ನಾಲ್ಕು ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಸಂಚು: ಕೆಸಿಆರ್ ಕಿಡಿ
ಹೈದರಾಬಾದ್, ನವೆಂಬರ್ 4: ಬಿಜೆಪಿ ರಾಜಕೀಯವನ್ನು ಹಾಳುಮಾಡುತ್ತಿದೆ. ನಾವು ಪ್ರಜಾಪ್ರಭುತ್ವವನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ಹಾಗೂ ನಾಗರಿಕ ಸಮುದಾಯವು ಕಾರ್ಯನಿರ್ವಹಿಬೇಕಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಕರೆ ನೀಡಿದರು.
ಕಳೆದ ವಾರ ಟಿಆರ್‌ಎಸ್ ಶಾಸಕರನ್ನು ಬಿಜೆಪಿಗೆ ಪಕ್ಷಾಂತರಗೊಳಿಸಲು ಪ್ರಯತ್ನಿಸಿದ ನಾಲ್ವರು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ. ತೆಲಂಗಾಣ ಸೇರಿ ರಾಜಸ್ಥಾನ, ದೆಹಲಿ, ಆಂಧ್ರ ಪ್ರದೇಶದಲ್ಲಿ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಸರ್ಕಾರ ಉರುಳಿಸುವಂತಹ ಹೇಯ ಕೃತ್ಯಗಳನ್ನು ತಡೆಯಬೇಕು. ಈ ಚಟುವಟಿಕೆಯಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಬೇಕು ಎಂದು ಕೆಸಿಆರ್ ಆಗ್ರಹಿಸಿದರು.
"ನಾನು ಪ್ರಾಣ ತ್ಯಾಗ ಮಾಡಲು ಸಿದ್ಧನಿದ್ದೇನೆ ಆದರೆ ಈ ವಿಷಯದಲ್ಲಿ ಮೌನವಾಗಿರುವುದಿಲ್ಲ" ಎಂದರು. ಇನ್ನೂ ನಾವು ಯಾರೂ ಸಾವಿರ ವರ್ಷ ಬದುಕುವುದಿಲ್ಲ. ನೀವು ಎರಡು ಬಾರಿ ಪ್ರಧಾನಿಯಾಗುವ ಅದೃಷ್ಟವಂತರು. ಆದರೆ ನೀವು ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರನ್ನು ಭ್ರಷ್ಟಗೊಳಿಸುತ್ತಿದ್ದೀರಿ. ಸರ್ಕಾರಗಳನ್ನು ಉರುಳಿಸುವ ಈ ಪ್ರಜಾಸತ್ತಾತ್ಮಕವಲ್ಲದ ಕೆಲಸಗಳಿಂದ ಏನು ಸಾಧಿಸಬಹುದು?, "ಎಂದು ಕೆಸಿಆರ್ ಪ್ರಶ್ನಿಸಿದರು.
ಇನ್ನೂ ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳ ಮೇಲೆ ಬೀಳುತ್ತಿರುವ ಹಣದುಬ್ಬರ, ನಿರುದ್ಯೋಗ ಮತ್ತು ಭಾರತದ ಸ್ಥಾನವನ್ನು ನಿಭಾಯಿಸುವ ಕಡೆ ಗಮನಹರಿಸುವಂತೆ ನಿಮ್ಮ ರಾಜಕೀಯ ಸಹೋದ್ಯೋಗಿಗೆ ಸಲಹೆ ನೀಡುತ್ತಿರಾ ಎಂದು ಕೆಸಿಆರ್ ಪ್ರಶ್ನಿಸಿದ್ದಾರೆ.

ಗುರುವಾರ ಸಂಜೆ ಮುನುಗೋಡು ಉಪಚುನಾವಣೆ ಮುಗಿದ ನಂತರ, ಕೆಸಿಆರ್ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಾಲ್ವರು ಟಿಆರ್‌ಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ನಾಯಕತ್ವವು ಹೈದರಾಬಾದ್‌ಗೆ ಕಳುಹಿಸಲಾಗಿದೆ ಎಂದು ಹೇಳಲಾದ ಇಬ್ಬರು ಮಧ್ಯವರ್ತಿಗಳ ಸಂವಾದದ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಿದರು.
ಇನ್ನೂ ಅಕ್ಟೋಬರ್ 26 ರಂದು ಹೈದರಾಬಾದ್ ಬಳಿಯ ಟಿಆರ್‌ಎಸ್ ಶಾಸಕ ರೋಹಿತ್ ರೆಡ್ಡಿ ಅವರ ಫಾರ್ಮ್ ಹೌಸ್‌ನಲ್ಲಿ ನಡೆದ ಚರ್ಚೆಯನ್ನು ಉಲ್ಲೇಖಿಸಿದ ಕೆಸಿಆರ್, ತೆಲಂಗಾಣ, ಆಂಧ್ರಪ್ರದೇಶ, ದೆಹಲಿ ಮತ್ತು ರಾಜಸ್ಥಾನದಲ್ಲಿ ಸರ್ಕಾರಗಳನ್ನು ಪದಚ್ಯುತಗೊಳಿಸುವ ಯೋಜನೆ ನಡೆಯುತ್ತಿದೆ ಎಂದು ಹೇಳಿದರು.
ಸೈಬರಾಬಾದ್ ಪೊಲೀಸರು ಕಳೆದ ವಾರ ರಾಮಚಂದ್ರ ಭಾರತಿ, ಡಿಪಿಎಸ್‌ಕೆವಿಎನ್ ಸಿಂಹಯಾಜಿ ಮತ್ತು ನಂದು ಕುಮಾರ್ ರವರನ್ನು ಫಾರ್ಮ್‌ಹೌಸ್‌ನಲ್ಲಿ ಬಂಧಿಸಿದ್ದರು.ರಹಸ್ಯ ಆಡಿಯೋ, ವೀಡಿಯೋ ರೆಕಾರ್ಡರ್ ಗಳನ್ನು ಸಂಗ್ರಹಿಸಿ ಸಾಕ್ಷ್ಯಗಳನ್ನು ತೆಲಂಗಾಣ ಹೈಕೋರ್ಟ್‌ಗೆ ಸಲ್ಲಿಸಲಾಯಿತು.
ಇದೀಗ ಈ ಸ್ಫೋಟಕ ವಿಡಿಯೋಗಳು ಮತ್ತು ಸಂಬಂಧಿತ ಮಾಹಿತಿಯನ್ನು ದೇಶದ ಎಲ್ಲಾ ನ್ಯಾಯಾಧೀಶರು, ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳ ಮುಖ್ಯಸ್ಥರು, ಮಾಧ್ಯಮ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳಿಗೆ ಕಳುಹಿಸುತ್ತಿದ್ದೇನೆ ಎಂದು ಕೆ ಚಂದ್ರ ಶೇಖರ್ ರಾವ್ ಹೇಳಿದರು.












Click it and Unblock the Notifications