Priyanka Gandhi: ಈ ಕಾರಣಕ್ಕೆ ಪ್ರಿಯಾಂಕಾ ಗಾಂಧಿ ಸೂಪರ್ ಎಂದ ಕಂಗನಾ ರನೌತ್!
ಸದಾ ಒಂದಿಲ್ಲೊಂದು ಕಾರಣದಿಂದ ವಿವಾದ ಸೃಷ್ಟಿ ಮಾಡಿಕೊಳ್ಳುವ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ ಅವರು ಇದೀಗ ಮತ್ತೊಂದು ವಿಷಯಕ್ಕೆ ಚರ್ಚೆಯಲಿದ್ದಾರೆ. ಕಂಗನಾ ಅವರ ಎಮರ್ಜೆನ್ಸಿ ಎನ್ನುವ ಸಿನಿಮಾ ಮಾಡಿದ್ದು, ಈ ಸಿನಿಮಾದ ಪ್ರಚಾರ ಕಾರ್ಯ ನಡೆದಿದೆ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಎಮರ್ಜೆನ್ಸಿ ಹೇರಿಕೆ ಮಾಡಿದ್ದರ ವಿಷಯವನ್ನ ಆಧರಿಸಿ ಇದೆ. ಈ ಸಿನಿಮಾದ ಪ್ರಚಾರ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಎಮರ್ಜೆನ್ಸಿ ಸಿನಿಮಾ ನೋಡುವ ವಿಷಯವಾಗಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಕಂಗನಾ ಅವರು ಮಾತನಾಡಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಪ್ರಿಯಾಂಕಾ ಗಾಂಧಿ ಬಗ್ಗೆ ಕಂಗನಾ ಹೇಳಿದ್ದೇನು. ಈ ಚರ್ಚೆಗೆ ಕಾರಣವೇನು ಎನ್ನುವ ವಿವರ ಇಲ್ಲಿದೆ.
ಕಂಗನಾ ನೇರ ನುಡಿ, ವಿವಾದ ಹಾಗೂ ಚರ್ಚೆಗಳಿಂದಲೇ ಹೆಚ್ಚು ಸುದ್ದಿಯಾಗುವುದು ಇದೆ. ಇದೀಗ ಎಮರ್ಜೆನ್ಸಿ ಸಿನಿಮಾ, ಇಂದಿರಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಕಂಗಾನ ಮಾತನಾಡಿದ್ದು. ವಿವಾದ, ಚರ್ಚೆ ಮತ್ತೆ ಅಚ್ಚರಿಗೂ ಕಾರಣವಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಅವರು ಎಮರ್ಜೆನ್ಸಿ ಸಿನಿಮಾದ ಬಗ್ಗೆ ಹಾಗೂ ಇಂದಿರಾ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕರ ಬಗ್ಗೆ ಮಾತನಾಡಿರೋದು ಭಾರೀ ಚರ್ಚೆ ಆಗ್ತಿದೆ.

