ಯಾತ್ರಾರ್ಥಿಗಳ ಮೇಲೆ ದಾಳಿ: ಕಂಬನಿ ಮಿಡಿದ ಬಾಲಿವುಡ್, ಕ್ರಿಕೆಟ್ ಲೋಕ

Posted By:
Subscribe to Oneindia Kannada

ನವದೆಹಲಿ, ಜುಲೈ 10: ಅಮರ್ ನಾಥ್ ಯಾತ್ರಾರ್ಥಿಗಳ ಮೇಲೆ ನಡೆದ ಉಗ್ರರ ದಾಳಿ ಘಟನೆಯ ಬಗ್ಗೆ ಬಾಲಿವುಡ್ ಹಾಗೂ ಕ್ರಿಕೆಟ್ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ಈ ಬಗ್ಗೆ ಬೇಸರಿಸಿರುವ ಬಾಲಿವುಡ್ ನಟರಾದ ಅನುಪಮ್ ಖೇರ್, ನಾವು ಹೆಚ್ಚೆಚ್ಚು ರಾಜತಾಂತ್ರಿಕವಾಗಿ, ರಕ್ಷಣಾತ್ಮಕವಾಗಿ ಮಾತುಕತೆಗಳನ್ನು ನಡೆಸುವುದನ್ನು ಬಿಡಲು ಇದು ಸಕಾಲ. ಮುಗ್ಧ ನಾಗರಿಕರನ್ನು ಹತ್ಯೆ ಮಾಡಿದ ಉಗ್ರರನ್ನು ಸದೆ ಬಡಿಯಲು ಇಡೀ ಸೇನಾ ಬಲವನ್ನೇ ಬಳಸಬೇಕು ಎಂದಿದ್ದಾರೆ.

ದಾಳಿಕೋರರನ್ನು ಶೀಘ್ರದಲ್ಲೇ ಬಂಧಿಸುವೆವು: ಕಾಶ್ಮೀರ ಸಿಎಂ ಮುಫ್ತಿ

ಇನ್ನು, ಹಿರಿಯ ಪೋಷಕ ನಟ ಪರೇಶ್ರಾವಲ್, ಇಂದು ನನ್ನ ರೋಷ ಉಕ್ಕುತ್ತಿದೆ. ನಾನು ಬರ್ಕಾ ದತ್, ಶೇಖರ್, ರಾಜ್ ದೀಪ್ ಅವರುಗಳು ಏನು ಹೇಳುತ್ತಾರೋ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ನಾನು ಕೇಳುವುದಿಷ್ಟೇ, ನಮ್ಮ ಪಿಎಂ ಹಾಗೂ ಸರ್ಕಾರ ಏನಾದರೂ ಮಾಡಬೇಕು ಎಂಬುದು ಎಂದಿದ್ದಾರೆ.

ನಟ, ನಿರ್ದೇಶಕ ಫರ್ಹಾನ್ ಅಕ್ತರ್ ಅವರು, ''ಅಮರನಾಥ್ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿ ಖಂಡನೀಯ. ಈ ಕೃತ್ಯ ಮಾಡಿದವರಿಗೆ ನಾಚಿಕೆಯಾಗಬೇಕು. ಇಲ್ಲಿ ಮಡಿದವರಿಗೆ ನ್ಯಾಯ ತ್ವರಿತವಾಗಿ ಸಿಗಲೆಂದು ಆಶಿಸುತ್ತೇನೆ'' ಎಂದಿದ್ದಾರೆ.

ಅಮರ್ ನಾಥ್ ಯಾತ್ರಾರ್ಥಿಗಳ ಬಗ್ಗೆ ವಿಚಾರಿಸಲು ಹೆಲ್ಪ್ ಲೈನ್ ಸಂಖ್ಯೆಗಳು

ಇನ್ನು ಕ್ರಿಕೆಟ್ ವಲಯದಿಂದಲೂ ಈ ಬಗ್ಗೆ ಸಂತಾಪ, ಖಂಡನೆ ವ್ಯಕ್ತವಾಗಿವೆ.

