ಗುಜರಾತಿನಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ: ಅಮಿತ್ ಶಾ

Posted By:
Subscribe to Oneindia Kannada

ಅಹಮದಾಬಾದ್, ನವೆಂಬರ್ 15: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ನೆಟ್ವರ್ಕ್ 18 ನಡೆಸಿದ ಏಜೆಂಡಾ ಗುಜರಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬಗ್ಗೆ ಗುಜರಾತಿನ ವ್ಯಾಪಾರಿಗಳು ಆಶಾವಾದಿಗಳಾಗಿದ್ದಾರೆ. ಅವರಿಗೆ ಇದು ವರದಾನವಾಗಿ ಪರಿಣಮಿಸಿದ್ದು, ಇದರ ಪರಿಣಾಮ ಚುನಾವಣೆ ಫಲಿತಾಂಶದಲ್ಲಿ ಕಾಣಬಹುದು ಎಂದರು.

BJP will win Gujarat polls with over 150 seats: Amit Shah

ಸೌರಾಷ್ಟ್ರ ಹಾಗೂ ಕಛ್ ಭಾಗದಲ್ಲಿ ಇದ್ದ ನೀರಿನ ಸಮಸ್ಯೆಗೆ ಬಿಜೆಪಿ ಪರಿಹಾರ ನೀಡಿದೆ. ಪ್ರತಿ ಗ್ರಾಮದಲ್ಲೂ ವಿದ್ಯುತ್ ಪೂರೈಕೆ ಆಗಿದ್ದು, ಗುಜರಾತ್ ರಾಜ್ಯ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.

ಸಾಮಾಜಿಕ ಜಾಲ ತಾಣಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಟ್ರಾಫಿಕ್ ಎಲ್ಲಿಂದ ಹೆಚ್ಚಾಗಿದೆ, ಕಝಕಿಸ್ತಾನದಿಂದ ಬಂದಿದ್ಯಾ ಹಿಟ್ಸ್ ಎಂದು ವ್ಯಂಗ್ಯವಾಡಿದರು.

ಗುಜರಾತಿನಲ್ಲಿ ಡಿಸೆಂಬರ್ 09 ಹಾಗೂ ಡಿಸೆಂಬರ್ 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರ ಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bharatiya Janata Party will win the upcoming Gujarat Assembly Elections with over 150 seats to its name, party president Amit Shah said at Agenda Gujarat Event. Gujarat will head to polls in two phases on December 9 and December 14 and reuslts will be declared on December 18.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