ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಬಿಜೆಪಿ-ಎಲ್ಜೆಪಿ ಮೈತ್ರಿಯ ಮಾಯಾಜಾಲ

By Srinath
|
Google Oneindia Kannada News

ನವದೆಹಲಿ, ಮಾರ್ಚ್ 6: ಉತ್ತರ ಪ್ರದೇಶ ಮತ್ತು ಬಿಹಾರದ ಅಕ್ಕ-ಪಕ್ಕ ಲೋಕಸಭಾ ಕ್ಷೇತ್ರಗಳು ಕೇಂದ್ರ ಸರಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಉತ್ತರ ಭಾರತದ ಈ ಎರಡೂ ರಾಜ್ಯಗಳು ರಾಜಕೀಯವಾಗಿ ಅಷ್ಟೊಂದು ಪ್ರಮುಖ ಮತ್ತು ಬಲಾಢ್ಯ.

ಫೆಬ್ರವರಿ ದ್ವಿತೀಯ ಭಾಗದಲ್ಲಿ CNN-IBN-Lokniti-CSDS ನಡೆಸಿರುವ ಚುನಾವಣಾ ಸಮೀಕ್ಷೆಯ ಫಲಿತಾಂಶವು ಬಿಹಾರದ ಹಾಲಿ ರಾಜಕೀಯ ಪರಿಸ್ಥಿತಿ, ಮತದಾರನ ಮನಸ್ಥಿತಿ ಬಗ್ಗೆ ಒಂದಷ್ಟು ಬೆಳಕು ಚೆಲ್ಲಿದೆ.

BJP more impressive in Bihar than Uttar Pradesh: CNN-IBN-Lokniti-CSDS election tracker

ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವಂತೆಯೇ ಬಿಹಾರದಲ್ಲಿ ಇನ್ನೂ ಒಂದು ಕೈ ಹೆಚ್ಚಿನ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ. BJP-LJP ಮೈತ್ರಿಗೆ ನಮೋ ಎಂದಿರುವ ಮತದಾರ ಮೈತ್ರಿಗೆ 22-30 ಸ್ಥಾನಗಳನ್ನು ದಯಪಾಲಿಸಿದ್ದಾನೆ. ಬಿಹಾರದಲ್ಲಿ ಒಟ್ಟು 40 ಲೋಕಸಭಾ ಸ್ಥಾನಗಳಿವೆ.

ಸಮೀಕ್ಷೆಯ ಪ್ರಕಾರ, ಆಡಳಿತಾರೂಢ JDU ಪ್ರಧಾನಿ ಅಭ್ಯರ್ಥಿಯನ್ನು ಹೊಂದಿದ್ದರೂ ನಾಲ್ಕೆಂಟು ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ಯವಾಗಲಿದೆ. ಇನ್ನು ಲಾಲು ಅಧಿಪತ್ಯದ RJD 2-6 ಸೀಟು ಗೆಲ್ಲಬಹುದು. ಇದರ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ಸು ಸಹ ಅಷ್ಟೇ. (ಸಿ ವೋಟರ್ ಚುನಾವಣಾ ಸಮೀಕ್ಷೆ ನಂಬಿಕಾರ್ಹವೇ?)

ಬಿಹಾರದಲ್ಲಿ BJP ಶೇ. 38ರಷ್ಟು ಓಟು ಗಳಿಸುವ ಸಾಧ್ಯತೆಯಿದೆ. ಅದೇ 2009ರ ಚುನಾವಣೆಯಲ್ಲಿ ಪಕ್ಷವು ಶೇ. 12 ರಷ್ಟು ಓಟು ಮಾತ್ರವೇ ಗಳಿಸಿತ್ತು. 2013ರಲ್ಲಿ ಬಿಜೆಪಿ ಜತೆಗಿನ ಸಂಬಂಧವನ್ನು ಕಡಿದುಕೊಂಡ ನಿತೀಶ್ ಕುಮಾರ್ ನೇತೃತ್ವದ JDU, ಶೇ. 20ರಷ್ಟು ಮತ ಗಳಿಸುವ ಲಕ್ಷಣಗಳಿವೆ.

ಮೇಲ್ವರ್ಗದ ಮತಗಳು (ಶೇ. 76ರಷ್ಟು) ಬಿಜೆಪಿ ಬುಟ್ಟಿಯಲ್ಲಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಇನ್ನು ಮುಸ್ಲಿಂ ಮತ್ತು ದಲಿತರ ಮತಗಳು ಎಲ್ಲ ಪಕ್ಷಗಳ ಮಧ್ಯೆ ಹಂಚಿಹೋಗಿದೆ.

ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಗೆ ಬಿಹಾರದಲ್ಲಿ ಶೇ. 41 ಮಂದಿ ಜಯಕಾರ ಹಾಕಿದ್ದಾರೆ. ನಂತರದ ದೂರದ ಸ್ಥಾನದಲ್ಲಿ ನಿತೀಶ್ ಕುಮಾರ್ ಶೇ. 14ರಷ್ಟು ಮತಗಳೊಂದಿಗೆ ಪೈಪೋಟಿ ನೀಡಿದ್ದಾರೆ. ತೃತೀಯ ರಂಗ ಗೆದ್ದು ಬಂದರೆ ನಿತೀಶ್ ಕುಮಾರ್ ಅವರೇ ಪ್ರಧಾನ ಮಂತ್ರಿಯಾಗಲಿ ಎಂದು ಬಹಳಷ್ಟು ಮತದಾರರು ಹೇಳಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಿ ಶೇ. 10ರಷ್ಟು ಮತ ಗಳಿಸಿದ್ದಾರೆ. ಹಾಗೆಯೇ, ಪ್ರಧಾನಿ ಅಭ್ಯರ್ಥಿಯಾಗಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲಾ ಅವರು ಶೇ. 3 ರಷ್ಟು ಮಂದಿ ಜೈ ಎಂದಿದ್ದಾರೆ.

ಅಂದಹಾಗೆ, ಫೆಬ್ರವರಿ 17 ರಿಂದ 23ರವರೆಗೆ ಬಿಹಾರದ ಲೋಕಸಭಾ ಕ್ಷೇತ್ರಗಳಲ್ಲಿ CNN-IBN-Lokniti-CSDS ನಡೆಸಿದ ಸಮೀಕ್ಷೆಯ ಫಲಿತಾಂಶ ಇದು. ಬಿಹಾರದಲ್ಲಿ ಲೋಕಸಭಾ ಚುನಾವಣಾ ದಿನಾಂಕಗಳು ಹೀಗಿವೆ : ಏಪ್ರಿಲ್ 10, 17, 24, 30 ಮತ್ತು ಮೇ 7, 12

English summary
Lok Sabha election 2014: According to CNN-IBN-Lokniti-CSDS election tracker BJP show in Bihar is more impressive than Uttar Pradesh . The BJP is likely to garner 38 per cent votes in a multi corner contest. the BJP will win 22-30 seats in the state which has 40 Lok Sabha constituencies. The ruling JDU is projected to get just 4-8 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X