Get Updates
Get notified of breaking news, exclusive insights, and must-see stories!

500 ಬಿಲಿಯನ್ ಡಾಲರ್ ಕಪ್ಪು ಹಣ ತರೋದು ಹೇಗೆ?

ನವದೆಹಲಿ, ಫೆ. 10: ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಿದ್ದಾರೆ. ವಿದೇಶಿ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಕಪ್ಪು ಹಣದ ಮೊತ್ತ 500 ಬಿಲಿಯನ್ ಡಾಲರ್‌ (ಸುಮಾರು 310 ಲಕ್ಷ ಕೋಟಿ ರು.) ಗಿಂತ ಹೆಚ್ಚು ಎಂಬುದು ಕೆಲವರ ಅಭಿಪ್ರಾಯ.

ಇವುಗಳನ್ನು ವಾಪಸ್ ತರಲು ಭಾರತ ಸರ್ಕಾರ ಮಾಡಬೇಕಾದ್ದೇನು? ಅಲ್ಲದೆ, ಭಾರತದಿಂದ ಹೊರಗೆ ಸಾಗಿಸಿರುವ ಹಲವು ಲಕ್ಷ ಕೋಟಿ ಡಾಲರ್‌ ಮೊತ್ತದ ರತ್ನಗಳು, ವಜ್ರಗಳು ಮತ್ತು ಚಿನ್ನವನ್ನೂ ವಾಪಸ್ ತರಲು ಸಾಧ್ಯವೇ?

ಈ ಕುರಿತು ಬೆಂಗಳೂರಿನ ಐಐಎಮ್‌ನಲ್ಲಿ ಫೈನಾನ್ಸ್‌ ಪ್ರೊ. ಆಗಿರುವ ಡಾ. ಆರ್. ವೈದ್ಯನಾಥನ್ ಅವರು 'ಒನ್ಇಂಡಿಯಾ ಕನ್ನಡ'ದ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಕಪ್ಪು ಹಣವನ್ನು ವಾಪಸ್ ತರಲು ಕೇಂದ್ರ ಸರ್ಕಾರ ಮುಂದಿನ ಕೆಲವು ದಿನಗಳಲ್ಲಿ ಸುಗ್ರೀವಾಜ್ಞೆಯನ್ನೇ ಹೊರಡಿಸಬೇಕಾಗಿದೆ. [ಸ್ವಿಸ್ ಲೀಕ್ ಪಟ್ಟಿಯಲ್ಲಿರುವ 100 ವಂಚಕರು]

money

ನಮ್ಮಲ್ಲಿ ದತ್ತಾಂಶ ಮತ್ತು ಮೊತ್ತವಿದೆ. ಕಪ್ಪು ಹಣದ ಕುರಿತು ಮುಂದೆ ಕೈಗೊಳ್ಳಬೇಕಾದ ಕ್ರಮವೇನು?

ಈ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಇದು ಸುಸಂದರ್ಭ. ಈ ಸುಗ್ರೀವಾಜ್ಞೆಯನ್ನು ಸಂಸತ್ತಿನ ಎರಡೂ ಮನೆಗಳೂ ಒಪ್ಪಿಕೊಳ್ಳಬೇಕು. ಅದನ್ನು ರಾಷ್ಟ್ರಪತಿಗಳು ಒಪ್ಪಿದ ತಕ್ಷಣ ಕಪ್ಪು ಹಣ ವಾಪಸ್ ತರಲು ಉಪಯೋಗಿಸಬೇಕು. [ಕಪ್ಪು ಹಣದ ಟೈಲ್ ಲೈನ್]

ಭಾರತ ಒಮ್ಮೆ ಸುಗ್ರೀವಾಜ್ಞೆಯನ್ನು ಹೊರಡಿಸಿದರೆ ಭಾರತೀಯರ ಕಪ್ಪು ಹಣ ಹೊಂದಿರುವ ದೇಶಗಳು ನಮ್ಮ ಕೋರಿಕೆಗೆ ಸ್ಪಂದಿಸಲೇಬೇಕಾಗುತ್ತದೆ.

ವಿದೇಶದಲ್ಲಿರುವ ಎಲ್ಲ ಹಣವೂ ಕಪ್ಪು ಹಣವಲ್ಲ ಎಂಬ ವಾದವಿದೆ. ಭಾರತದಿಂದ ಹೊರಗೊಯ್ದಿರುವ ಅವುಗಳನ್ನು ವಾಪಸ್ ತರುವುದು ಹೇಗೆ?

ಹೌದು, ವಿದೇಶದಲ್ಲಿರುವ ಎಲ್ಲವೂ ಕಪ್ಪು ಹಣವಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಮೊದಲು ಅಕ್ರಮವಾಗಿರಲಿ, ಸಕ್ರಮವಾಗಿರಲಿ ಎಲ್ಲ ಹಣವನ್ನೂ ವಾಪಸ್ ತರಬೇಕು. ವಾಪಸ್ ತಂದ ಮೇಲೆ ಅದು ಅಕ್ರಮವವೋ, ಸಕ್ರಮವೋ ಎಂಬುದನ್ನು ಸಾಬೀತು ಮಾಡಬಹುದು.

