Breaking: ದೆಹಲಿ: ಚರಂಡಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ- ಐವರ ಮೇಲೆ ಆರೋಪ
ಹೊಸದಿಲ್ಲಿ ಅಕ್ಟೋಬರ್ 15: ಖಾಸಗಿ ವಿಶ್ವವಿದ್ಯಾನಿಲಯದ 21 ವರ್ಷದ ವಿದ್ಯಾರ್ಥಿಯ ಶವವೊಂದು ಗ್ರೇಟರ್ ನೋಯ್ಡಾದಲ್ಲಿ ಪತ್ತೆಯಾಗಿದೆ. ಗ್ರೇಟರ್ ನೋಯ್ಡಾದ ಇನ್‌ಸ್ಟಿಟ್ಯೂಟ್ ಬಳಿಯ ಚರಂಡಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಆತನನ್ನು ಐವರು ವಿದ್ಯಾರ್ಥಿಗಳು ಹತ್ಯೆಗೈದಿದ್ದಾರೆಂದು ಆರೋಪಿಸಲಾಗುತ್ತು.
ಆರೋಪಿಗಳನ್ನು ಗುರುತಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ವಿದ್ಯಾರ್ಥಿಯನ್ನು ಯಶಸ್ವಿ ರಾಜ್ ಎಂದು ಗುರುತಿಸಲಾಗಿದೆ. ಐವರು ವಿದ್ಯಾರ್ಥಿಗಳು ಹೊಡೆದಾಟದ ನಂತರ ಅವನನ್ನು ಕೊಂದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶಸ್ವಿ ರಾಜ್ ಅಕ್ಟೋಬರ್ 12 ರಂದು ತನ್ನ ಇಬ್ಬರು ವಿಶ್ವವಿದ್ಯಾನಿಲಯದ ಸ್ನೇಹಿತರ ಜೊತೆ ಹೊರಗೆ ಹೋಗಿದ್ದರು. ನಂತರ ಯಶಸ್ವಿ ರಾಜ್ ಅವರು ಹಿಂತಿರುಗಲಿಲ್ಲ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸ್ ದೂರು ದಾಖಲಾಗಿತ್ತು.

ವಿಶ್ವವಿದ್ಯಾನಿಲಯದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಚರಂಡಿಯಲ್ಲಿ ಅಪರಿಚಿತ ಶವ ಬಿದ್ದಿರುವ ಬಗ್ಗೆ ಇಂದು ಮಾಹಿತಿ ಸಿಕ್ಕಿದೆ ಎಂದು ಗ್ರೇಟರ್ ನೋಯ್ಡಾ ಪೊಲೀಸ್ ಅಧಿಕಾರಿ ವಿಶಾಲ್ ಪಾಂಡೆ ಹೇಳಿದ್ದಾರೆ. ಮೃತದೇಹವನ್ನು ಕುಟುಂಬದವರು ಗುರುತಿಸಿದ್ದಾರೆ ಎಂದರು.












Click it and Unblock the Notifications