ಸಾರ್ವಜನಿಕ ಸಭೆಗಳಲ್ಲಿ ಮೋದಿ ಅದೇ ರಾಗ ಅದೇ ಹಾಡು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಗವಹಿಸುವ ಸಾರ್ವಜನಿಕ ಸಭೆಗಳಲ್ಲಿ ಜನಗಳ ಕೊರತೆ ಕಾಣಿಸುವುದಿಲ್ಲ. ಬಿಜೆಪಿ ಪ್ರಾಭಲ್ಯವಿರದ ದೇಶದ ಯಾವುದೇ ಭಾಗಗಳಲ್ಲಿ ಮೋದಿ ಸಭೆ ನಡೆದರೂ ಜನರು ಪ್ರವಾಹೋಪಾದಿಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಕ್ಕೂ ಜನರು ಲಕ್ಷೋಪಾದಿ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಅವರೊಬ್ಬ ಪ್ರಚಂಡ ವಾಗ್ಮಿ, ಆದರೆ ಅವರ ಸಭೆಗೆ ಹಾಜರಾಗುವ ಒಟ್ಟು ಜನರ ಶೇ.10ರಷ್ಟು ಅದು ಮತವಾಗಿ ಪರಿವರ್ತನೆಯಾಗುತ್ತಿರಲಿಲ್ಲ. ನರೇಂದ್ರ ಮೋದಿದ್ದೂ ಇದೇ ಕೇಸು ಎಂದು ಮಾಜಿ ಪ್ರಧಾನಿ ದೇವೇಗೌಡ ವ್ಯಂಗ್ಯವಾಡಿದ್ದರು. (ಮೋದಿ ಹುಬ್ಬಳ್ಳಿ ಸಮಾವೇಶದಲ್ಲಿ ಹೇಳಿದ್ದೇನು)
ಭಾಷಣದ ಮೊದಲು 'ಭೋಲೋ ಭಾರತ್ ಮಾತಾ ಕೀ ಜೈ' ಮತ್ತು ಭಾಷಣದ ಕೊನೆಗೆ 'ವಂದೇ ಮಾತರಂ' ಘೋಷಣೆ ಕೂಗುವ ಮೂಲಕ ಪ್ರಮುಖವಾಗಿ ಯುವಕರನ್ನು ಆಕರ್ಷಿಸುತ್ತಿರುವ ಮೋದಿ ಭಾಷಣಕ್ಕೆ ಜನರು ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆಂದರೆ ತಪ್ಪಾಗಲಾರದು.
ಸಲ್ಮಾನ್ ಖುರ್ಷಿದ್ ಅವರ 'ನಪುಂಸಕ' ಹೇಳಿಕೆಯ ನಂತರ ನಡೆದ ಗುಲ್ಬರ್ಗ ಮತ್ತು ಹುಬ್ಬಳ್ಳಿ ಸಾರ್ವಜನಿಕ ಸಭೆಯಲ್ಲಿ ಆ ಹೇಳಿಕೆಯ ಬಗ್ಗೆ ಚಕಾರ ಎತ್ತದೇ ಎಂದಿನಂತೆ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಮೋದಿ ಗಂಭೀರ ಮತ್ತು ಚಾಣಾಕ್ಷ ರಾಜಕೀಯ ನಡೆಯಿಟ್ಟಿದ್ದಾರೆ. (ಮೋದಿ ನಪುಂಸಕ: ಸಲ್ಮಾನ್ ಹೇಳಿಕೆಗೆ ವ್ಯಾಪಕ ವಿರೋಧ)
ಇತ್ತೀಚಿನ ಸಾರ್ವಜನಿಕ ಸಭೆಗಳಲ್ಲಿ ನರೇಂದ್ರ ಮೋದಿ ಹೆಚ್ಚಾಗಿ ಬಳಸುವ ಪದಗಳು.

