ಮತ್ತೆ ವಿವಾದದಲ್ಲಿ ಬಿಜೆಪಿ ಸಂಸದ: ರಾಹುಲ್ ಒಬ್ಬ ಹುಚ್ಚ!
ಇಟಾ (ಉ.ಪ್ರ), ಮೇ 2: ಕಪ್ಪುಹಣ, ಭೂಸ್ವಾಧೀನ ಮಸೂದೆ, ತನ್ನ ವಿದೇಶ ಪ್ರವಾಸ ಇದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಜುಗರಕ್ಕೀಡಾಗುತ್ತಿರುವುದು ಕೆಲವು ಸ್ವಪಕ್ಷೀಯ ಸಂಸದರ ಬೇಕಾಬಿಟ್ಟಿ ಹೇಳಿಕೆಯಿಂದ.
ಉತ್ತರಪ್ರದೇಶದ ಉನ್ನಾವ್ ಕ್ಷೇತ್ರದ ಸಂಸದ ಸಾಕ್ಷಿ ಮಹಾರಾಜ್ ಮತ್ತೊಮ್ಮೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಬೇಕಾಬಿಟ್ಟಿ ಹರಿಹಾಯ್ದಿದಿದ್ದಾರೆ. ರಾಹುಲ್ ಗಾಂಧಿಗೆ ತಲೆ ಸರಿಯಿಲ್ಲ, ಅವನೊಬ್ಬ ಹುಚ್ಚ ಎಂದು ಲೇವಡಿ ಮಾಡಿದ್ದಾರೆ.
ರಾಜಕೀಯದ ಗಂಧಗಾಳಿ ತಿಳಿಯದ ವ್ಯಕ್ತಿ ದೇಶದ ರೈತರ ಸಮಸ್ಯೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ, ನಿಜಕ್ಕೂ ರಾಹುಲ್‌ಗೆ ತಲೆ ಸರಿಯಿಲ್ಲ ಎಂದು ಸಾಕ್ಷಿ ಮಹಾರಾಜ್ ಇಟಾ ನಗರದಲ್ಲಿ ಶುಕ್ರವಾರ (ಮೇ 1) ವ್ಯಂಗ್ಯವಾಡಿದ್ದಾರೆ. (ನೇಪಾಳ ಭೂಕಂಪಕ್ಕೆ ರಾಹುಲ್ ಕೇದಾರ್ ಪ್ರವಾಸ ಕಾರಣ)
ರಾಹುಲ್ ಗಾಂಧಿಗೆ ಮೆಕ್ಕೆಜೋಳ ಮತ್ತು ಗೋಧಿಯ ವ್ಯತ್ಯಾಸ ತಿಳಿದಿಲ್ಲ. ಇವರು ದೇಶದ ರೈತನ ಬಗ್ಗೆ ಮಾತನಾಡದೇ ಇರುವುದು ಒಳ್ಳೆಯದು. ದ್ರೌಪದಿಯನ್ನು ವಸ್ತ್ರಾಪಹರಣದಿಂದ ಶ್ರೀಕೃಷ್ಣ ರಕ್ಷಿಸಿದಂತೆ, ಮೋದಿ ಸಕಾಲಕ್ಕೆ ನೇಪಾಳದ ರಕ್ಷಣೆಗೆ ಧಾವಿಸಿದ್ದಾರೆಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಇತ್ತೀಚೆಗೆ ಪಾದಯಾತ್ರೆಯ ಮೂಲಕ ಕೇದಾರನಾಥನ ದರುಶನ ಪಡೆದ ರಾಹುಲ್ ಗಾಂಧಿ, ಆ ಪವಿತ್ರ ದೇವಾಲಯಕ್ಕೆ ಹೋಗಿದ್ದೇ ಭೂಕಂಪಕ್ಕೆ ಕಾರಣ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದರು.
ರಾಹುಲ್ ಗಾಂಧಿಗೆ ದನದ ಮಾಂಸ ತಿನ್ನುವ ಅಭ್ಯಾಸವಿದೆ. ದನದ ಮಾಂಸ ತಿಂದು ಶುದ್ದೀಕರಣಗೊಳ್ಳದೇ ಕೇದಾರನಾಥಕ್ಕೆ ಭೇಟಿ ನೀಡಿದರೆ ಭೂಕಂಪವಾಗದೇ ಇನ್ನೇನು ಆಗುತ್ತೆ.
ನೇಪಾಳದ ಭೂಕಂಪಕ್ಕೆ ವೈಜ್ಞಾನಿಕ ಕಾರಣ ನೀಡುವ ಅವಶ್ಯಕತೆಯಿಲ್ಲ, ಇದಕ್ಕೆ ರಾಹುಲ್ ಗಾಂಧಿಯ ಕೇದಾರ ಪ್ರವಾಸವೇ ಕಾರಣ ಎಂದು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ರಾಹುಲ್ ಮನೆಬಿಟ್ಟು ಓಡಿಬಂದ ಹುಡುಗ: ರೈಲಿನ ಜನರಲ್ ಬೋಗಿಯಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ಅವರ ಭಾವಚಿತ್ರ ಬುಧವಾರದ ದಿನಪತ್ರಿಕೆಗಳಲ್ಲಿ ನೋಡಿದೆ.
'ಈ ಫೋಟೋದಲ್ಲಿ ರಾಹುಲ್ ಮನೆ ಬಿಟ್ಟು ಓಡಿ ಬಂದು ಹೆದರಿ ಕುಳಿತ ಹುಡುಗನಂತೆ ಕಾಣುತ್ತಿದ್ದಾರೆ', ಎಂದು ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಟ್ವಿಟರ್‌ನಲ್ಲಿ ಅಣಕವಾಡಿದ್ದಾರೆ.












Click it and Unblock the Notifications