ಪ್ರಿಯಾಂಕಾ ಗಾಂಧಿ ಸೂಪರ್
ಇನ್ನು ಕಂಗನಾ ಅವರು ಪ್ರಿಯಾಂಕಾ ಗಾಂಧಿ ಸೂಪರ್ ಅಂತ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ತುಂಬಾ ವಿನಯವಾಗಿ ನಡೆದುಕೊಳ್ತಾರೆ. ಆದರೆ ರಾಹುಲ್ ಗಾಂಧಿಗೆ ಸಭ್ಯತೆ ಎನ್ನುವುದೇ ಇಲ್ಲ ಎಂದಿದ್ದಾರೆ ಈಚೆಗೆ ಸಂಸತ್‌ನಲ್ಲಿ ಈ ಇಬ್ಬರು ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿರುವ ಬಗ್ಗೆ ಅವರು ಮಾತನಾಡಿದ್ದಾರೆ. ಪ್ರಿಯಾಂಕಾ ಅವರು ಸಖತ್ ಸೂಪರ್. ಅವರ ಅಣ್ಣನಿಗಿಂತ ಅವರು ವಿನಯವಾಗಿ ನಡೆದುಕೊಳ್ಳುತ್ತಾರೆ. ಪ್ರಿಯಾಂಕಾ ಮಾತು, ಕೂದಲು ಹಾಗೂ ಬಟ್ಟೆ ಎಷ್ಟೆ ಚೆಂದ ಗೊತ್ತಾ. ಅವರದ್ದು ಆಕರ್ಷಕ ವ್ಯಕ್ತಿತ್ವ ಸದಾ ನಗ್ತಾ ಇರ್ತಾರೆ ಎಂದು ಹೇಳುವ ಮೂಲಕ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ.
ಪ್ರಿಯಾಂಕಾ ಅವರು ತುಂಬಾ ಸುಂದರವಾಗಿದ್ದಾರೆ. ಪ್ರಭಾವಿ ಹಾಗೂ ಎತ್ತರದ ಸ್ಥಾನದಲ್ಲಿ ಇದ್ದಾರೆ ಎಂದೆಲ್ಲ ಕಂಗನಾ ಹೇಳಿದ್ದಾರೆ. ನಿಮ್ಮ ಅಜ್ಜಿ ಇಂದಿರಾಗಾಂಧಿ ಅವರ ಬಗ್ಗೆ ಸಿನಿಮಾ ಮಾಡಿದ್ದೇನೆ ಅಂತ ಅವರಿಗೆ ಹೇಳಿದ್ದೇನೆ. ಒಮ್ಮೆ ನೋಡಿ ಅಂತಲೂ ಮನವಿ ಮಾಡಿದ್ದೇನೆ ಅಂತ ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇಂದಿರಾ ಗಾಂಧಿ ಬಲಿಷ್ಠರಲ್ಲ: ಇನ್ನು ಇಂದಿರಾ ಗಾಂಧಿ ಬಲಿಷ್ಠರಲ್ಲ ಅಂತ ಮತ್ತೊಂದು ಹೇಳಿಕೆಯನ್ನು ಕೊಡುವ ಮೂಲಕ ಕಂಗನಾ ವಿವಾದವೊಂದನ್ನು ಮೈ ಮೇಲೆ ಎಳೆದಿಕೊಂಡಿರುವುದು ಸಹ ಇದೆ. ಅವರು ದುರ್ಬಲರಾಗಿದ್ದರು ಅಲ್ಲದೆ ಅವರ ಬಗ್ಗೆಯೇ ಅವರಿಗೆ ಸ್ಪಷ್ಟತೆ ಇರಲಿಲ್ಲ ಎಂದೂ ಕಂಗನಾ ಹೇಳಿದ್ದಾರೆ. ಈ ವಿಷಯಗಳು ನಾನು ನಡೆಸಿದ ಸಂಶೋಧನೆಯಿಂದ ಇದು ಗೊತ್ತಾಯ್ತು ಎಂದಿರುವ ಅವರು ಇಂದಿರಾ ಗಾಂಧಿ ಬಲಿಷ್ಠರೇನಾಗಿರಲಿಲ್ಲ ಎಂದಿದ್ದಾರೆ.

ಅರ್ಹ ನಿರ್ದೇಶಕರು ಇಲ್ಲ: ಈಚೆಗೆ ಇನ್ನೊಂದು ಹೇಳಿಕೆ ಕೊಟ್ಟಿರುವ ಕಂಗನಾ ನನ್ನ ಸಿನಿಮಾಗಳನ್ನು ಮಾಡೋಕೆ ದೇಶದಲ್ಲಿ ಅರ್ಹ ನಿರ್ದೇಶಕರು ಇಲ್ಲ ಅಂತಲೂ ಅವರು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಂಗನಾ ಅವರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡುತ್ತಿಲ್ಲ. ಈಗ ಎಮರ್ಜೆನ್ಸಿ ಯಾವ ರೀತಿ ಕ್ಲಿಕ್ ಆಗಲಿದೆ ಎನ್ನುವ ಕುತೂಹಲವಿದೆ.












Click it and Unblock the Notifications