• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಇರಾನ್‌ ವಿಮಾನದಲ್ಲಿ ಬಾಂಬ್ ಬೆದರಿಕೆ, ದೆಹಲಿಯಲ್ಲಿ ಇಳಿಯಲು ಅನುಮತಿ ನಿರಾಕರಣೆ

|
Google Oneindia Kannada News

ಹೊಸದಿಲ್ಲಿ ಅಕ್ಟೋಬರ್ 3: ಭಾನುವಾರ ಇರಾನ್‌ನಿಂದ ಚೀನಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ವಿಮಾನದಲ್ಲಿ ಬಾಂಬ್ ಇದೆ ಎಂಬ ಸುದ್ದಿ ಸ್ಫೋಟವಾಗಿದೆ. ವಿಮಾನವು ಭಾರತೀಯ ವಾಯುಪ್ರದೇಶದಲ್ಲಿದ್ದು ಹಾರಾಟ ನಡೆಸುತ್ತಿದ್ದಾಗ ನವದೆಹಲಿಯತ್ತ ಸಾಗುತ್ತಿತ್ತು. ವಿಷಯದ ಗಂಭೀರತೆಯನ್ನು ಪರಿಗಣಿಸಿ, ಭದ್ರತಾ ಸಂಸ್ಥೆಗಳು ವಿಮಾನವನ್ನು ದೆಹಲಿಯಲ್ಲಿ ಇಳಿಸಲು ಅನುಮತಿಸಲಿಲ್ಲ.

ಜೊತೆಗೆ ಭಾರತೀಯ ವಾಯುಪಡೆಯ ಸುಖೋಯ್-30 ವಿಮಾನವು ಪಂಜಾಬ್ ಮತ್ತು ಜೋಧ್‌ಪುರ ವಾಯುನೆಲೆಯಿಂದ ಟೇಕಾಫ್ ಆಗಿ ಇರಾನ್ ಚೀನಾದ ಕಡೆಗೆ ಸಾಗುತ್ತಿದ್ದ ವಿಮಾನವನ್ನು ನಿಗದಿತ ಮಾರ್ಗದಲ್ಲಿ ಹೋಗುವಂತೆ ಮಾಡಿವೆ.

ಮಾಹಿತಿಯ ಪ್ರಕಾರ, ಇರಾನ್ ವಿಮಾನವು ದೆಹಲಿಯ ವಾಯುಪ್ರದೇಶದ ಕಡೆಗೆ ಚಲಿಸುತ್ತಿತ್ತು. ಇದೇ ವೇಳೆ ವಿಮಾನದಲ್ಲಿ ಬಾಂಬ್‌ ಇರುವ ಸುದ್ದಿ ಭದ್ರತಾ ಸಂಸ್ಥೆಗಳಿಗೆ ಸಿಕ್ಕಿದೆ. ನಂತರ ಎಲ್ಲಾ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸ್ವಲ್ಪ ಸಮಯದ ನಂತರ, ವಿಮಾನವು ದೆಹಲಿಯಲ್ಲಿ ಇಳಿಯಲು ಅನುಮತಿ ಕೋರಿತು. ಆದರೆ ಭಾರತೀಯ ಅಧಿಕಾರಿಗಳು ಅದನ್ನು ನಿರಾಕರಿಸಿದರು. ಬಾಂಬ್ ಬೆದರಿಕೆಯನ್ನು ಯಾರು ನೀಡಿದರು ಮತ್ತು ಆ ವಿಮಾನದ ಹೆಸರೇನು ಮತ್ತು ಹೇಗೆ ಎಂಬ ಮಾಹಿತಿಯನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ.

ಮತ್ತೊಂದೆಡೆ, ವಿಷಯದ ಸುದ್ದಿ ಬಂದ ತಕ್ಷಣ, ಜೋಧ್‌ಪುರ ಮತ್ತು ಪಂಜಾಬ್ ವಾಯುನೆಲೆಗಳಲ್ಲಿ ನೆಲೆಸಿದ್ದ ಸುಖೋಯ್-30 ವಿಮಾನಗಳು ಬಾಂಬ್ ಬೆದರಿಕೆ ಇದ್ದ ಇರಾನ್ ವಿಮಾನವನ್ನು ಲ್ಯಾಂಡ್‌ ಆಗದಂತೆ ತಡೆದು ಗಾಳಿಯಲ್ಲಿಯೇ ಸುತ್ತುವರೆದಿವೆ. ಕೊಂಚ ಸಮಯದ ನಂತರ ಭಾರತೀಯ ಸುಖೋಯ್ ವಿಮಾನಗಳು ಇರಾನ್ ವಿಮಾನವನ್ನು ತನ್ನ ನಿಗದಿತ ಮಾರ್ಗದಲ್ಲಿ ಅಂದರೆ ಚೀನಾ ಕಡೆಗೆ ತೆರಳುವಂತೆ ಮಾಡಿವೆ. ಇತ್ತೀಚಿನ ನವೀಕರಣಗಳ ಪ್ರಕಾರ, ಇರಾನ್ ವಿಮಾನವು ಪ್ರಸ್ತುತ ಭಾರತೀಯ ವಾಯುಪ್ರದೇಶದಲ್ಲಿದೆ ಮತ್ತು ಅದು ಚೀನಾದ ಕಡೆಗೆ ಹೋಗುತ್ತಿದೆ.

English summary
On Sunday there was an explosion of news that there was a bomb on a flight from Iran to China. The aircraft was in Indian airspace and was en route to New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X