BPL Card: ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕಟ್ಟು ಹಿನ್ನೆಲೆ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಕೇಂದ್ರ ಭರ್ಜರಿ ಗುಡ್‌ ನ್ಯೂಸ್‌

BPL Ration Card: ಪಡಿತರ ಚೀಟಿಗಳಲ್ಲಿ ಹಲವು ವಿಧಗಳಿದ್ದು, ಈ ಪೈಕಿ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಸೇರಿದಂತೆ ಹೆಚ್ಚು ಸರ್ಕಾರಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಯಾಕಂದ್ರೆ ಇವರು ಅತ್ಯಂತ ಕಡುಬಡವರಾಗಿರುತ್ತಾರೆ. ಇದೀಗ ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕಟ್ಟು ಹಿನ್ನೆಲೆ ಆಹಾರ ಕೊರತೆಯಾಗಬಾರದು ಎನ್ನುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಡಿಯಲ್ಲಿ ಇವರಿಗೆ ಮೂರು ತಿಂಗಳ ಪಡಿತರವನ್ನು ಮುಂಗಡವಾಗಿ ವಿತರಣೆ ಮಾಡಲು ಮುಂದಾಗಿದೆ.

ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಜೂನ್‌, ಜುಲೈ ಹಾಗೂ ಆಗಸ್ಟ್‌ ಈ ಮೂರು ತಿಂಗಳ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡ್‌ದಾರರಿಗೆ ವಿತರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆಹಾರ ಧಾನ್ಯಗಳನ್ನು ಮುಂಗಡವಾಗಿ ಭಾರತೀಯ ಆಹಾರ ನಿಗಮದ ಗೋದಾಮುಗಳಿಗೆ ಸಾಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಾದರೆ ಎಷ್ಟು ಕೆಜಿ ವಿತರಣೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

BPL Card Three Months Ration Distribution Amid India-Pakistan Tensions Know details

ಮುಂಗಾರು ಮಳೆ ಆಗಮನ ಹಿನ್ನೆಲೆ ಪ್ರತಿ ಮನೆಗೂ ಆಹಾರ ಭದ್ರತೆ ಒದಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರಿ ಮಳೆಯ ಸಮಯದಲ್ಲಿ ದುರ್ಗಮ ಪ್ರದೇಶದಲ್ಲಿ ಸಂಪರ್ಕ ಕಡಿತಗೊಂಡು ಉಂಟಾಗುವ ಅಡೆತಡೆಯನ್ನು ನಿಯಂತ್ರಿಸುವ ಉದ್ದೇಶ ಇದಾಗಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್ ಪ್ರತಿ ಸದಸ್ಯರಿಗೆ ತಲಾ 15 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಜೂನ್, ಜುಲೈ, ಆಗಸ್ಟ್ ಅವಧಿಗೆ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಪಡಿತರ ವಿತರಣೆ ಸಂಬಂಧಿಸಿದಂತೆ ಭಾರತೀಯ ಆಹಾರ ನಿಗಮ ಆಹಾರ ಪದಾರ್ಥಗಳ ಬೇಡಿಕೆ ವಿವರಗಳನ್ನು ಸಿದ್ಧಪಡಿಸಿದೆ.

ಅದರಂತೆಯೇ 4,51,893 ಮೆಟ್ರಿಕ್‌ ಟನ್‌ ಅಕ್ಕಿ, 1,17,870 ಮೆಟ್ರಿಕ್‌ ಟನ್‌ ರಾಗಿ ಹಾಗೂ 82,446 ಮೆಟ್ರಿಕ್‌ ಟನ್‌ ಜೋಳ ಸೇರಿ ಒಟ್ಟು 6,52,209 ಮೆಟ್ರಿಕ್‌ ಟನ್‌ ಆಹಾರ ಪದಾರ್ಥಗಳನ್ನು ರಾಜ್ಯಕ್ಕೆ ಒದಗಿಸಲು ಸೂಚನೆ ನೀಡಲಾಗಿದೆ. ಇದೀಗ ಕೇಂದ್ರ ಸರ್ಕಾರ ಮುಂಗಡವಾಗಿ 3 ತಿಂಗಳಿಗೆ ಒಟ್ಟು 6,52,209 ಮೆಟ್ರಿಕ್‌ ಟನ್‌ ಆಹಾರ ಪದಾರ್ಥಗಳನ್ನು ಗೋದಾಮುಗಳಿಗೆ ಸಾಗಿಸಲು ಕ್ರಮ ಕೈಗೊಂಡರೆ, ರಾಜ್ಯ ಸರ್ಕಾರ ಸಹ ಅಷ್ಟೇ ಪ್ರಮಾಣ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡಬೇಕಾಗುತ್ತದೆ.

ಕೇಂದ್ರ ಸರ್ಕಾರ ಮುಂಗಡವಾಗಿ ಆಹಾರಧಾನ್ಯ ವಿತರಿಸುತ್ತಿತ್ತು. ರಾಜ್ಯದ ಪಾಲು ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರವು ನಿರ್ಧರಿಸಿದಲ್ಲಿ ಬಿಪಿಎಲ್ ಕಾರ್ಡ್ ಸದಸ್ಯರಿಗೆ ತಲಾ 10 ಕೆಜಿ ಧಾನ್ಯದಂತೆ 3 ತಿಂಗಳಿಗೆ 30 ಕೆಜಿ ಧಾನ್ಯ ವಿತರಣೆ ಮಾಡಲಾಗುತ್ತದೆ.

ಈಗಾಗಲೇ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ, ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸುವ ಕೆಲಸವನ್ನು ಕರ್ನಾಟಕದಲ್ಲಿ ಮಾಡುವ ಕೆಲಸ ಮಾಡುತ್ತಿದೆ. ಅಲ್ಲದೆ, ಫಲಾನುಭವಿಗಳ ಕಾರ್ಡ್‌ಗಳನ್ನು ಕೂಡ ರದ್ದು ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಬಳಿಕ ಎಚ್ಚತ್ತ ಸರ್ಕಾರ ಫಲಾನುಭವಿಗಳಿಗೆ ಮತ್ತೆ ಬಿಪಿಎಲ್‌ ಕಾರ್ಡ್‌ ಒದಗಿಸಿ ಅವರಿಗೆ ಸಿಗಬೇಕಾದ ಪಡಿತರವನ್ನು ನೀಡಲಾಗುತ್ತದೆ ಎಂದು ಹೇಳಿತ್ತು. ಒಟ್ಟಿನಲ್ಲಿ ಫಲಾನುಭವಿಗಳಲ್ಲದವರ ಬಳಿಯಿದ್ದ ಬಿಪಿಎಲ್‌ ಕಾರ್ಡ್ ರದ್ದುಪಡಿಸಿದ್ದರಿಂದ ಫಲಾನುಭವಿಗಳಿಗೆ ತುಂಬಾ ಅನುಕೂಲ ಆದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+