ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣ: ಈಗಿನ ಪಟ್ಟಿಯಲ್ಲಿ ಶೇ. 1ರಷ್ಟೂ ಹೆಸರಿಲ್ಲ...!

By Kiran B Hegde
|
Google Oneindia Kannada News

ಪ್ಯಾರಿಸ್, ನ. 21: ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಹೊಂದಿರುವ ವ್ಯಕ್ತಿಗಳ ಪಟ್ಟಿ ಭಾರತ ಸರ್ಕಾರದ ಕೈಲಿದ್ದರೂ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎನ್ನುತ್ತಿದೆ. ಕೆಲವರ ಹೆಸರು ಬಹಿರಂಗಗೊಳಿಸಿದ್ದರೂ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿಲ್ಲ.

ಈ ಮಧ್ಯೆ ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ಸಂಖ್ಯೆ ಈಗ ತಿಳಿದುಕೊಂಡಿರುವುದಕ್ಕಿಂತ ದುಪ್ಪಟ್ಟಾಗಿದೆ. ಭಾರತಕ್ಕೆ ಗೊತ್ತಿರುವುದು ಶೇ. 1ಕ್ಕಿಂತ ಕಡಿಮೆ. ಭಾರತ ಬಯಸಿದರೆ ಉಳಿದವರ ಹೆಸರನ್ನೂ ನೀಡಲು ಸಿದ್ಧ ಎಂದು ಜಿನೇವಾ ಎಚ್ಎಸ್‌ಬಿಸಿ ಬ್ಯಾಂಕ್ ಮಾಜಿ ಉದ್ಯೋಗಿ ಹೆರ್ವ್ ಫಾಲ್ಸಿಯಾನಿ ತಿಳಿಸಿದ್ದಾರೆ. [ಕಪ್ಪು ಹಣ ಖಾತೆದಾರರ ಹೆಸರು ಬಹಿರಂಗ]

ಅವರ ಹೇಳಿಕೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿರುವ ಕಪ್ಪು ಹಣ ಮಾಲೀಕರಿಗೆ ದಿಗಿಲು ಬಡಿಸಿದೆ. ಈಗ ಭಾರತದ ಹತ್ತಿರ ಕೆಲವೇ ಸಾವಿರದಷ್ಟು ಕಪ್ಪು ಹಣ ಮಾಲೀಕರ ಪಟ್ಟಿಯಿದೆ. ಆದರೆ, ನರ್ವ್ ಫಾಲ್ಸಿಯಾನಿ ಹೇಳಿಕೆ ಗಮನಿಸಿದರೆ ಪಟ್ಟಿಯಲ್ಲಿರುವ ಹೆಸರು ಹಾಗೂ ಅದರ ಮೊತ್ತ ನಿರೀಕ್ಷೆಗೆ ನಿಲುಕದಷ್ಟಿದೆ ಎನ್ನಲಾಗಿದೆ. [ವಿದೇಶಿ ಬ್ಯಾಂಕ್ ನಲ್ಲಿ ಕಪ್ಪು ಹಣ]

blackmoney

ಫಾನ್ಸ್‌ನಲ್ಲಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಫಾಲ್ಸಿಯಾನಿ, ನಾನು ಅಂದು ಬಿಡುಗಡೆ ಮಾಡಿದ್ದ ಹೆಸರು ಸಮುದ್ರದಲ್ಲಿ ಒಂದು ಹನಿ ಇದ್ದಂತೆ. ನನ್ನ ಹತ್ತಿರ 200 ಜಿಬಿಗಳಷ್ಟು ದತ್ತಾಂಶವಿದೆ. ಅದರಲ್ಲಿ ಕೇವಲ 2 ಎಂಬಿ ದತ್ತಾಂಶವಷ್ಟೇ ಬಿಡುಗಡೆ ಮಾಡಿದ್ದೇನೆ. ಒಂದು ವೇಳೆ ಭಾರತ ಕಪ್ಪು ಹಣ ಹೊಂದಿರುವವರ ಕುರಿತು ಇನ್ನಷ್ಟು ಮಾಹಿತಿ ಬಯಸಿದರೆ ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. [ಲಕೋಟೆ ಒಡೆಯುವ ಅಧಿಕಾರ ವಿಶೇಷ ತಂಡಕ್ಕೆ]

ಹೆರ್ವ್ ಫಾಲ್ಸಿಯಾನಿ ಅವರು ಜಿನೇವಾದ ಎಚ್ಎಸ್‌ಬಿಸಿ ಬ್ಯಾಂಕ್‌ನಲ್ಲಿ ಸಿಸ್ಟಂ ಇಂಜಿನಿಯರ್ ಆಗಿದ್ದ ಫಾಲ್ಸಿಯಾನಿ, ಬ್ಯಾಂಕ್‌ನ ಖಾತೆದಾರರ ವಿವರವನ್ನು ಹೊತ್ತೊಯ್ದಿದ್ದರು. 180 ಶತಕೋಟಿ ಯುರೋ (ಒಂದು ಯೂರೋ ಸುಮಾರು 77 ರೂ.ಗೆ ಸಮ) ಮೌಲ್ಯದ 1.27 ಲಕ್ಷ ಖಾತೆಗಳ ವಿವರಗಳನ್ನು ಹೆರ್ವ್ ಕದ್ದೊಯ್ದಿದ್ದಾರೆ ಎನ್ನಲಾಗಿದೆ. [ಮಾಹಿತಿ ಹಂಚಿಕೆಗೆ ಸ್ವಿಸ್ ಒಪ್ಪಿಗೆ]

ಮೊದಲು ತಲೆ ಮರೆಸಿಕೊಂಡಿದ್ದರೂ ನಂತರ ಬಂಧನಕ್ಕೊಳಗಾಗಿದ್ದರು. ಅವರ ಮೇಲೆ ವಿವಿಧ ಪ್ರಕರಣಗಳನ್ನು ದಾಖಲಿಸಿದರೂ ಹೆದರದ ಹಹೆರ್ವ್ ಫಾಲ್ಸಿಯಾನಿ ವಿವಿಧ ದೇಶಗಳಿಗೆ ಕಪ್ಪು ಹಣ ಮಾಲೀಕರ ಕುರಿತು ವಿವರಣೆ ನೀಡುತ್ತಿದ್ದಾರೆ.

English summary
Former employ of Genava HSBC bank Herve Falciani told that India has less than 1 percent of the black money information from the original data. If India wants all names I am ready to give.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X