ಒಂದು ವೇಳೆ ಹಣವು ಸಕ್ರಮವೇ ಆಗಿದ್ದರೆ ಅದನ್ನು ಸಾಬೀತು ಮಾಡಲು ಒಂದು ದಿನ ಸಾಕು. ಇದಕ್ಕೆ ಯಾರೂ ಮುಂದೆ ಬರದಿದ್ದರೆ ಆಗ ಸರ್ಕಾರ ಎಲ್ಲ ಹಣವನ್ನೂ ವಶಪಡಿಸಿಕೊಳ್ಳಬೇಕು.

ಅನಿವಾಸಿ ಭಾರತೀಯರು ಇಟ್ಟಿರುವ ಹಣ ಏನು ಮಾಡಬಹುದು?

ಅನಿವಾಸಿ ಭಾರತೀಯರು ಇಟ್ಟಿರುವ ಎಲ್ಲ ಹಣವನ್ನೂ ಪರಾಮರ್ಶಿಸಬೇಕು. ಭಾರತೀಯರು ಜಗತ್ತಿನ ಎಲ್ಲಿಯೇ ಸಂಪಾದಿಸುತ್ತಿದ್ದರೂ ಭಾರತ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ದ್ವಿತೆರಿಗೆ ನೀತಿ ಒಪ್ಪಂದ ಹೊಂದಿರುವ ಎಲ್ಲ ದೇಶಗಳಲ್ಲಿಯೂ ಇದು ಸಾಧ್ಯ.

ಭಾರತೀಯ ಬ್ಯಾಂಕ್‌ಗಳಲ್ಲಿ ವಿದೇಶಿ ಕರೆನ್ಸಿ ಇಡುವುದನ್ನು ಪ್ರೋತ್ಸಾಹಿಸಬೇಕೆ?

ಹೌದು, ಇದನ್ನು ಪ್ರೋತ್ಸಾಹಿಸಬೇಕು. ಇದರಿಂದ ಹಣವು ಭಾರತದಲ್ಲಿಯೇ ಉಳಿಯುತ್ತದೆ ಹಾಗೂ ದೇಶದಿಂದಲೂ ಹೊರ ಹೋಗುವುದಿಲ್ಲ. ದೇಶದ ವಿದೇಶಿ ವಿನಿಮಯವೂ ಹಿಗ್ಗುತ್ತದೆ. [ಕಾನೂನು ಕ್ರಮವೇಕೆ ಸಾಧ್ಯವಿಲ್ಲ?]

ನಿಮ್ಮ ಅಂದಾಜಿನ ಪ್ರಕಾರ ವಿದೇಶದಲ್ಲಿರುವ ಭಾರತೀಯರ ಹಣದ ಮೊತ್ತವೆಷ್ಟು?

ನನ್ನ ಪ್ರಕಾರ ಕನಿಷ್ಠ 500 ಬಿಲಿಯನ್ ಅಮೆರಿಕನ್ ಡಾಲರ್‌ ಮೊತ್ತದಷ್ಟು ಹಣ ವಿದೇಶದಲ್ಲಿದೆ.

ಇದು ಕೇವಲ ಹಣದ ಮೊತ್ತವೇ? ಅಥವಾ ಬಚ್ಚಿಟ್ಟಿರುವ ಆಭರಣಗಲೂ ಸೇರಿವೆಯೇ?

ನೀವು ಹೇಳಿದ್ದು ಸರಿ. ನಾನು ಹೇಳಿದ ಅಂದಾಜು ಮೊತ್ತ ಕೇವಲ ಹಣದ್ದು. ಇದಲ್ಲದೆ, ಭಾರೀ ಪ್ರಮಾಣದ ವಜ್ರಗಳು, ಹವಳಗಳು ಹಾಗೂ ರತ್ನಗಳು ಕೂಡ ವಿದೇಶಿ ಬ್ಯಾಂಕ್‌ಗಳ ಸೇಫ್ ಲಾಕರ್‌ನಲ್ಲಿವೆ. ಇವುಗಳ ಮೊತ್ತವನ್ನು ಕೇವಲ ದೇವರು ಮಾತ್ರ ಲೆಕ್ಕ ಹಾಕಲು ಸಾಧ್ಯ. ಇದರ ಮೊತ್ತವೂ ಲಕ್ಷ ಕೋಟಿ ಡಾಲರ್‌ಗಳಷ್ಟಾಗಬಹುದು. [ಕಪ್ಪು ಹಣ ಹೊರಹೋಗೋದು ತಪ್ಪಿಸಿ]

ಹಲವು ರಾಜಮನೆತನದ ಸದಸ್ಯರು ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಿದೇಶಿ ಬ್ಯಾಂಕ್‌ಗಳ ಸೇಫ್ ಲಾಕರ್‌ನಲ್ಲಿಟ್ಟಿದ್ದಾರೆ. ಅವುಗಳನ್ನೂ ವಾಪಸ್ ತರಬೇಕಾಗಿದೆ.

ಕೇಂದ್ರ ಸರ್ಕಾರ ಕಪ್ಪು ಹಣದ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಬಲ್ಲದೇ?

ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಪ್ರತಿ ಭಾರತೀಯ ನಿರೀಕ್ಷಿಸುತ್ತಿರುವ ವಿವಾದವಿದು. ಆದ್ದರಿಂದ ಮುಂದಿನ ಕೆಲವು ತಿಂಗಳುಗಳಲ್ಲಿ ಸುಗ್ರಾವಾಜ್ಞೆ ಹೊರಬರುತ್ತದೆ ಎಂದು ನಾನು ನಿರೀಕ್ಷಿಸಿದ್ದೇನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+