ಬಿಜೆಪಿ ಸಂಸದ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಹರಿದ್ವಾರ, ನವೆಂಬರ್ 10: ಉತ್ತರಾಖಂಡ ಬಿಜೆಪಿ ಸಂಸದ ಗರ್ವಾಲ್ ತಿರತ್ ಸಿಂಗ್ ರಾವತ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ, ಸಂಸದರಿಗೆ ಗಂಭೀರಗಾಯವಾಗಿರುವ ಘಟನೆ ಭೀಮಗಢದಲ್ಲಿ ನಡೆದಿದೆ.
ತಿರತ್ ಸಿಂಗ್ ಬೆಳಗಿನ ಜಾವ 4 ಗಂಟೆಗೆ ದೆಹಲಿಯಿಂದ ನಂದಾದೇವಿ ಎಸಿ ಸ್ಪೆಷಲ್ ಎಕ್ಸ್‌ಪ್ರೆಸ್‌ನಲ್ಲಿ ಹರಿದ್ವಾರಕ್ಕೆ ಬಂದು ಇಳಿದಿದ್ದರು. ಅಲ್ಲಿಂದ ಸುಮಾರು 7 ಗಂಟೆಯಷ್ಟೊತ್ತಿಗೆ ಅವರ ಕಾರಿನಲ್ಲಿ ಗನ್‌ಮ್ಯಾನ್ ಜೊತೆ ಸಂಚಾರ ಆರಂಭಿಸಿದ್ದರು.

ಹರಿದ್ವಾರ-ದೆಹಲಿ ರಾಷ್ಟ್ರೀಯ ಹೆದ್ದಾರಿ ಭೀಮಗಢದ ಬಳಿ ಸಂಭವಿಸಿದೆ. ಕಾರನ್ನು ತಿರುಗಿಸುವಾಗ ಅಪಘಾತಕ್ಕೀಡಾಗಿದೆ. ಹರಿದ್ವಾರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಇದೀಗ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗುತ್ತಿಗೆ ಸೇರಿದಂತೆ ಹಲವು ಕಡೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.












Click it and Unblock the Notifications