ಮೋದಿ ಸಭೆಯಲ್ಲಿ ಬಳಸುವ ಪದಗಳು
ಅರವತ್ತು ವರ್ಷ ಕಾಂಗ್ರೆಸ್ಸಿಗೆ ಅಧಿಕಾರ ನೀಡಿದ್ದೀರಾ ನಮಗೆ ಅರವತ್ತು ತಿಂಗಳು ಕೊಟ್ಟು ನೋಡಿ..
ಬದಲಾವಣೆ ಯಾಕೆ ಸಾಧ್ಯವಿಲ್ಲ. ನೂರು ದಿನದಲ್ಲಿ ದೇಶದಲ್ಲಿ ಬದಲಾವಣೆ ತಂದು ತೋರಿಸುತ್ತೇವೆ..

ಬಡ್ಡಿ ಸಮೇತ ಹಿಂದಿರುಗಿಸುವ ಮಾತು
ಎಲ್ಲೆಲ್ಲಿ ನೋಡಿದರೂ ಕೇಸರಿಯೋ ಕೇಸರಿ. ನೀವು ನನ್ನ ಹೃದಯ ಗೆದ್ದಿದ್ದೀರಾ, ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ.
ರೈತರು ದೇಶದ ಬೆನ್ನೆಲುಬು, ನದಿ ಜೋಡಣೆಯ ಮೂಲಕ ದೇಶದ ಹೊಲ ಗದ್ದೆಗಳನ್ನು ಸಮೃದ್ದಿ ಮಾಡಿ ನಿಮ್ಮ ಜೇಬಿನಲ್ಲಿ ಲಕ್ಷ್ಮಿ ತುಂಬುವಂತೆ ಮಾಡುತ್ತೇನೆ.

ಇತಿಹಾಸ ಬರೆದ ಸಾರ್ವಜನಿಕ ಸಭೆ
ಈ ಸಾರ್ವಜನಿಕ ಸಭೆ ಹೊಸ ಇತಿಹಾಸವನ್ನು ಬರೆದಿದೆ. ಇದುವರೆಗಿನ ಯಾವುದೇ ಪಕ್ಷದ ಸಾರ್ವಜನಿಕ ಸಭೆಗೆ ಇಷ್ಟು ಅಗಾಧ ಪ್ರಮಾಣದಲ್ಲಿ ಜನ ಸೇರಿದ ಉದಾಹರಣೆ ಇಲ್ಲ. (ಎಲ್ಲಿ ಸಭೆ ನಡೆಸುತ್ತಾರೋ, ಅಲ್ಲಿ)

ಚಹಾ ಮಾರುವ ಹುಡುಗ
ಚಹಾ ಮಾರುವ ಹುಡುಗನಿಗೆ ಈ ರೀತಿಯ ಪ್ರೀತಿ ತೋರಿಸುತ್ತಿದ್ದೀರ. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಾಗದು. ನಿಮ್ಮ ದುಃಖ, ಸಂಕಷ್ಟಗಳಿಗೆ ನಿಮ್ಮ ಮನೆಯವನ ಹಾಗೆ ಸ್ಪಂಧಿಸುತ್ತೇನೆ.

ಕಾಂಗ್ರೆಸ್ ಪಾಪದ ಕೊಡ
ಕಾಂಗ್ರೆಸ್ ಪಾಪದ ಕೊಡ ತುಂಬಿದೆ ಮತ್ತು ಪಕ್ಷ ದಿವಾಳಿಯಾಗಿದೆ. ದೇಶವನ್ನು ದಿವಾಳಿ ಮಾಡಿದ್ದಕ್ಕಾಗಿ ಪಕ್ಷ ದಿವಾಳಿಯಾಗ ಬೇಕಾಯಿತು. ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ.
ನಾನು ನಿಮ್ಮ ನಂಬಿಗಸ್ಥ ಸೇವಕ. ಈ ಸೇವಕನಿಗೆ ನಿಮ್ಮನ್ನು ಕಾಯುವ ಅವಕಾಶ ಕೊಡಿ. ಈ ದೇಶವನ್ನು ಮತ್ತು ನನ್ನ ದೇಶದ ಜನತೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತೇನೆಂದು ನಿಮಗೆ ಮಾತು ಕೊಡುತ್ತೇನೆ.












Click it and Unblock the Notifications