ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್: '6 ಮಂದಿ ಸಚಿವರಿಗೆ ಈ ಬಾರಿ ಟಿಕೆಟ್ ಇಲ್ಲ'

By Mahesh
|
Google Oneindia Kannada News

ಅಹಮದಾಬಾದ್, ನವೆಂಬರ್ 17: ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಮೊದಲ ಸುತ್ತಿನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 89 ಅಭ್ಯರ್ಥಿಗಳ ಪೈಕಿ 70 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.

ಗುಜರಾತ್: 70 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಹೆಚ್ಚಿನ ಸ್ಥಾನಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿ.ಜೆ.ಪಿ. ಕಾರ್ಯತಂತ್ರ ರೂಪಿಸಿದೆ. ಇದರ ಭಾಗವಾಗಿ 6 ಸಚಿವರು, 35 ಶಾಸಕರಿಗೆ ಟಿಕೆಟ್ ನಿರಾಕರಿಸಲಾಗ್ತಿದೆ.

BJP Plans to Drop 35 MLAs, 6 Ministers as Candidates in Gujarat Polls

ಸತತ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿ.ಜೆ.ಪಿ. ಈ ಬಾರಿ ಹಾಲಿ 121 ಶಾಸಕರಲ್ಲಿ 35 ಮಂದಿಗೆ ಟಿಕೆಟ್ ನಿರಾಕರಿಸಲಿದೆ. ಜೊತೆಗೆ 6 ಮಂದಿ ಸಚಿವರಿಗೂ ಸ್ಪರ್ಧೆಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ.

ಗುಜರಾತ್ ನಲ್ಲಿ ಈ ಬಾರಿ ಚುನಾವಣೆ ಬಿ.ಜೆ.ಪಿ.ಗೆ ತ್ರಾಸದಾಯಕವಾಗಿದೆ. ಯುವ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಅಲೆ ಸವಾಲಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆ ಕಾರ್ಯತಂತ್ರ ಬದಲಿಸಿ ಹಾಲಿ ಸಚಿವರು, ಶಾಸಕರಲ್ಲಿ ಕೆಲವರನ್ನು ಕೈಬಿಟ್ಟು ಗೆಲ್ಲುವ ಮುಖಗಳಿಗೆ ಮಣೆ ಹಾಕಲು ತೀರ್ಮಾನಿಸಲಾಗಿದೆ.

ಜಿ.ಎಸ್.ಟಿ. ಬಳಿಕ ಮೊದಲ ಪ್ರಮುಖ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿರುವ ಬಿ.ಜೆ.ಪಿ. ಚುನಾವಣೆ ಗೆಲುವಿಗಾಗಿ ಈ ಕ್ರಮ ಕೈಗೊಂಡಿದೆ.

ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ನಮಗೆ ಬಹುಮತಕ್ಕಿಂತ ಒಟ್ಟು 182 ಸ್ಥಾನಗಳಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಗುರಿಯಾಗಿದೆ ಎಂದು ಹೇಳಿದ್ದಾರೆ. ಹಾಲಿ ಕೆಲ ಶಾಸಕರು, ಸಚಿವರಿಗೆ ಟಿಕೆಟ್ ನೀಡದಿರುವ ಕುರಿತಾಗಿ ಚರ್ಚೆ ನಡೆದಿದೆ. ಸೂಕ್ತ ಸಮಯದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಕೆ.ಪಿ. ನಡ್ಡಾ ತಿಳಿಸಿದ್ದಾರೆ.

English summary
The Bharatiya Janata Party (BJP) has decided to drop 35 MLAs and 6 ministers as candidates in the upcoming Gujarat Assembly Elections 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X