Blood Moon 2025: ಆಕಾಶದಲ್ಲಿ ರಕ್ತಸಿಕ್ತ ಚಂದ್ರ, ಗ್ರಹಣ ವೀಕ್ಷಣೆ ಸಮಯ ಏನು?
ಚಂದ್ರಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ, ಆಕಾಶದಲ್ಲಿ ಮತ್ತೊಂದು ವಿಸ್ಮಯ ಘಟಿಸಲಿದೆ. ಹೀಗೆ ಮನುಷ್ಯರು ಎಂದಿಗೂ ಮರೆಯಲು ಆಗದ ಘಟನೆಗೆ ಇದೀಗ ವೇದಿಕೆ ಸಿದ್ಧವಾಗಿದ್ದು, ಕೋಟ್ಯಂತರ ಜನ ರಕ್ತಸಿಕ್ತ ಚಂದ್ರನ ಕಣ್ತುಂಬಿಕೊಳ್ಳಲು ಕಾಯುತ್ತಾ ಇದ್ದಾರೆ. ಅದರಲ್ಲೂ ಬಾಹ್ಯಾಕಾಶದಲ್ಲಿ ಈ ವಿಸ್ಮಯ ಕಂಡು ಪುಳಕಿತರಾಗಲು ವಿಜ್ಞಾನಿಗಳು ಕೂಡ ತಮ್ಮ ದೂರದರ್ಶಕ ಸಿದ್ಧಮಾಡಿದ್ದಾರೆ. ಹಾಗಾದರೆ ಭಾರತದಲ್ಲಿ ಯಾವಾಗ ಘಟಿಸಲಿದೆ ಈ ಚಂದ್ರಗ್ರಹಣ?
ಅಂದಹಾಗೆ, ಇದೀಗ ಏಷ್ಯಾ ಮತ್ತು ಯೂರೋಪ್‌ನ ಲಕ್ಷಾಂತರ ಜನ ಕೆಂಪು ಚಂದ್ರನ ನೋಡಿ, ಆ ವಿಸ್ಮಯಕ್ಕೆ ಸಾಕ್ಷಿಯಾಗಲು ಕಾಯುತ್ತಿದ್ದಾರೆ. ಈ ಘಟನೆಯು ಸೆಪ್ಟೆಂಬರ್ 7 ಹಾಗೂ 8 ಅಂದರೆ, ಭಾನುವಾರ & ಸೋಮವಾರ ರಾತ್ರಿ ಸಂಭವಿಸಲಿದೆ. ಏಷ್ಯಾ, ಪಶ್ಚಿಮ ಆಸ್ಟ್ರೇಲಿಯಾ, ಯುರೋಪ್ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ಇದೀಗ ಕೆಂಪು ಚಂದ್ರನ ದರ್ಶನ ಆಗಲಿದೆಯಂತೆ. ಹಾಗಾದರೆ ಹೀಗೆ ಆಕಾಶದಲ್ಲಿ ರಕ್ತಸಿಕ್ತ ಚಂದ್ರನನ್ನ ನೋಡುವುದು ಯಾವ ಸಮಯದಲ್ಲಿ? ಭಾರತದಲ್ಲಿ ನಾವು ನೋಡುವುದು ಹೇಗೆ?

ಶತಮಾನದಲ್ಲಿ ಒಂದು ಬಾರಿ ಈ ವಿಸ್ಮಯ!
ಸೆಪ್ಟೆಂಬರ್ 7 ಭಾನುವಾರ ಬೆಳಗ್ಗೆ 2:41ಕ್ಕೆ ಚಂದ್ರಗ್ರಹಣ ತನ್ನ ಗರಿಷ್ಠ ಹಂತ ತಲುಪಿದೆ, ಅಂದರೆ ಇದೀಗ ಚಂದ್ರ ಸಂಪೂರ್ಣವಾಗಿ ನಮ್ಮ ಗ್ರಹ ಭೂಮಿಯ ನೆರಳಿನಲ್ಲಿ ಮುಳುಗಿ ತನ್ನ ಬಣವನ್ನು ಬದಲು ಮಾಡಿಕೊಂಡಿದೆ. 'ಟೋಟಾಲಿಟಿ' ಎಂದು ವೈಜ್ಞಾನಿಕ ಭಾಷೆಯಲ್ಲಿ ಕರೆಯುವ ಈ ಘಟನೆ ಈಗಾಗಲೇ ಸಂಭವಿಸಿದ್ದು, ಈ ಬಾರಿ ಆ ಹಂತ 82 ನಿಮಿಷಗಳ ಕಾಲ ಮುಂದುವರಿದು ಭೂಮಿಯ ಮೇಲೆ ನೋಡುವವರ ಕಣ್ಣಿಗೆ ಹಬ್ಬ ತರಿಸಿದೆ. ಅದರಲ್ಲೂ ಶತಮಾನದಲ್ಲಿ ಒಂದು ಬಾರಿ ಇಂತಹ ಚಂದ್ರಗ್ರಹಣ ಸಂಭವಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.












Click it and Unblock the Notifications