ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ಹಕ್ಕುಚ್ಯುತಿ ಮಂಡನೆ

ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಪರ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಅಪ್ಪುಗೆ, ಕಣ್ ಮಿಟುಕಿನಿಂದ ಎಲ್ಲರ ಗಮನ ಸೆಳೆದಿದ್ದಲ್ಲದೆ, ರಫೇಲ್ ಒಪ್ಪಂದ ಬಗ್ಗೆ ಮಾತನಾಡಿದರು.

ರಫೇಲ್​ ಯುದ್ಧ ವಿಮಾನ ಖರೀದಿಯಲ್ಲಿ ಅಪಾರ ಪ್ರಮಾಣದ ಅವ್ಯವಹಾರವಾಗಿದೆ ಎಂದು ರಾಹುಲ್​ ಆರೋಪಿಸಿದರು. ರಕ್ಷಣಾ ಸಚಿವಾಲಯದಿಂದ ರಹಸ್ಯ ಒಪ್ಪಂದವಾಗಿದೆ, ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮಕ್ರಾನ್ ಅವರು ಖುದ್ದು ನನಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು. ಈ ಬಗ್ಗೆ ಸದನದಲ್ಲಿ ಭಾರಿ ಗದ್ದಲ ಉಂಟಾಗಿದೆ.

BJP to move Privilege Motion against Rahul Gandhi : Ananth Kumar

ರಾಹುಲ್ ಗಾಂಧಿ ಭಾಷಣದ ಬಗ್ಗೆ ಆಕ್ಷೇಪವೆತ್ತಿದ್ದ ಸಂಸದ ಅನಂತಕುಮಾರ್ 353 ನಿಯಮದ ಪ್ರಕಾರ ಮುಂಚಿತವಾಗಿ ಅನುಮತಿ ಇಲ್ಲದೆ, ಮೋದಿ ವಿರುದ್ಧ ವಾಕ್ ಪ್ರಹಾರ ನಡೆಸಲಾಗುತ್ತಿದೆ ಎಂದರು ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರ ನಡುವೆ ಮಾತಿನ ಚಕಮಕಿ ನಡೆಯಿತು.

'ಸದನದಲ್ಲಿ ತಪ್ಪು ಮಾಹಿತಿ ನೀಡಿ, ಸದನದ ನಿಯಮಗಳನ್ನು ಮುರಿದಿದ್ದಲ್ಲದೆ, ಸುಗಮ ಕಲಾಪಕ್ಕೆ ಅಡ್ಡಿ ಪಡಿಸಿದ ರಾಹುಲ್ ಗಾಂಧಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇವೆ' ಎಂದು ಸಂಸದ ಅನಂತಕುಮಾರ್ ಹೇಳಿದರು.

ಸದನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಫೆಲ್ ಒಪ್ಪಂದ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ : 2008ರಲ್ಲಿ ಫ್ರಾನ್ಸ್ ಜತೆ ಆದ ಒಪ್ಪಂದದಲ್ಲೆ ರಫೆಲ್ ಬಗ್ಗೆ ಉಲ್ಲೇಖವಿದೆ, ಯಾವುದೇ ರಹಸ್ಯ ಇದರಲ್ಲಿ ಇಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+