬರ ಮೇಲೊಬ್ಬರು ಹೊಡೆಯಲು ಆರಂಭಿಸುತ್ತಾರೆ. ಕೂಡಲೆ ಸಂಬಂಧಿಕರು ಮಧ್ಯಪ್ರವೇಶಿಸಿ ಅವರನ್ನು ತಡೆದು ಅವರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಆದರೆ ವಧು ಮತ್ತು ವರರು ಪರಸ್ಪರ ಕೂದಲನ್ನು ಎಳೆದಾಡುತ್ತಾ ನೆಲಕ್ಕೆ ಬೀಳುತ್ತಾರೆ.

ಹಿನ್ನೆಲೆಯಲ್ಲಿ ಹಾಡು ಕೂಡ ವಿಡಿಯೊದಲ್ಲಿ ಕೇಳಿಬರುತ್ತದೆ. ವಿಡಿಯೋದಲ್ಲಿ ಅವರಿಬ್ಬರೂ ಒಬ್ಬರನ್ನೊಬ್ಬರು ವಿಪರೀತ ಕೋಪ ಮತ್ತು ಅಸಮಾಧಾನದಿಂದ ಕಾಣುತ್ತಾರೆ. ಅತಿಥಿಗಳು ಮೂಕಪ್ರೇಕ್ಷಕರಾಗಿ ದೃಶ್ಯವನ್ನು ನೋಡಿದ್ದಾರೆ. ಅವರಲ್ಲಿ ಒಬ್ಬರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, "ಯೇ ಶಾದಿ ಹೋರಿ ಯಾ ಡೈವೋರ್ಸ್?" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಹಾಸ್ಯಾಸ್ಪದವಾಗಿ ಕಾಮೆಮಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+