ಕೇರಳದ ಕಣ್ಣೂರಿನ ಮನೆಯೊಂದರಲ್ಲಿ ಬಾಂಬ್ ಸ್ಫೋಟ: ಒಬ್ಬ ವ್ಯಕ್ತಿಗೆ ಗಾಯ, ಮತ್ತೊಂದು ಸ್ಫೋಟದ ಶಂಕೆ
ತಿರುವನಂತಪುರಂ, ಜನವರಿ 13: ಕೇರಳದ ಕಣ್ಣೂರು ಜಿಲ್ಲೆಯ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳದಲ್ಲಿ ಇನ್ನೂ ಒಂದು ಬಾಂಬ್ ಇರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕಣ್ಣೂರು ಜಿಲ್ಲೆಯ ತಲಶ್ಶೇರಿ ಪೊಲೀಸ್ ಠಾಣೆ ವ್ಯಾಪ್ತಿಯ ತಲಶ್ಶೇರಿ ಲೋಟಸ್ ಟಾಕೀಸ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.
ಮತ್ತೊಂದು ಸ್ಪೋಟ ಸಾಧ್ಯತೆ
ಗಾಯಗೊಂಡವರನ್ನು ಜಿತಿನ್ ನಡಮ್ಮಾಲ್ ಎಂದು ಗುರುತಿಸಲಾಗಿದ್ದು, ಅವರನ್ನು ಮೊದಲು ಕಣ್ಣೂರಿನ ತಲಶ್ಶೇರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದರಿಂದ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

ಒಂದಕ್ಕಿಂತ ಹೆಚ್ಚು ಬಾಂಬ್‌ಗಳು ಸಿಡಿಯುವ ಸಾಧ್ಯತೆ ಇದ್ದು, ಶೀಘ್ರವೇ ಸ್ಪಷ್ಟನೆ ನೀಡಲಾಗುವುದು ಎಂದು ಕಣ್ಣೂರು ಕಮಿಷನರ್ ಅಜಿತ್ ಕುಮಾರ್ ತಿಳಿಸಿದ್ದಾರೆ.
'ಇದು ಸ್ಥಳೀಯವಾಗಿ ತಯಾರಿಸಲಾದ ಬಾಂಬ್ ಆಗಿದೆ. ಇದನ್ನು ಗಾಯಾಳು ಜಿತಿನ್ ಮನೆಯೊಳಗೆ ತಯಾರಿಸಿ ಸಂಗ್ರಹಿಸಿಟ್ಟಿದ್ದನು. ಅವನಿಗೆ ಈ ಅಭ್ಯಾಸವಿ. ಅದು ಹಿನ್ನೆಲೆಯೂ ಇದೇ ಆಗಿದೆ. ಬಾಂಬ್‌ಗಳು, ಶಾಖ ಮತ್ತು ದೀರ್ಘಾವಧಿಯ ಶೇಖರಣೆಯಿಂದಾಗಿ ಸಿಡಿದಿರಬಹುದು. ಆತ ಬಂಧನದಲ್ಲಿದ್ದಾನೆ. ಚೇತರಿಸಿಕೊಂಡ ನಂತರ ಅವರನ್ನು ಬಂಧಿಸಲಾಗುತ್ತದೆ. ಇದರಲ್ಲಿ ಯಾವುದೇ ರಾಜಕೀಯದ ವಾಸನೆ ಇಲ್ಲ' ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೇರಳದ ಕಣ್ಣೂರು ರಾಜಕೀಯ ಹತ್ಯೆಗಳಿಗೆ ಕುಖ್ಯಾತಿ ಪಡೆದಿದೆ. ಸಿಪಿಎಂ, ಕಾಂಗ್ರೆಸ್ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರ ನಡುವೆ ಸಂಘರ್ಷಗಳು ಉಂಟಾಗುತ್ತವೆ. ಕಳೆದ ವರ್ಷಗಳಿಂದ ಕೇರಳದ ಕಣ್ಣೂರಿನಲ್ಲಿ ಹಲವಾರ ರಾಜಕೀಯ ಹತ್ಯೆಗಳು ನಡೆದಿವೆ. ಮನೆಯಲ್ಲಿ ತಯಾರಿಸಿದ ನಾಡಬಾಂಬ್‌ಗಳನ್ನು ಅನೇಶ ಸಾರಿ ಇಲ್ಲಿ ಬಳಸಲಾಗಿದೆ. ಕಣ್ಣೂರು ಕೇರಳದ ಆರನೇ ಅತಿ ದೊಡ್ಡ ನಗರವಾಗಿದೆ.












Click it and Unblock the Notifications