ಯಾತ್ರಾರ್ಥಿಗಳ ಮೇಲಿನ ದಾಳಿಯನ್ನು ಖಂಡಿಸಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ''ಇದೊಂದು ಕೆಳದರ್ಜೆಯ ಕೃತ್ಯ. ಈ ಘಟನೆಯಲ್ಲಿ ಮಡಿದವರಿಗೆ ನನ್ನ ಸಾಂತ್ವನಗಳು ಸಲ್ಲುತ್ತವೆ'' ಎಂದಿದ್ದಾರೆ.

ಇನ್ನು, ಮೊಹಮ್ಮದ್ ಕೈಫ್ ಅವರು ಟ್ವೀಟ್ ಮಾಡಿ, ''ಯಾರ್ತಾರ್ಥಿಗಳ ಮೇಲೆ ದಾಳಿ ನಡೆಸಿರುವುದನ್ನು ಕೇಳಿ ದುಃಖವಾಗಿದೆ'' ಎಂದು ಹೇಳಿದ್ದಾರೆ.

ಅಮರ್ ನಾಥ್ ಯಾತ್ರಾರ್ಥಿಗಳ ಮೇಲೆ ದಾಳಿ ಖಂಡಿಸಿದ ಮೋದಿ, ಜೇಟ್ಲಿ

ರವೀಂದ್ರ ಜಡೇಡಾ ಅವರ ಟ್ವೀಟ್ ನಲ್ಲಿ ''ನಮ್ಮಲ್ಲಿರುವ ಶಸ್ತ್ರಾಸ್ತ್ರಗಳ ದಾಸ್ತಾನುಗಳು ಕೇವಲ ಗಣರಾಜ್ಯೋತ್ಸವ ದಿನದಂದು ತೋರಿಸಲು ಮಾತ್ರ ತಯಾರಿಸಲಾಗಿದೆಯೇ? ದಯವಿಟ್ಟು ಅವುಗಳನ್ನು ಜಿಹಾದಿಗಳು ನರಕಕ್ಕೆ ಹೋಗುವವರೆಗೂ ಪ್ರಯೋಗಿಸಿ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾತ್ರಾರ್ಥಿಗಳ ಮೇಲೆ ದಾಳಿ: ಕಂಬನಿ ಮಿಡಿದ ಬಾಲಿವುಡ್, ಕ್ರಿಕೆಟ್ ಲೋಕ

ಕ್ರಿಕೆಟ್ ನ ಖ್ಯಾತ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಅವರು, ತಮ್ಮ ಟ್ವೀಟ್ ನಲ್ಲಿ ''ಕೆಲ ವರ್ಷಗಳ ಹಿಂದೆ ನನ್ನ ತಾಯಿ ಕೂಡಾ ಅಮರ್ ನಾಥ ಯಾತ್ರೆಗೆ ಹೋಗಿದ್ದರು. ಅಂಥವರನ್ನು ಯಾತ್ರೆಗೆ ಕಳುಹಿಸಿದವರ ಮನೆಯಲ್ಲಿ ಎಂಥಾ ಆತಂಕವಿರುತ್ತದೆ ಎಂಬುದನ್ನು ಬಲ್ಲೆ. ಅದರಲ್ಲೂ ಇಂಥ ದಾಳಿಗಳಾದ ಯಾತ್ರಾರ್ಥಿಗಳ ಮನೆಯವರೆಲ್ಲರೂ ಎಷ್ಟು ತಲ್ಲಣಿಸುತ್ತಾರೆಂಬುದನ್ನೂ ನಾನು ಊಹಿಸಬಲ್ಲೆ. ಅಮಾಯಕರ ಮೇಲೆ ದಾಳಿ ಮಾಡುವುದು ಮನುಷ್ಯನ ಅಸ್ತಿತ್ವದ ಬಹು ಕೆಟ್ಟ ಚಾಳಿ'' ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Strong condolences from Bollywood and Cricket world have been poured in towards the victims and survivors in the attack on attack on pilgrims of Amarnath on July 10, 2017.
Please Wait while comments are loading...